Chikkanna : ಒಳ್ಳೆ ದಿನಗಳು ಬಂದಿದೆ ಅಪ್ಪನ್ನ ಚೆನ್ನಾಗಿ ನೋಡಿಕೊಳ್ಳೋಣ ಅಂದಿದ್ದ ಚಿಕ್ಕಣ್ಣ : ಆದರೆ ಅಪ್ಪನೇ ಉಳಿಯಲಿಲ್ಲ ಕಣ್ಣೀರಕಥೆ ನೋಡಿ

By Infoflick Correspondent

Updated:Sunday, May 22, 2022, 08:21[IST]

Chikkanna : ಒಳ್ಳೆ  ದಿನಗಳು ಬಂದಿದೆ ಅಪ್ಪನ್ನ ಚೆನ್ನಾಗಿ ನೋಡಿಕೊಳ್ಳೋಣ ಅಂದಿದ್ದ  ಚಿಕ್ಕಣ್ಣ :  ಆದರೆ ಅಪ್ಪನೇ ಉಳಿಯಲಿಲ್ಲ ಕಣ್ಣೀರಕಥೆ ನೋಡಿ

ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಕಾಮಿಡಿ ಕಲಾವಿದ ಚಿಕ್ಕಣ್ಣ. ಜೀವನದ್ಲಲಿ ಸಾಧನೆ ಮಾಡಬೇಕು ಅಂದರೆ ಕಷ್ಟ ಹಾಗು ಸವಾಲಿನ ಸಾಲುಗಳನ್ನು ದಾಟಿ ಮುಂದೆ ಬರಬೇಕು ಅಂತಹ ಕಷ್ಟದ ದಿನಗಳನ್ನು ಅನುಭವಿಸಿ ಬಂದಿರುವ ಚಿಕ್ಕಣ್ಣ ಅವರ ಜೀವನ ಕಥೆ ಹೇಗಿತ್ತು ಗೊತ್ತಾ ಯಾರಿಗೂ ಗೊತ್ತಿರದ ಹಲವು ಮಾಹಿತಿಗಳನ್ನು ಇಲ್ಲಿ ತಿಳಿಸುತ್ತೇವೆ ನೋಡಿ. ತಂದೆಯ ಬಗ್ಗೆ ಚಿಕ್ಕಣ್ಣ ಹೇಳಿದ ಅಂತರಾಳದ ಮಾತು ಇಲ್ಲಿದೆ. ಚಿಕ್ಕಣ್ಣ ಹುಟ್ಟಿದು ಮೈಸೂರಿನ ಬಲ್ಲ ಹಳ್ಳಿಯಲ್ಲಿ ಒಬ್ಬ ಬಡ ಕುಟುಂಬದಲ್ಲಿ. ಚಿಕ್ಕಣ್ಣ ತಂದೆ ಬೈರೇಗೌಡ ತಾಯಿ ನಿಂಗಮ್ಮ. ಚಿಕ್ಕಣ್ಣ ಬಾಲ್ಯದಲ್ಲೇ ಹೆಚ್ಚು ಬಡತನ ಅನುಭವಿಸಿ ಶಾಲೆಗೆ ಹೋಗಲು ಕಷ್ಟ ಪಡುತಿದ್ದರು.  ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಹತ್ತನೇ ತರಗತಿ ಮುಗಿಸಿದ ಚಿಕ್ಕಣ್ಣ ಮುಂದೆ ಕಾಲೇಜಿಗೆ ಹೋಗಲಿಲ್ಲ ಯಾಕೆ ಅಂದರೆ ಅವರ ಬಳಿ ಯಾವುದೇ ರೀತಿಯಾದ ಹಣ ಇರಲಿಲ್ಲ ಹಾಗಾಗಿ ಚಿಕ್ಕಣ್ಣ ಗಾರೆ ಕೆಲ್ಸಕ್ಕೆ ಹೋಗಿ ತಮ್ಮ ಜೀವನ ಮುಂದುವರಿಸಿದರು.  

ಮೈಸೂರಿನಲ್ಲಿ ನಾಟಕ ಕಂಪನಿ ಸೇರಿಕೊಂಡು ನಾಟಕ ಮಾಡಲು ತಮ್ಮ ಜೀವನ ಮುಂದುವರಿಸುತ್ತಾರೆ ಹಾಗೆ ನಾಟಕ ಮಾಡುತಿದ್ದ ಚಿಕ್ಕಣ್ಣ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿ ಷೋ ನಲ್ಲಿ ಭಾಗವಹಿಸದರು. ನಾಟಕದ ವ್ಯಾಮೋಹದಿಂದ, ಚಿಕ್ಕಣ್ಣನಿಗೆ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂಬ ಹಠಕ್ಕೆ ಬಿದ್ದು ಬೆಂಗಳೂರಿಗೆ ಬರ್ತಾರೆ. ಯಾರ ಪರಿಚಯವೇ ಇಲ್ಲದ ಈ ದೊಡ್ಡ ನಗರದಲ್ಲಿ ಪಬ್ಲಿಕ್ ಟಾಯ್ಲೆಟ್​ನಲ್ಲಿ ಸ್ನಾನ ಮಾಡಿಕೊಂಡು ರಾತ್ರಿಯೆಲ್ಲಾ ಮೆಜೆಸ್ಟಿಕ್ ಸುತ್ತಮುತ್ತ ಓಡಾಡಿಕೊಂಡಿದ್ದ ಚಿಕ್ಕಣ್ಣನಿಗೆ ಅದೃಷ್ಟ ಒಲಿದು ಬರುತ್ತೆ. 

ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ, ಚಿಕ್ಕಣ್ಣ ಕಾಮಿಡಿ ನಿರೂಪಣೆ ಶೈಲಿ ನೋಡಿ ಖುಷಿಪಟ್ಟ ಯಶ್ ತಮ್ಮ ಕಿರಾತಕ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ಅವಕಾಶ ನೀಡುತ್ತಾರೆ. ಕಿರಾತಕ ಚಿತ್ರದ ಬಳಿಕ, ಯಶ್ ಜೊತೆ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಾರೆ, ಅದುವೇ ರಾಜಾಹುಲಿ. ಈ ಚಿತ್ರದಲ್ಲಿ ಯಶ್ ಮತ್ತು ಚಿಕ್ಕಣ್ಣ ಕಾಂಬಿನೇಶನ್ ಸುಪರ್ ಹಿಟ್ ಈ ಎರಡು ಸಿನಿಮಾಗಳ ಯಶಸ್ಸಿನ ನಂತರ ಲಕ್ಕಿ, ಬುಲ್ ಬುಲ್, ರನ್ನ, ಅಧ್ಯಕ್ಷ, ಮಾಸ್ಟರ್ ಪೀಸ್, ವಿಕ್ಟರಿ, ರಥಾವರ, ವಜ್ರಕಾಯ, ದೊಡ್ಮನೆ ಹುಡ್ಗ, ರಾಜಕುಮಾರ, ಮಫ್ತಿ, ರಾಬರ್ಟ್, ರ್ಯಾಂಬೋ 2, ಕೃಷ್ಣ ಟಾಕೀಸ್, ಫ್ರೆಂಚ್ ಬಿರಿಯಾನಿ ಸೇರಿದಂತೆ ಬರೋಬ್ಬರಿ 85ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಚಿಕ್ಕಣ್ಣ ತಮ್ಮ ಕಾಮಿಡಿಯಿಂದ ಪ್ರೇಕ್ಷಕರನ್ನ ರಂಜಿಸಿದ್ದಾರೆ. ಯಶ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ದರ್ಶನ್, ಸುದೀಪ್, ಧ್ರುವ ಸರ್ಜಾ, ಶ್ರೀಮುರಳಿ, ಶರಣ್ ಸೇರಿದಂತೆ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಚಿಕ್ಕಣ್ಣ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ‌.  

ಕಷ್ಟದಿಂದ ನಿಧಾನವಾಗಿ ಸುಖದತ್ತ ಚಿಕ್ಕಣ್ಣ ಜೀವನ ವಾಲುತ್ತಿರುವಾಗ ತಂದೆ ತಾಯಿಯನ್ನು ಸುಖದಿಂದ ನೋಡಿಕೊಳ್ಳಬೇಕು ಎಂದು ಅಂದುಕೊಳ್ಳುವಾಗ ಚಿಕ್ಕಣ್ಣ ತಂದೆಗೆ ಆಕ್ಸಿಡೆಂಟ್ ಆಗುತ್ತದೆ. ಸಿನಿಮಾದ ಶೂಟಿಂಗ್ ನಡೆಯುವಾಗ ತಂದೆ ಬದುಕುವುದು ಅಸಾಧ್ಯ ಎಂದು ಡಾಕ್ಟರ್ ಯಿಂದ ಕರೆ ಬರುತ್ತದೆ. ಕಾಕತಾಳಿಯ ಎಂದರೆ ಅವರು ಅಭಿನಯಿಸುತ್ತಿರುವ ಸೀನ್ ಕೂಡ ಅದೇ ಆಗಿರುತ್ತದೆ. ಎಷ್ಟು ದುಡ್ಡುಕೊಟ್ಟರೆ ಏನು ತಂದೆ ಮುಖ್ಯ ಎಂಬ ಡೈಲಾಗ್ ಹೇಳುವಾಗ ಬಿಕ್ಕಿ ಬಿಕ್ಕಿ ಅಳುತ್ತಾರೆ. ಕಲಾವಿದನಾಗಿ ಶೂಟಿಂಗ್ ತಪ್ಪಿಸದೇ ಶೂಟಿಂಗ್ ಮುಗಿಸಿ ಮಗನಾಗಿ ತಂದೆಯನ್ನು ರಕ್ಷಿಸಿಕೊಳ್ಳುಲು ಪ್ರಯತ್ನಪಟ್ಟು ತಂದೆಯನ್ನು ಉಳಿಸಿಕೊಳ್ಳುತ್ತಾರೆ. ನಂತರ ತಂದೆಯನ್ನು ಸುಖವಾಗಿ ನೋಡಿಕೊಳ್ಳುತ್ತಾರೆ. ಆದರೆ ಒಂದು ವರ್ಷದ ನಂತರ ಚಿಕ್ಕಣ್ಣ ತಂದೆ ಹೃದಯಾಘಾತದಲ್ಲಿ ನಿಧನರಾಗುತ್ತಾರೆ.