Big boss ott 1 : ಈ ಬಾರಿಯ ಬಿಗ್ಬಾಸ್ ಓಟಿಟಿಗೆ 1 ಇದುವರೆವಿಗೆ ಯಾರೆಲ್ಲ ಎಂಟ್ರಿ ಕೊಟ್ಟಿದ್ದಾರೆ ನೋಡಿ

By Infoflick Correspondent

Updated:Saturday, August 6, 2022, 17:44[IST]

Big boss ott 1 : ಈ ಬಾರಿಯ ಬಿಗ್ಬಾಸ್ ಓಟಿಟಿಗೆ 1   ಇದುವರೆವಿಗೆ  ಯಾರೆಲ್ಲ ಎಂಟ್ರಿ ಕೊಟ್ಟಿದ್ದಾರೆ ನೋಡಿ

 ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ಪ್ರಿಯರಿಗೆ ಇದೀಗ ಸಂತಸದ ಸುದ್ದಿ ಹೊರಬಿದ್ದಿದೆ. ಇನ್ನೊಂದು ದಿನದಲ್ಲಿ ಬಿಗ್ ಬಾಸ್ ಓಟಿಟಿ ಸೀಸನ್ ಒಂದು ಆರಂಭವಾಗಲಿದೆ. ಈ ಬಾರಿ ಯಾವುದೇ ಚಾನಲ್ನಲ್ಲಿ ಈ ಬಿಗ್ಬಾಸ್ ಒಟಿಟಿ ಕಾರ್ಯಕ್ರಮ ಮೂಡಿಬರುವುದಿಲ್ಲ, ಬದಲಿಗೆ ವೂಟ್ ನಲ್ಲಿ 24 ಗಂಟೆಗಳ ಕಾಲ ಮೊಬೈಲ್ ನಲ್ಲಿಯೇ ವೀಕ್ಷಣೆ ಮಾಡುವ ಅವಕಾಶ ಕೊಟ್ಟಿದೆ. ಈ ಬಾರಿಯ ಬಿಗ್ಬಾಸ್ ಓಟಿಟಿ ಸೀಸನ್ 1ಕ್ಕೂ ಸಹ ನಟ ಕಿಚ್ಚ ಸುದೀಪ್ ಅವರೇ ನಿರೂಪಕ ಆಗಲಿದ್ದಾರೆ. ಹಾಗೆ ಈ ಬಾರಿಯ ಬಿಗ್ ಬಾಸ್ ವಿಶೇಷತೆ ಏನೆಂದರೆ ಬಿಗ್ ಬಾಸ್ ಓಟಿಟಿ ವೇದಿಕೆಗೆ ಒಟ್ಟು 18 ಜನರು ಬರುತ್ತಿದ್ದು, ಆರು ವಾರಗಳ ಕಾಲ ಈ ಬಿಗ್ ಬಾಸ್ ನಡೆಯಲಿದೆಯಂತೆ..

ಒಟ್ಟು 45 ದಿನಗಳ ಕಾಲ ಬಿಗ್ಬಾಸ್ ಓಟಿಟಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ವೇದಿಕೆಗೆ 18 ಜನ ಸ್ಪರ್ಧಿಗಳು ಭಾಗವಹಿಸುತ್ತಿರುವುದು ವಿಶೇಷ. ಹಾಗೆ ಇದರಲ್ಲಿ ಗೆಲ್ಲುವ ಐದು ಟಾಪ್ ಫೈನಲಿಸ್ಟ್ ಸ್ಪರ್ಧಿಗಳನ್ನು ಸೀದಾ ಅಕ್ಟೋಬರ್ ತಿಂಗಳಲ್ಲಿ ಬಿಗ್ ಬಾಸ್ ಸೀಸನ್ ೯ಕ್ಕೆ ಕಳುಹಿಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ. 

ಹೌದು ಈಗಾಗಲೇ ಎಲ್ಲಾ ಸಿದ್ಧತೆ ನಡೆಸಿಕೊಂಡಿರುವ ಬಿಗ್ ಬಾಸ್ ಆಯೋಜಕರು ಓ ಟಿ ಟಿ ವೇದಿಕೆ ಮೂಲಕ ಕೆಲವರನ್ನು ಪರಿಚಯ ಮಾಡಿಕೊಳ್ಳಲಿದ್ದಾರೆ, ಮಾಹಿತಿ ತಿಳಿದು ಬಂದಿರುವ ಪ್ರಕಾರ ಸಿನಿಮಾರಂಗದ ಕೆಲವರನ್ನು, ಮತ್ತು ಕಿರುತೆರೆಯ ಖ್ಯಾತ ಕಲಾವಿದರನ್ನು, ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳನ್ನು ಹೊಂದಿರುವವ ಕೆಲವರನ್ನು ಈ ಬಾರಿ ಸ್ಪರ್ದಿಗಳನ್ನಾಗಿ ಬಿಗ್ ಬಾಸ್ ಓಟಿಟಿ ಮನೆಗೆ ಕಳಿಸಲಿದೆ. ( video credit :suddi mane )

ಇಂದು ಸಂಜೆಯಿಂದ ಸುರುವಾಗಲಿರುವ ಬಿಗ್ ಬಾಸ್ ott ge  ಯಾರೆಲ್ಲ ಬಂದಿದ್ದಾರೆ ಒಮ್ಮೆ ನೋಡಿ ।

 ಸಂಖ್ಯಾ ಶಾಸ್ರಜ್ಞ  ಆರ್ಯ ವರ್ದನ್  ಮತ್ತು ಟಿಕ್ ಟಾಕ್ ನಲ್ಲಿ ಪ್ರಸಿದ್ದಿ ಪಡೆದಿರುವ ಸೋನು ಶ್ರೀನಿವಾಸ ಗೌಡ ಈಗಾಗಲೆ ಎಂಟ್ರಿ ಕೊಟ್ಟಿದ್ದಾರೆ । ಅದರ ವಿಡಿಯೋ ತುಣುಕು ಈಗ ಪ್ರಸಾರವಾಗಿದೆ ನೋಡಿ ಸಂತಸ ಪಡಿ ( video credit ; cini buzz)