Anushree : ಅನುಶ್ರೀ ಬಗ್ಗೆ ಹಾಡು ಹೇಳಿ ತಮ್ಮ ದೊಡ್ಡ ಬೇಡಿಕೆ ಇಟ್ಟ ಕಾಫಿ ನಾಡು ಚಂದು..! ಕೇಳಿದ್ದೆ ಬೇರೆ ನೋಡಿ..!

By Infoflick Correspondent

Updated:Sunday, August 7, 2022, 11:53[IST]

Anushree : ಅನುಶ್ರೀ ಬಗ್ಗೆ ಹಾಡು ಹೇಳಿ ತಮ್ಮ ದೊಡ್ಡ ಬೇಡಿಕೆ ಇಟ್ಟ ಕಾಫಿ ನಾಡು ಚಂದು..! ಕೇಳಿದ್ದೆ ಬೇರೆ ನೋಡಿ..!


ಕಲೆ ಎಂಬುದು ಯಾರ ಸ್ವತ್ತಲ್ಲ ಎಂಬುದಾಗಿ ಈಗಾಗಲೇ ಸಾಕಷ್ಟು ಜನರು ನಿರೂಪಿಸಿದ್ದಾರೆ. ಹೌದು ಒಬ್ಬರ ಸ್ವತ್ತಾಗಿ ಕಲೆ ಎಂದು ಉಳಿಯುವುದಿಲ್ಲ, ಅವರಲ್ಲಿ ಅಭಿನಯದ ಕಲೆ ಅಥವಾ ಇನ್ನಾವುದೋ ಒಂದು ಅದ್ಭುತ ಕಲೆ ಇದ್ದಲ್ಲಿ ಜನರ ಮುಂದೆ ಬರುವುದು ಸುಲಭದ ಕೆಲಸವಾಗಿದೆ. ಸಾಮಾಜಿಕ ಜಾಲತಾಣ ಎನ್ನುವುದು ಸಾಕಷ್ಟು ಹೊಸಬರಿಗೆ ಒಳ್ಳೆಯ ವೇದಿಕೆ ಮಾಡಿಕೊಟ್ಟಿರುವುದು ನಿಜ. ಅವರ ಸಾಲಿಗೆ ಇದೀಗ ಕಾಫಿ ನಾಡು ಚಂದು ಸೇರಿದ್ದಾರೆ ಎಂದು ಹೇಳಬಹುದು. ಅದಕ್ಕೆ ಕಾರಣ ಕಾಫಿ ನಾಡು ಚಂದು ಅವರದೇ ಆದ ವಿಶಿಷ್ಟ ಶೈಲಿಯ ಮಾತಿನ ಮೂಲಕ, ವಿಶಿಷ್ಟ ಶೈಲಿ ಹಾಡು ಹಾಡುವ ಮೂಲಕ ಬರ್ತಡೇ ವಿಶಸ್ ಮಾಡುವ ದೊಡ್ಡ ಚಾಣಾಕ್ಷತನ ಹೊಂದಿದ್ದಾರೆ. ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲಕ್ಷ ಲಕ್ಷ ಫಾಲೋವರ್ಸ್ ಕೂಡ ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನಾನು ಶಿವಣ್ಣ ಮತ್ತು ಪುನೀತಣ್ಣ ಅವರ ಅಭಿಮಾನಿ ಎಂದು ಮಾತು ಆರಂಭಿಸುವ ಕಾಫಿನಾಡು ಚಂದು ಈಗಾಗಲೆ ಇಡೀ ಕರ್ನಾಟಕಕ್ಕೆ ಪರಿಚಯ ಆಗಿದ್ದಾರೆ. ಕರ್ನಾಟಕ ಜನತೆಗೆ ನನ್ನ ನಮಸ್ಕಾರ ಎಂದು ಹೇಳುವ ಚಂದು ಚಿಕ್ಕಮಗಳೂರಿನವರು ಎಂದು ಹೇಳಲಾಗಿದೆ. ಹೌದು ಮೂಡಗೆರೆ ಮಲ್ಲಂದೂರಿನ ಭಾಗಮನೆ ಕಡೆಯವರಂತೆ. ಹೌದು ಈಗಾಗಲೇ ಲಕ್ಷ ಲಕ್ಷ ಅಭಿಮಾನಿಗಳನ್ನು ಹೊಂದಿರುವ ಈ ಕಾಫಿ ನಾಡು ಚಂದು ಅವರ ಬಾಯಿಯಲ್ಲಿ ಬರ್ತಡೆ ವಿಷಸ್ ಹೇಳಿಸಿಕೊಳ್ಳಬೇಕು ಎಂದು ಸಾಕಷ್ಟು ಜನರು ತದಿ ಕಾಲಲ್ಲಿ ನಿಂತಿದ್ದಾರೆ. ಹಾಗೆ ರಾತ್ರೋರಾತ್ರಿ ಕಾಫಿ ನಾಡು ಚಂದು ಫೇಮಸ್ ಆಗಿದ್ದಾರೆ ಎಂದು ಹೇಳಬಹುದು. ಕರ್ನಾಟಕದ ಜನತೆಗೆ ಕಾಫಿನಾಡು ಚಂದು ಅವರು ಎಲ್ಲರಿಗೂ ಚಿರಪರಿಚಿತ ಆಗಿದ್ದಾರೆ.

ಕಾಫಿ ನಾಡು ಚಂದು ಇದೀಗ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದು ಖುಷಿಯ ವಿಚಾರ. ಇದೀಗ ಅನುಶ್ರೀ ಅವರ ಮೇಲೆ ಹಾಡು ಹಾಡಿ ಗಮನ ಸೆಳೆದಿದ್ದಾರೆ ಕಾಫಿ ನಾಡು ಚಂದು. ಅನುಶ್ರೀ ಅವರಿಗೆ ಅಕ್ಕ  ಎನ್ನುತ್ತಲೇ ವಿಶೇಷವಾದ ಹಾಡುನ್ನ ಹಾಡಿದ್ದಾರೆ. ಈ ಮೂಲಕವೇ ಒಂದು ವಿಶೇಷ ಬೇಡಿಕೆ ಈಡೇರಿಸುವಂತೆ ಅನುಶ್ರೀ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಕಾಫಿ ನಾಡು ಚಂದು ಅವರು ಇಟ್ಟ ಆ ಬೇಡಿಕೆ ಯಾವುದು.? ನಟ ಶಿವಣ್ಣ ವಿಚಾರವಾಗಿ ಚಂದು ಹೇಳಿರುವ ಈ ಹಾಡು ಹೇಗಿದೆ ಗೊತ್ತಾ..? ಇಲ್ಲಿದೆ ನೋಡಿ ಹಾಡು. ಒಮ್ಮೆ ಕೇಳಿ ವಿಡಿಯೋ ಇಷ್ಟ ಆದ್ರೆ ತಪ್ಪದೆ ಶೇರ್ ಮಾಡಿ. ನಿಮಗೂ ಕೂಡ ಕಾಫಿ ನಾಡು ಚಂದು ಕಲಾವಿದನ ಶೈಲಿ ಇಷ್ಟವಾಗಿದ್ದರೆ ತಪ್ಪದೇ ವಿಡಿಯೋವನ್ನು ಶೇರ್ ಮಾಡಿ, ವಿಡಿಯೋಗೊಂದು ಮೆಚ್ಚುಗೆ ತಿಳಿಸಿ ಧನ್ಯವಾದಗಳು.( video credit: yt studio kannada)