ಕಾಫಿನಾಡು ಚಂದುಗೆ ಸ್ವಂತ ಊರಿನಲ್ಲೆ ಧಮಕಿ ! ಏನಂತೆ ಗೊತ್ತೆ

By Infoflick Correspondent

Updated:Tuesday, August 23, 2022, 15:29[IST]

ಕಾಫಿನಾಡು ಚಂದುಗೆ ಸ್ವಂತ ಊರಿನಲ್ಲೆ ಧಮಕಿ ! ಏನಂತೆ ಗೊತ್ತೆ

ಕಾಫಿ ನಾಡು ಚಂದು ಅಂದರೆ ಎಲ್ಲರಿಗೂ ಗೊತ್ತು.  ನಾನು ಶಿವಣ್ಣ, ಪುನೀತಣ್ಣ ಅಭಿಮಾನಿ ಎಂದು ವಿಡಿಯೋ ಪ್ರಾರಂಭಿಸಿ ಚಂದು ಹುಟ್ಟುಹಬ್ಬದ ಶುಭಾಶಯ ಕೋರುವ ಶೈಲಿ ಟ್ರೆಂಡ್​​ ಆಗಿದೆ. ಅನೇಕರು ಚಂದು ಬಳಿ ವಿಶ್ ಮಾಡಿಸಿಕೊಳ್ಳಲು ಕಾಯುತ್ತಿರುತ್ತಾರೆ.  ಅವರಿಗೆ ಎಲ್ಲೆಡೆ ಅಭಿಮಾನಿಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಇವರ ವಿಡಿಯೋ, ರೀಲ್ಸ್​ಗಳು ಜನರನ್ನು ರಂಜಿಸುತ್ತಿವೆ. 

ಚಂದು ಬಿಗ್ ಬಾಸ್ ಗೆ ಹೋಗಬೇಕು ಎಂಬ ಅಭಿಯಾನ ಪ್ರಾರಂಭವಾಗಿದೆ‌. ಕಾಫಿನೋಡು ಚಂದು ಎಂಬುದು ಈಗ  ಟ್ರೋಲರ್ ಗಳ ಆಹಾರವೂ ಆಗಿದೆ. ಇವರ ಮುಗ್ದತೆ  ಹಲವರಿಗೆ ಇಷ್ಟ. ಆದರೆ ಕಾಫಿ ನಾಡು ಚಂದು ತಮ್ಮ ಊರಿನಲ್ಲೇ ಧಮಕಿ ಹಾಕಿಸಿಕೊಂಡಿದ್ದಾರಂತೆ ! ನಡೆದ ನಿಜ ಘಟನೆ ಏನು ಗೊತ್ತೆ 

ಇತ್ತೀಚಿಗಷ್ಟೆ ಕಾಫಿನಾಡಿಲ್ಲೇ ಚಂದುಗೆ ಜನರು ಧಮಿಕಿ ಹಾಕಿದ್ದಾರೆ. ಹಾಡು ಹಗಲೇ ಅವರ ಮೇಲೆ ದಬ್ಬಾಳಿಯ ಮಾತು ಆಡಿದ್ದು ಹಾಡು ಹೇಳಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಆದರೆ ಚಂದು ಆಟೋ ಓಡಿಸಬೇಕು ಈಗ ಹಾಡಲ್ಲ 4 ಗಂಟೆ ಮೇಲೆ ಎನ್ನುತ್ತಾ ಮುಗ್ದವಾಗಿ ಅಲ್ಲಿಂದ ಹೊರಟರು. ಲೈವ್ ಗೆ ಹೋಗು ಈಗ. ನಾವು ನಿನ್ನ ಹತ್ರ ಅಪಾಯಂಟ್ ಮೇಂಟ್ ತೆಗೆದುಕೊಂಡಿ ಬರಬೇಕಾ ನಿನ್ನದು ಬಹಳ ಆಯತು. ನಿಮಗೆ ನಮ್ಮುರನವರು ಬೇಡವಾ ಎಂದು ಧಮಕಿ ಹಾಕುವ  ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಜನರ ಕಿರಿಕಿರಿಯಿಂದ ಇತ್ತೀಚಿಗೆ ಚಂದು  ನಾನು ಆಟೋ ಓಡಿಸಿ ಜೀವನ ನಡೆಸುತ್ತೇನೆ. ಜನ ಆಟೋ ಒಡಿಸಲು ಬಿಡದೆ ಹಾಡು ಹೇಳುವಂತೆ ಪೀಡಿಸುತ್ತಿದ್ದಾರೆ. ಎಂದು ನೋವು ತೊಡಿಕೊಂಡಿದ್ದರು. ಹಾಗಾಗಿ ಅಭಿಮಾನಿಗಳು ಈಗ ಕಾಫಿನಾಡು ಚಂದು ಅವರ ಪರಿಸ್ಥಿತಿಗೆ ಸಿಂಪತಿ ವ್ಯಕ್ತಪಡಿಸುತ್ತಿದ್ದಾರೆ.( VIDEO CREDIT : SUDDI MANE