ಗಲಾಟೆ ಮಾಡಿದವರಿಗೆ ಚಂದು ತಿಳಿ ಹೇಳಿದ್ದೇನು..? ಈ ವಿಡಿಯೋದಲ್ಲಿ ಬೇಜಾರಾಗಿ ಕಣ್ಣೀರಿಟ್ಟಿದ್ದೇಕೆ ಗೊತ್ತಾ..?

By Infoflick Correspondent

Updated:Wednesday, August 24, 2022, 15:55[IST]

ಗಲಾಟೆ ಮಾಡಿದವರಿಗೆ ಚಂದು ತಿಳಿ ಹೇಳಿದ್ದೇನು..? ಈ ವಿಡಿಯೋದಲ್ಲಿ ಬೇಜಾರಾಗಿ ಕಣ್ಣೀರಿಟ್ಟಿದ್ದೇಕೆ ಗೊತ್ತಾ..?

ಈ ಸೋಶಿಯಲ್ ಮೀಡಿಯಾ ಅಂದ್ರೆ ಹಾಗೇ ಯಾವಾಗ ಯಾರನ್ನ ಅದೆಷ್ಟು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಹೇಳಲಿಕ್ಕಾಗದು. ಅವರಲ್ಲಿರುವ ಚಾಣಾಕ್ಷತನ ನಟನೆ, ಅಥವಾ ಇನ್ಯಾವುದೋ ಒಂದು ಕಲೆಯ ಮೂಲಕ ಜನರ ಪ್ರೀತಿ ಗಳಿಸುತ್ತಾರೆ. ಹೆಚ್ಚು ಜನರ ಸ್ನೇಹ ಗಳಿಸುತ್ತಾರೆ. ಅದು ನಿಮಗೂ ಗೊತ್ತು. ಇತ್ತೀಚಿಗೆ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ ಕಾಫಿ ನಾಡು ಚಂದು ವಿಚಾರ ನಿಮಗೂ ಗೊತ್ತಿದೆ. ಹೌದು ಕಾಫಿ ನಾಡು ಚಂದು ಅವರದ್ದೆ ಆದ ಮಾತಿನ ಹಾಡು ಹೇಳುವ ಶೈಲಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕಾಫಿನಾಡು ಚಂದು ಅವರು ಬರ್ತಡೆ ವಿಷಸ್ ಹೇಳುವ ಮೂಲಕ ವಿಶಿಷ್ಟವಾಗಿ ಜನರಿಗೆ ಇಷ್ಟವಾಗಿದ್ದಾರೆ ಎಂದು ಹೇಳಬಹುದು. ಹೌದು ನಾನು ಪುನೀತ್ ಅಣ್ಣ ಶಿವಣ್ಣವರ ಅಭಿಮಾನಿ ಎಂದು ಮಾತು ಆರಂಭಿಸುವ ಕಾಫಿ ನಾಡು ಚಂದು ಇತ್ತೀಚಿಗೆ ಅನುಶ್ರೀ ಅವರ ಸಹಾಯದಿಂದ ಶಿವಣ್ಣ ಅವರನ್ನು ಜೀ ಕನ್ನಡದ ವೇದಿಕೆಯಲ್ಲಿ ಭೇಟಿಯಾದರು. 

ಇಷ್ಟೆಲ್ಲ ಪ್ರೀತಿ ಗಳಿಸಿ ಕರ್ನಾಟಕಕ್ಕೆ ಚಿರಪಚಿತ ಆಗಿರುವ ಕಾಫಿನಾಡು ಚಂದು ಅವರ ಮೇಲೆ ಚಿಕ್ಕಮಗಳೂರಿನ ಕೆಲ ಕಿಡಿಗೇಡಿಗಳು ಇತ್ತೀಚಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಹಾಗೆ ಕಾಫಿ ನಾಡು ಚಂದು ಅವರಿಗೆ ಬರ್ತಡೇ ವಿಡಿಯೋ ಮಾಡಿಕೊಡು, ಹಾಡು ಹೇಳೋ ಎಂದು ಆತನಿಗೆ ಕಾಟ ಕೊಟ್ಟಿದ್ದು, ಅದರ ವಿಡಿಯೋವನ್ನು ಈಗ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಕಾಫಿ ನಾಡು ಚಂದು ಒಬ್ಬ ಒಳ್ಳೆಯ ಮುಗ್ಧ ವ್ಯಕ್ತಿ. ಆತನು ಕೂಡ ಆಟೋವನ್ನು ಹೊಂದಿ ಆಟವನ್ನು ಓಡಿಸಿ ಜೀವನ ಮಾಡುತ್ತಿದ್ದಾನೆ. ನೀವು ಬೆಳಗ್ಗೆ ಬಂದು ನನಗೆ ಆ ರೀತಿ ಕಾಟ ಕೊಟ್ಟರೆ ನನಗೂ ಕುಟುಂಬ ಇದೆ, ಅವರಿಗೆ ದುಡ್ಡು ತೆಗೆದುಕೊಂಡು ಹೋಗಬೇಕು  ಒಂದೊಂದು ದಿನ ಬಾಡಿಗೆ ಹೊಡೆಯದೆ ಹೋದರೆ ನನಗೆ ಮಧ್ಯಾಹ್ನ ಊಟಕ್ಕೂ ಇರುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ ಕಾಫಿ ನಾಡು ಚಂದು.

ಹೌದು ಈ ಘಟನೆ ನೋಡಿದ ಕೆಲವರು ಕಾಫಿ ನಾಡು ಚಂದು ಅವರಿಗೆ ಸೂಕ್ತ ಸಲಹೆ ನೀಡಿದ್ದು, ಆ ರೀತಿ ವಿಡಿಯೋ ಮಾಡಿ ಕೊಡು ಎಂದು ಬರುವವರಿಗೆ ಒಂದು ವಿಡಿಯೋಗೆ ಒಂದು ಸಾವಿರ ಹಣ ಕೇಳಿ, ಅದರಲ್ಲಿ ತಪ್ಪೇನಿದೆ ಆಗ ಅವರೇ ಸುಮ್ಮನಾಗುತ್ತಾರೆ ಎಂದು ಸಲಹೆ ನೀಡಿದ್ದಾರೆ. ಆದರೆ ಕಿಡಿಗೇಡಿಗಳಿಗೆ ಹಲ್ಲೆ ಮಾಡಲು ಬಂದ ಹುಡುಗರಿಗೆ ಇದು ತಿಳಿ ಹೇಳಿರುವ ಕಾಫಿ ನಾಡು ಚಂದು ನಿಜಕ್ಕೂ ತುಂಬಾ ಅದ್ಭುತವಾಗಿ ಮಾತನಾಡಿದ್ದಾರೆ. ಅವರ ಕಷ್ಟವನ್ನು ವಿಡಿಯೋದಲ್ಲಿ ಹೇಳಿಕೊಂಡು, ಈ ರೀತಿ ಮಾತನಾಡಬೇಡಿ ನೀವು ಅರ್ಥೈಸಿಕೊಳ್ಳುತ್ತೀರಿ ಎಂದು ಮನವಿ ಮಾಡಿದ್ದಾರೆ. ಅಸಲಿಗೆ ಕಾಫಿ ನಾಡು ಚಂದು ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ. ಈ ರೀತಿ ಮುಂದೆ ಎಂದು ಅವರಿಗೆ ಕಷ್ಟಗಳನ್ನು ಕಾಟಗಳನ್ನು ಕೊಡಬೇಡಿ ಎಂದು ನೀವು ಕೂಡ ಕಮೆಂಟ್ ಮಾಡಿ, ಈ ವಿಡಿಯೋವನ್ನ ಶೇರ್ ಮಾಡಿ ಧನ್ಯವಾದಗಳು... ( VIDEO CREDIT : SRI VIJAYA )