ಗರ್ಭಿಣಿಯಾಗಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾಶ್ರೀಗೆ ಮಗು ಜನನ..! ಯಾವ ಮಗು ಗೊತ್ತಾ..?

By Infoflick Correspondent

Updated:Wednesday, April 6, 2022, 10:09[IST]

ಗರ್ಭಿಣಿಯಾಗಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾಶ್ರೀಗೆ ಮಗು ಜನನ..! ಯಾವ ಮಗು ಗೊತ್ತಾ..?

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಅವರದೇ ಆದ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ. ಹೌದು ರಿಯಾಲಿಟಿ ಶೋ ಮೂಲಕ ಅಥವಾ ಕಾಮಿಡಿ ಶೋ ಮೂಲಕ ಅಥವ ಸಂಗೀತ ಲೋಕದಲ್ಲಿ ಅವರದೇ ಆದ ಭಾರಿ ಛಾಪು ಮೂಡಿಸಿರುವ ಅದೆಷ್ಟೋ ದೈತ್ಯಪ್ರತಿಭೆಗಳು ನಮ್ಮ ಕನ್ನಡದಲ್ಲಿಯೂ ಹೊರ ಹೊಮ್ಮಿದ್ದಾರೆ. ಕನ್ನಡದಲ್ಲಿ ರಿಯಾಲಿಟಿ ಶೋ ಮೂಲಕವೇ ಕನ್ನಡಿಗರ ಮನಸ್ಸನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಾಲಿನಲ್ಲಿ ಬರುವ ಒಂದು ರಿಯಾಲಿಟಿ ಶೋ ಎಂದರೆ ಅದು ಕನ್ನಡದ ಕಾಮಿಡಿ ಕಿಲಾಡಿಗಳು. ಸೀಸನ್ ಒಂದರಲಿ   ಗೋವಿಂದೇ ಗೌಡ, ದಿವ್ಯಶ್ರೀ, ಸಂಜು ಬಸಯ್ಯ, ಕಾರ್ತಿಕ ನಯನಾ, ಜೊತೆಗೆ ಶಿವರಾಜ್ ಕೆ ಆರ್ ಪೇಟೆ ಹಾಗೆ ಸಾಕಷ್ಟು ಕಲಾವಿದರು ಈ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕವೇ ಪ್ರಖ್ಯಾತಿ ಹೊಂದಿದ್ದವರು.   

ಕಾಮಿಡಿ ಕಿಲಾಡಿಗಳು ಶೋ ಮೂಲಕವೇ ವೇದಿಕೆ ಹತ್ತಿದ ಗೋವಿಂದೇಗೌಡ ದಿವ್ಯಶ್ರೀ ಅವರ ನಡುವೆ ಆರಂಭದಲ್ಲಿ ಇವರಿಬ್ಬರ ನಡುವೆ ಸ್ನೇಹ ಬೆಳೆಯಿತು. ನಂತರ ಆ ಸ್ನೇಹ ಪ್ರೀತಿಗೆ ತಿರುಗಿ ಮನೆಯವರ ಒಪ್ಪಿಗೆ ಪಡೆದು 2019ರಲ್ಲಿ ಸರಳವಾಗಿ ದಿವ್ಯಶ್ರೀ ಗೋವಿಂದಗೌಡ ಮದುವೆಯನ್ನು ಸಹ ಆಗಿದ್ದದು. ದಿವ್ಯಶ್ರೀ ಮತ್ತು ಗೋವಿಂದೆ ಗೌಡ ಜೋಡಿಗೆ ಕಳೆದ ಕೆಲವು ದಿನಗಳ ಹಿಂದೆ ಮಗು ಆಗಮನ ಆಗುತ್ತಿರುವ ಸುದ್ದಿ ಕೇಳಿಬಂದಿತ್ತು. ನಂತರ ದಿವ್ಯಶ್ರೀ ಅವರ ಸೀಮಂತ ಕಾರ್ಯವನ್ನು ಕೂಡ ಅವರ ಮನೆಯವರು ಭರ್ಜರಿಯಾಗಿ ಮಾಡಿದ್ದರು. ಇನ್ಸ್ಟಾಗ್ರಾಂ ಖಾತೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿರುವ ದಿವ್ಯಶ್ರೀ ಅವರು ಆ ಮಗುವಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಹಾಗೆ ಮಗುವಿನ ಜೊತೆ ಯುಗಾದಿ ಹಬ್ಬ ಆಚರಿಸುತ್ತಿದ್ದೇವೆ ಎಂದು ಸಕ್ಕತ್ ಖುಷಿಯಿಂದಲೇ ಬರೆದುಕೊಂಡಿದ್ದಾರೆ. ನಟ ಗೋವಿಂದೇಗೌಡ ಮತ್ತು ದಿವ್ಯ ಅವರು ಈಗಾಗಲೇ ದೊಡ್ಡ ಪರದೆಯಲ್ಲಿ ನಟಿಸುತ್ತಿದ್ದು, ಆ ಯಶಸ್ವಿಯ ಜೊತೆ ಅವರಿಗೆ ಇದೀಗ ಹೆಣ್ಣು ಮಗು ಕೂಡ ಜನನ ಆಗಿದೆ. ಎಲ್ಲರೂ ಕೂಡ ವಿಷಯ ತಿಳಿದು ಶುಭಕೋರಿದ್ದಾರೆ. ನೀವು ಸಹ ಶುಭಕೋರಿ ಜೋಡಿಗೆ ಒಳ್ಳೆಯದಾಗಲೆಂದು ಕಮೆಂಟ್ ಮಾಡಿ...