Cini Shetty : ನಿಮ್ಮ ನೆಚ್ಚಿನ ನಟರು ಯಾರು ಎಂಬ ಪ್ರಶ್ನೆಗೆ ಇಲ್ಲಿದೆ ಮಿಸ್ ಇಂಡಿಯಾ ಸಿನಿ ಶೆಟ್ಟಿ ಶಾಂಕಿಂಗ್ ಉತ್ತರ

By Infoflick Correspondent

Updated:Sunday, July 31, 2022, 09:56[IST]

Cini Shetty : ನಿಮ್ಮ ನೆಚ್ಚಿನ ನಟರು ಯಾರು ಎಂಬ ಪ್ರಶ್ನೆಗೆ ಇಲ್ಲಿದೆ ಮಿಸ್ ಇಂಡಿಯಾ ಸಿನಿ ಶೆಟ್ಟಿ ಶಾಂಕಿಂಗ್ ಉತ್ತರ

ಕರ್ನಾಟಕ ಮೂಲದ ಮಾಡೆಲ್​ ಸಿನಿ ಶೆಟ್ಟಿ ಅವರು ಸಖತ್​ ಸುದ್ದಿಯಲ್ಲಿದ್ದಾರೆ. ಮಿಸ್​ ಇಂಡಿಯಾ 2022' ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಕರುನಾಡಿಗೆ ಹೆಮ್ಮೆ ತಂದಿದ್ದಾರೆ. ಇತ್ತೀಚೆಗೆ ಮಾಧ್ಯಮದ ಜೊತೆ ಮಾತನಾಡಿದ ಸಿನಿ ಶೆಟ್ಟಿಯವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಯಿತು. ಇವರ ಉತ್ತರ ಜನರ ಕುತೂಹಲವನ್ನು ತಣಿಸಿದೆ. ಫೇವರಿಟ್​ ನಟನ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ಅವರು ನೇರವಾಗಿ 'ಲೈಗರ್​' ಸಿನಿಮಾ ನಟ ವಿಜಯ್​ ದೇವರಕೊಂಡ ಹೆಸರನ್ನು ಹೇಳಿದ್ದಾರೆ. ಆ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.   

ಸಿನಿ ಶೆಟ್ಟಿ ಅವರಿಗೆ ವಿಜಯ್​ ದೇವರಕೊಂಡ ಎಂದರೆ ಸಖತ್​ ಇಷ್ಟವಂತೆ. ಒಂದು ವೇಳೆ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ ತುಂಬಾ ಖುಷಿ ಆಗುತ್ತದೆ ಎಂದು ಅವರು ಹೇಳಿದ್ದಾರೆ. ಸಿನಿ ಶೆಟ್ಟಿ ಅವರಿಗೆ ಬಾಲಿವುಡ್​ನಲ್ಲಿ ಶಾರುಖ್​ ಖಾನ್​ ಫೇವರಿಟ್​ ಹೀರೋ ಆಗಿದ್ದಾರೆ.

ಮಿಸ್​ ಇಂಡಿಯಾ ಗೆದ್ದ ಖುಷಿಯಲ್ಲಿ ಇರುವ ಸಿನಿ ಶೆಟ್ಟಿ ಅವರು ಈಗ 'ಮಿಸ್​ ವರ್ಲ್ಡ್​' ಕಿರೀಟದ ಮೇಲೆ ಕಣ್ಣಿಟ್ಟಿದ್ದಾರೆ. ಆ ಸ್ಪರ್ಧೆಗಾಗಿ ತಯಾರಿ ನಡೆಸುತ್ತಿದ್ದಾರೆ.