ದರ್ಶನ್ ನಾನು ಲೈಕ್ ಮಾಡೋದು ಇದೆ ಕಾರಣಕ್ಕೆಂದ ಸಿಎಂ ಬಸವರಾಜ್..! ಶಿಳ್ಳೆ ಹಾಕಿದ ಅಭಿಮಾನಿಗಳು

By Infoflick Correspondent

Updated:Friday, March 4, 2022, 14:16[IST]

ದರ್ಶನ್ ನಾನು ಲೈಕ್ ಮಾಡೋದು ಇದೆ ಕಾರಣಕ್ಕೆಂದ ಸಿಎಂ ಬಸವರಾಜ್..! ಶಿಳ್ಳೆ ಹಾಕಿದ ಅಭಿಮಾನಿಗಳು

ಸ್ಯಾಂಡಲ್ವುಡ್ನ ನಟ ದರ್ಶನ್  (Darshan) ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ನಟ ಡಿ ಬಾಸ್ ಈಗಾಗಲೇ ತಮ್ಮದೇ ಆದ ಅಭಿನಯದ ಮೂಲಕ ಅತಿದೊಡ್ಡ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದಾರೆ. ನಟ ದರ್ಶನ್ ಅವರು ಒಂದು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಅಂದರೆ ಸಾಕು ಅಲ್ಲಿ ಅವರ ಪ್ರೀತಿಯ ಅಭಿಮಾನಿಗಳು ಹಾಗೂ ಅಭಿಮಾನಿ ಬಳಗದ ಮಿತ್ರರು ಹೆಚ್ಚು ನೆರೆದಿರುತ್ತಾರೆ. ನಿನ್ನೆಯಷ್ಟೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai)  ಅವರು ಬಂದಿದ್ದರು. ನಟ ನಿರ್ದೇಶಕ ಹಾಗೆ ಚಿತ್ರದ ನಿರ್ಮಾಪಕ ಆಗಿರುವ ರಾಕ್ ಲೈನ್ ವೆಂಕಟೇಶ್ ಕೂಡ ಆಗಮಿಸಿದ್ದರು. 

ಡಿ ಬಾಸ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಟ ದರ್ಶನ್ ಅವರ ಬಗ್ಗೆ ಕೆಲವೊಂದಿಷ್ಟು ಹಿತನುಡಿಗಳನ್ನು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದು, ಇವತ್ತಿನ ಈ ಡಿಜಿಟಲ್ ಬಗ್ಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು ಇವತ್ತಿನ ಕಾಲ ತುಂಬಾ ಸ್ಪೀಡಾಗಿದೆ, ಏನು ಬೇಕಾದರೂ 4 ಡಿ ಯಲ್ಲಿ ತೋರಿಸಿ ಬಿಡುತ್ತಾರೆ ಎಂದರು. ಹಾಗೆ ದರ್ಶನ್ ಬಗ್ಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ನಮ್ಮ ಹವಾ ಹುಡುಗ ದರ್ಶನ್ ಎಂದರು. ಆಗ ನಟ ದರ್ಶನ್ ಅಭಿಮಾನಿಗಳು ಜೋರಾಗಿ ಶಿಳ್ಳೆ ಹಾಕಿದರು. ಆಗ ನಿಮಗಿಂತ ನನಗೆ ದರ್ಶನ್ ತುಂಬಾ ಚೆನ್ನಾಗಿ ಗೊತ್ತು. ಅವನನ್ನು ನಾನು ಯಾಕೆ ಅಷ್ಟು ಇಷ್ಟಪಡುತ್ತೇನೆ, ಯಾಕೆ ಮೆಚ್ಚಿಕೊಳ್ಳುತ್ತೇನೆ ಎಂದರೆ, ವೈಲ್ಡ್ ಲೈಫ್ ಫೋಟೋಗ್ರಫಿ ಹಾಗೂ ವೈಲ್ಡ್ ಲೈಫ್ ಫೋಟೋಗ್ರಫಿ ಬಗ್ಗೆ ಇರುವ ಕಾಳಜಿ ಗೋಸ್ಕರ ದರ್ಶನ್ ನ್ನ ತುಂಬಾ ಇಷ್ಟಪಡುತ್ತೇನೆ ಎಂದರು.   

ಹೌದು ಬಸವರಾಜ ಬೊಮ್ಮಾಯಿ ಅವರು ಹಾಗೆ ಮಾತು ಮುಂದುವರೆಸಿ, ಇವತ್ತಿನ ಡಿಜಿಟಲ್ ಹೇಗಿದೆ ಎಂದರೆ ದರ್ಶನ್ ಇಲ್ಲಿಗೆ ಬರಲಿಲ್ಲ ಅಂದ್ರೂ ಕೂಡ, ಬರುವಂತೆ ತೋರಿಸಬಹುದು ಅಷ್ಟರಮಟ್ಟಿಗೆ ಮುಂದುವರೆದಿದೆ ಈ ಡಿಜಿಟಲ್ ಎಂದರು. ನಟ ದರ್ಶನ್ ಅವರ ಬಗ್ಗೆ ಮೆಚ್ಚುಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...(Video credit ;Cine buzz)