Sonu Srinivasa Gowda : ಕೊನೆಗೂ ಸೋನು ವಿಡೀಯೋ ಲೀಕ್ ಮಾಡಿದವನ ವಿರುದ್ಧ ಕೇಸ್..! ಕೊಟ್ಟವರಾರು ಗೊತ್ತಾ..?

By Infoflick Correspondent

Updated:Thursday, August 11, 2022, 22:33[IST]

Sonu Srinivasa Gowda : ಕೊನೆಗೂ ಸೋನು ವಿಡೀಯೋ ಲೀಕ್ ಮಾಡಿದವನ ವಿರುದ್ಧ ಕೇಸ್..! ಕೊಟ್ಟವರಾರು ಗೊತ್ತಾ..?

ಬಿಗ್ ಬಾಸ್ ಮನೆಯಲ್ಲಿರುವ ನಟಿ ಸೋನು ಶ್ರೀನಿವಾಸ ಗೌಡ ಅವರ ವಿಚಾರವಾಗಿ ಇದೀಗ ಹೆಚ್ಚು ಚರ್ಚೆ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸೋನು ಶ್ರೀನಿವಾಸ ಗೌಡ ಅವರು ಟಿಕ್ ಟಾಕ್ ಮೂಲಕ ಪರಿಚಿತರಾದವರು. ಅವರು ಹೆಚ್ಚು ಅಭಿನಯದಲ್ಲಿ ಆಸಕ್ತಿವುಳ್ಳ ಕಲಾವಿದೆ. ಆರಂಭದಲ್ಲಿ ನಟನೆ ಮೂಲಕ ಡಬ್ ಸ್ಮ್ಯಾಶ್ ಮಾಡುತ್ತ, ನೃತ್ಯ ಮಾಡುತ್ತಾ ಸಕ್ಕತ್ ಮಾದಕವಾಗಿ ನೃತ್ಯ ಮಾಡಿಯೇ ಗಮನ ಸೆಳೆದ ಸಣ್ಣ ಕಲಾವಿದೆ. ಹೌದು ಸೋನು ಅವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿದ್ದಕ್ಕಾಗಿ ಇದೀಗ ನೆಟ್ಟಿಗರು ಮತ್ತು ಬಿಗ್ ಬಾಸ್ ವಿಕ್ಷಕರು ಹೆಚ್ಚು ತಿರಸ್ಕಾರ ಮಾಡುತ್ತಿದ್ದಾರೆ. ಬಿಗ್ ಬಾಸ್ ಆಯೋಜಕರ ವಿರುದ್ಧ ಗುಡುಗಿದ್ದಾರೆ ಎನ್ನಬಹುದು. ಹೌದು ಬಸಲಿಗೆ ಸೋನು ಶ್ರೀನಿವಾಸ ಗೌಡ ಅವರು ಸಮಾಜಕ್ಕೆ ಏನು ಮಾಡಿದ್ದಾರೆ, ಅಂತಹವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಆಟವನ್ನು ಆಡಿಸುವುದಾದರೆ ಅಂತಹವರನ್ನು ನೋಡಿ ಇನ್ನೆಷ್ಟು ಹುಡುಗಿಯರು ನಾವು ಕೂಡ ಬಟ್ಟೆ ಬಿಚ್ಚಿದರೆ ಬಿಗ್ ಬಾಸ್ ಮನೆ ಒಳಗೆ ಹೋಗಬಹುದು ಎಂದು ಕೆಟ್ಟ ಮನಸ್ಥಿತಿಯಿಂದ ಯೋಚನೆ ಮಾಡಬಾರದು, ಅದೇ ರೀತಿ ನೀವು ಕೂಡ ಯಾಕೆ ಯೋಚನೆ ಮಾಡಲಿಲ್ಲ, ಅಂತಹ ಕೆಟ್ಟ ಹುಡುಗಿಯರನ್ನ ಯಾಕೆ ಬಿಗ್ ಬಾಸ್ ಮನೆಯೊಳಗೆ ಸೇರಿಸಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇದೆಲ್ಲದರ ನಡುವೆ ನಾನು ಯಾರು ಎನ್ನುವ ಬಿಗ್ ಮನೆಯ ಒಂದು ಟಾಸ್ಕ್ ಮೂಲಕ ಪ್ರತಿಯೊಬ್ಬ ಬಿಗ್ಬಾಸ್ ಮನೆಯ ಸ್ಪರ್ಧಿಗಳು ಅವರ ಬಗ್ಗೆ ಮತ್ತು ಅವರಲ್ಲಿ ನಡೆದ ಕೆಲವು ಕಹಿ ಘಟನೆಗಳ ಬಗ್ಗೆ ಹೇಳಿಕೊಳ್ಳಲು ಅವಕಾಶ ನೀಡಿತ್ತು. ಆಗ ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ ಗೌಡ ಅವರು ವಿಡಿಯೋ ಲೀಕ್ ಆದ ವಿಚಾರದ ಬಗ್ಗೆ ಮಾತನಾಡಿದರು. ಹಾಗೆ ಪ್ರೀತಿಯಲ್ಲಿ ನಂಬಿಕೆ ಇರುತ್ತದೆ,ಆ ನಂಬಿಕೆಗೆ ದ್ರೋಹ ಮಾಡಿದ ವಿಚಾರ ಅರುಣ್ ಅವರ ಬಗ್ಗೆ ಇಂಚಿಂಚಾಗಿ ಎಲ್ಲಾ ಕಥೆಯನ್ನು ಬಿಚ್ಚಿಟ್ಟರು. ಅದನ್ನು ನೀವು ಈಗಾಗಲೇ ಬಿಗ್ ಮನೇಲಿ ನೋಡಿದ್ದೀರಿ. ಅವರ ಖಾಸಗಿ ವಿಡೀಯೋ ಲೀಕ್  ಮಾಡಿದ ಅರುಣ್ ಎನ್ನುವನ ವಿರುದ್ಧ ಈಗಾಗಲೇ ಮಹಿಳಾ ಸಂಘಟನೆಗಳು ಧ್ವನಿ ಎತ್ತಿದ್ದಾರೆ. ಹಾಗೆ ಆತನನ್ನು ಅರೆಸ್ಟ್ ಮಾಡುವಂತೆ ಕೇಸ್ ದಾಖಲು ಮಾಡಿದ್ದಾರೆ ಎನ್ನಲಾಗಿ ಈಗ ತಿಳಿದು ಬಂದಿದೆ.  

ಪ್ರೀತಿಯಲ್ಲಿ ನಂಬಿಕೆ ವಿಶ್ವಾಸವಿರುತ್ತದೆ, ಹೌದು ನಂಬಿ ನಾವು ತೆಗೆದುಕೊಳ್ಳುವ ಕೆಲವೊಂದಿಷ್ಟು ನಿರ್ಧಾರ ಯಾವ ರೀತಿ ಹಂತಕ್ಕೆ ಬಂದು ನಮ್ಮನ್ನು ತಲುಪಿಸುತ್ತವೆ ಎಂಬುದಕ್ಕೆ ಈ ಸೋನು ಶ್ರೀನಿವಾಸ ಗೌಡ ಅವರ ಉದಾಹರಣೆ ಸಾಕು ಎಂದು ಹೇಳಬಹುದು. ಇನ್ನೊಂದು ಕಡೆ ನೆಟ್ಟಿಗರು ಅದೆಲ್ಲ ಸುಳ್ಳು, ಬೇರೆ ಕಥೆ ಕಟ್ಟಿ ಬಚಾವಾಗಲು ಯತ್ನ ನಡೆಸಿ ಆ ರೀತಿ ಹೇಳುತ್ತಿದ್ದಾಳೆ ಸೋನು ಶ್ರೀನಿವಾಸ ಗೌಡ ಎಂದು ಹೇಳುತ್ತಿದ್ದಾರೆ..ಹೌದು ಅವರ ವಿಡಿಯೋ ಲೀಕ್ ಆದ ವಿಚಾರ ಮತ್ತು ಅವರು ಪ್ರೀತಿ ಮಾಡಿದ್ದು ನಿಜ ಆಗಿದ್ದರೆ ಇದೀಗ ಮಹಿಳಾ ಸಂಘಟನೆಗಳು ಆತನ ವಿರುದ್ಧ ಕೆಎಎಸ್ ದಾಖಲಿಸಿದ್ದು ಆತನನ್ನು ಅರೆಸ್ಟ್ ಮಾಡಲಾಗುತ್ತದೆಯಾ ಎಂದು ಕಾದು ನೋಡಬೇಕು. ಹಾಗೇನೇ ಪೊಲೀಸರು ಈಗಾಗಲೇ ತನಿಖೆ ಚುರುಕುಗಳಿಸಿದ್ದು ಇಷ್ಟರಲ್ಲಿಯೇ ಆ ಅರುಣ್ ಎಂಬಾತನನ್ನ ಅರೆಸ್ಟ್ ಮಾಡುತ್ತಾರೆ ಎಂದು ಕೇಳಿಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೆ ಬಿಗ್ ಬಾಸ್ ಮನೆಯ ನಿಮ್ಮ ನೆಚ್ಚಿನ ಕಂಟೆಸ್ಟೆಂಟ್ ಯಾರು ಎಂಬುದಾಗಿ ಕಮೆಂಟ್ ಮಾಡಿ ಧನ್ಯವಾದಗಳು.