Chiranjeevi Sarja: ಚಿರಂಜೀವಿ ಸರ್ಜಾ ಹೃದಯಾಘಾತಕ್ಕೂ ಅವರ ಮಾವನ ಸಾವಿಗೂ ಏನಾದರೂ ನಂಟು ಇದೆಯಾ

By Infoflick Correspondent

Updated:Saturday, June 11, 2022, 12:00[IST]

Chiranjeevi Sarja:  ಚಿರಂಜೀವಿ ಸರ್ಜಾ ಹೃದಯಾಘಾತಕ್ಕೂ ಅವರ ಮಾವನ ಸಾವಿಗೂ ಏನಾದರೂ ನಂಟು ಇದೆಯಾ

ಕನ್ನಡ ಚಿತ್ರರಂಗದ ಯುವ ನಾಯಕ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ಆಗಿ ಮೊನ್ನೆಗೆ ಎರಡು ವರ್ಷ ಕಳೆದಿದೆ. ಹೌದು ಕುಟುಂಬಸ್ಥರು ಚಿರಂಜೀವಿ ಸರ್ಜಾ ಸಮಾಧಿ ಬಳಿಬಂದು ಚಿರಂಜೀವಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯ ನೆರವೇರಿಸಿದರು. ನಟ ಚಿರಂಜೀವಿ ಸರ್ಜಾ ಅವರು ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡದಿದ್ದರೂ, ಅಪಾರ ಅಭಿಮಾನಿ ಬಳಗ ಗಳಿಸಿಕೊಂಡವರು. ಸದಾ ಎಲ್ಲರೊಟ್ಟಿಗೆ ಪ್ರೀತಿಯಿಂದ ನಗುನಗುತ್ತ ಮಾತನಾಡಿಸುತ್ತಿದ್ದ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ಈಗಲೂ ನೋವು ನೀಡುತ್ತದೆ. ಅವರ ಅಗಲಿಕೆ ಎಂದಿಗೂ ಮರೆಯಲಾಗದ ಒಂದು ಕಹಿ ಘಟನೆ ಎಂದು ಹೇಳಬಹುದು.

ನಟ ಚಿರಂಜೀವಿ ಸರ್ಜಾ ಅವರು ನಟಿ ಮೇಘನಾ ರಾಜ್ ಅವರನ್ನು ಪ್ರೀತಿಸಿ ಮದುವೆಯಾದರು. ನಟ ಚಿರಂಜೀವಿ ಅಗಲಿಕೆಯಾದ ದಿನ ಮೇಘನಾ ರಾಜ್ ಅವರು ಗರ್ಭಿಣಿ ಇದ್ದಾರೆ ಎನ್ನುವ ವಿಷಯ ಹೊರಬೀಳುತ್ತಿದ್ದಂತೆ ಇಡೀ ಕನ್ನಡ ಜನತೆ ಕಣ್ಣೀರು ಸುರಿಸಿತು. ಒಂದು ಕಡೆ ಅಪ್ಪನ ಮುಖ ನೋಡದೆ ಭೂಮಿಗೆ ಬರುತ್ತಿರುವ ಕಂದ, ಇನ್ನೊಂದು ಕಡೆ ಮಗನ ಮುಖ ನೋಡದೆ ಭೂಮಿ ಸೇರಿದ ತಂದೆ ಇದನ್ನೆಲ್ಲಾ ನೋಡಿದ ಕನ್ನಡಿಗರು ಹಾಗೂ ಅವರ ಕುಟುಂಬದವರು ಅಭಿಮಾನಿಗಳು ಕಣ್ಣೀರು ಹಾಕುವಂತಾಗಿತ್ತು. ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು..  

ಅದು ಎಲ್ಲರಿಗೂ ಗೊತ್ತಿರುವ ವಿಚಾರ..ಚಿರಂಜೀವಿ ಸರ್ಜಾ ಹೃದಯಘಾತ ನೋಡಿದ ಕೆಲವರು ಬೇರೆ ಬೇರೆಯಾದ ರೀತಿಯಲ್ಲಿಯೇ ಕಾರಣಗಳನ್ನು ಹೇಳಿದ್ದುಂಟು.

ಅಸಲಿಗೆ ಚಿರಂಜೀವಿ ಅವರ ಹೃದಯಾಘಾತಕ್ಕೂ ಅವರ ಫ್ಯಾಮಿಲಿ ಹಿಸ್ಟರಿ ಗೂ ಏನಾದ್ರೂ ನಂಟು ಇದೆಯಾ ಎಂಬುದಾಗಿ ನೋಡಿದಾಗ, ಅವರ ಮಾವರಾದ ಅರ್ಜುನ್ ಸರ್ಜಾ ಅವರ ಅಣ್ಣ ಕಿಶೋರ್ ಸರ್ಜಾ ಅವರು ಕೂಡ 2009ರಲ್ಲಿ ಇದೆ ಹೃದಯಾಘಾತದಿಂದ ಸಾವನ್ನಪ್ಪಿದ್ದು ಎನ್ನಲಾಗಿದೆ. ಚಿರಂಜೀವಿ ಸರ್ಜಾ ಅವರ ಸಿನಿಮಾವಾದ ವಾಯುಪುತ್ರ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಇದೇ ಚಿರು ಮಾವ ಕಿಶೋರ್ ಸರ್ಜಾ ಅವರಂತೆ. ಆದರೆ ವಿಧಿಯಾಟ ಸಿನಿಮಾ ಬಿಡುಗಡೆಯಾಗುವ ಮುನ್ನ ಕಿಶೋರ್ ಅವರು ಇಹಲೋಕ ತ್ಯಜಿಸಿದರು. ನಟ ಚಿರಂಜೀವಿ ಸರ್ಜಾ ಅವರ ಹೃದಯಾಘಾತ ಮತ್ತು ಅವರ ಫ್ಯಾಮಿಲಿ ಹಿಸ್ಟರಿಗೂ ನಂಟು ಇದೆ ಎಂಬುದಾಗಿ ಈ ಮೂಲಕ ಕೇಳಿಬಂದಿದೆ.

ನೀವು ಕೂಡ ನಿಮ್ಮ ಫ್ಯಾಮಿಲಿಯಲ್ಲಿ ಆ ರೀತಿ ತೊಂದರೆ ಇರುವ ಘಟನೆಗಳು ಕಂಡಿದ್ದರೆ, ಆಗಾಗ ಹೃದಯ ತಪಾಸಣೆ ಮಾಡಿಸಿರಿ. ನಿಮ್ಮ ಹೃದಯದ ಬಗ್ಗೆ ಹೆಚ್ಚು ಕಾಳಜಿ ತೋರಿಸಿ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು....