Chikkanna : ಹಿಟ್ಲರ್ ಕಲ್ಯಾಣ ಖ್ಯಾತಿಯ ನಟಿ ಇದೀಗ ಚಿಕ್ಕಣ್ಣನ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿ ; ಯಾರದು ನೋಡಿ
Updated:Friday, June 17, 2022, 20:17[IST]

ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ, ಕಾಮಿಡಿ ನಟ ಚಿಕ್ಕಣ್ಣ ಅವರು ಇದೀಗ ಮೊಟ್ಟಮೊದಲ ಬಾರಿಗೆ ಸಿನಿಮಾ ನಾಯಕನಟನಾಗಿ ತೆರೆಮೇಲೆ ಬರುತ್ತಿದ್ದಾರೆ. ಹೌದು ನಟ ಚಿಕ್ಕಣ್ಣ ಅವರು ಮುಂಚೆ ಕಾಮಿಡಿ ಪಾತ್ರಗಳಲ್ಲಿ, ಪೋಷಕ ಪಾತ್ರಗಳಲ್ಲಿ ಸಹಾಯಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು. ಆದರೆ ಇದೇ ಮೊಟ್ಟಮೊದಲ ಬಾರಿಗೆ ಪೂರ್ತಿ ಪ್ರಮಾಣದ ನಾಯಕನ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರಂತೆ. ಚಿಕ್ಕಣ್ಣ ಅವರು ಹೆಚ್ಚು ಸಿನಿಮಾಗಳಲ್ಲಿ ಕಾಮಿಡಿ ಮೂಲಕವೇ ಹೆಚ್ಚು ಅಭಿಮಾನಿ ಬಳಗ ಗಿಟ್ಟಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಹೀಗಿರುವಾಗ ನಾಯಕ ನಟ ಆಗಿ ಬರುತ್ತಿರುವ ಹೊಸ ಸಿನಿಮಾದಲ್ಲಿ ಚಿಕ್ಕಣ್ಣ ಅವರ ಕಾಮಿಡಿ ಏನು ಕಡಿಮೆ ಇಲ್ಲ ಎನ್ನುವಂತೆ ಚಿತ್ರತಂಡ ಎಲ್ಲವನ್ನು ಇದೀಗ ಇಂದು ಹೇಳಿಕೊಂಡಿದೆ.
ಹೌದು ನಟ ಚಿಕ್ಕಣ್ಣ ಅವರ ಪ್ರೀತಿಯ ಪಾತ್ರ ಆಗಿದ್ದ ಅಧ್ಯಕ್ಷ ಸಿನಿಮಾದ ಉಪಾಧ್ಯಕ್ಷ ಪಾತ್ರ ಹೆಚ್ಚು ಗಮನ ಸೆಳೆದಿತ್ತು. ಹಾಗಾಗಿ ಈ ಉಪಾಧ್ಯಕ್ಷ ಎಂಬ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ನಟ ಚಿಕ್ಕಣ್ಣ ಈ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡಲಿದ್ದಾರೆ. ಈ ಮುಂಚೆ ಇದೇ ಉಪಾಧ್ಯಕ್ಷ ಸಿನಿಮಾ ವಿಚಾರವಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಚಿಕ್ಕಣ್ಣ ಹೇಳಿಕೊಂಡಿದ್ದರು.
ಅದು ಇಂದು ನೆರವೇರಿದೆ. ಸಿನಿಮಾದ ಮುಹೂರ್ತ ಕೂಡ ಇಂದು ನಡೆದಿದೆ. ಇಷ್ಟರಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು ನಾಯಕನಟ ಚಿಕ್ಕಣ್ಣ ಅವರಿಗೆ ನಾಯಕಿ ನಟಿಯಾಗಿ ಹಿಟ್ಲರ್ ಕಲ್ಯಾಣ ಸೀರಿಯಲ್ ಖ್ಯಾತಿಯ ಲೀಲಾ ಪಾತ್ರಧಾರಿ ನಟಿ ಮಲೈಕಾ ವಸುಪಾಲ್ ಅವರು ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ.
ಹೌದು ಇನ್ನೊಂದು ಕಡೆ ಸಿನಿಮಾಗೆ ನಿರ್ದೇಶಕರಾಗಿ ಅನಿಲ್ ಕುಮಾರ್ ಅವರು ನಿರ್ದೇಶನ ಮಾಡಲಿದ್ದು, ಈ ಚಿತ್ರದಲ್ಲಿ ಎಲ್ಲವೂ ಇರುತ್ತದೆ, ಪ್ರೇಕ್ಷಕರಿಗೆ ಮನರಂಜನೆ ನೀಡುವುದು ಪಕ್ಕಾ ಎಂದು ಚಿಕ್ಕಣ್ಣ ಹೇಳಿಕೊಂಡಿದ್ದಾರೆ. ಉಪಾಧ್ಯಕ್ಷಕ್ಕೆ ಉಮಾಪತಿ ಶ್ರೀನಿವಾಸ್ ಅವರೇ ನಿರ್ಮಾಪಕ ಆಗಿದ್ದಾರೆ. ಈ ಸಿನಿಮಾದಲ್ಲಿ ಸ್ಟಂಟ್, ಡ್ಯಾನ್ಸ್, ಹೀರೋಯಿಸಂ, ಹಾಗೆ ಫೈಟಿಂಗ್ ಮಾತ್ರವೇ ಇರುವುದಿಲ್ಲ. ಬದಲಿಗೆ ಚಿಕ್ಕಣ್ಣ ಅವರ ಕಾಮಿಡಿ ಜಲಕ್ ಸಹ ಇದ್ದೇ ಇರುತ್ತದೆ ಎಂದು ಚಿತ್ರತಂಡ ಇಂದು ಮಾಧ್ಯಮದ ಎದುರು ವಿಷಯ ಪ್ರಸ್ತಾಪಿಸಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಚಿಕ್ಕಣ್ಣ ಅವರು ಈ ಸಿನಿಮಾ ಸಿಕ್ಕಿದೆ ಎಂದು, ಕಾಮಿಡಿ ಪಾತ್ರ ಮಾಡುವುದನ್ನ ಬಿಡುತ್ತೇನೆ ಎಂದು ಹೇಳಲ್ಲ,, ಯಾವುದೇ ಪಾತ್ರ ಇದ್ದರೂ ನಾನು ನಟನೆ ಮಾಡುತ್ತೇನೆ ಎಂದು ಖುಷಿಯಲ್ಲಿಯೇ ಮಾತನಾಡಿರುವುದು ನಿಜಕ್ಕೂ ವಿಶೇಷ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಕಮೆಂಟ್ ಮಾಡಿ, ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...( video credit : news first kannada )