Big Boss OTT : ಬಿಗ್ಬಾಸ್ ಫಿನಾಲೆಗೆ ಎಂಟ್ರಿ ಪಡೆದ ಈ ಮೂವರು..! ಮಿಕ್ಕಿದವರಲ್ಲಿ ಟೆನ್ಷನ್ ಸ್ಟಾರ್ಟ್

By Infoflick Correspondent

Updated:Wednesday, September 7, 2022, 08:06[IST]

Big Boss OTT :  ಬಿಗ್ಬಾಸ್ ಫಿನಾಲೆಗೆ ಎಂಟ್ರಿ ಪಡೆದ ಈ ಮೂವರು..! ಮಿಕ್ಕಿದವರಲ್ಲಿ ಟೆನ್ಷನ್ ಸ್ಟಾರ್ಟ್

ಕನ್ನಡದ ಓ ಟಿ ಟಿ ಬಿಗ್ಬಾಸ್ ಸೀಸನ್ ಒಂದು ಇದೀಗ ಬಿಗ್ ಬಾಸ್ ಮನೆ ಮಂದಿಗೆಲ್ಲ ಸಕ್ಕತ್ತ ಟ್ವಿಸ್ಟ್ ಕೊಟ್ಟಿದೆ ಎಂದು ಹೇಳಬಹುದು. ಹೌದು ಈ ಬಾರಿ ಬಿಗ್ಬಾಸ್ ಓಟಿಟಿ ಸೀಸನ್ ಒಂದು ಸಾಕಷ್ಟು ವಿರೋಧಗಳ ನಡುವೆ ಆರಂಭವಾಯಿತು. ಆರಂಭವಾದ ಬಳಿಕ ಕೆಲ ಸ್ಪರ್ಧಿಗಳ ಆಯ್ಕೆ ವಿಚಾರವಾಗಿ ವಿರೋಧ ವ್ಯಕ್ತಪಡಿಸಿಕೊಂಡಿತು. ಈಗ ಕೊನೆಯ ಹಂತಕ್ಕೆ ಬಿಗ್ ಬಾಸ್ ಓಟಿಟಿ ಸೀಸನ್ ಒಂದು ಬಂದು ನಿಂತಿದೆ. ಈಗ ನಾಲ್ಕು ವಾರಗಳನ್ನು ಮುಕ್ತಾಯ ಮಾಡಿರುವ ಬಿಗ್ ಬಾಸ್ ಕಾರ್ಯಕ್ರಮ ಇದೀಗ ಬಿಗ್ ಬಾಸ್ ಮನೆಯಲ್ಲಿ ಒಟ್ಟು ಒಂಬತ್ತು ಜನರನ್ನು ಆಟದಲ್ಲಿ ಉಳಿಸಿಕೊಂಡಿದೆ. ಹೌದು ಐದನೇ ವಾರದಲ್ಲಿ ಯಾರೆಲ್ಲಾ ಎಲಿಮಿನೇಟ್ ಆಗುತ್ತಾರೆ ಎಂದು ತುಂಬಾ ಕಾತುರರಾಗಿ ಬಿಗ್ ಬಾಸ್ ಮನೆ ಮಂದಿ ಸಹ ಎದುರು ನೋಡುತ್ತಿದ್ದಾರೆ.

ಹೀಗಿರುವಾಗ ಮೂವರು ಸೇಫ್ ಆಗಿ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. ಸಾನ್ಯ ಅಯ್ಯರ್, ರೂಪೇಶ್ ಶೆಟ್ಟಿ, ಹಾಗೂ ರಾಕೇಶ್ ಅಡಿಗ ಅವರು ಬಿಗ್ ಬಾಸ್ ಪಿನಾಲೆ ವಾರಕ್ಕೆ ಎಂಟ್ರಿ ಪಡೆದಿರುವ ಸ್ಪರ್ಧಿಗಳು. ವಿಕ್ಷಕರ ಆಯ್ಕೆ ಮಾಡಿದ ಪ್ರಕಾರ ರಾಕೇಶ್ ಅಡಿಗ ಫಿನಾಲೆ ವಾರಕ್ಕೆ ಟಿಕೆಟ್ ಪಡೆದುಕೊಂಡರೆ, ಈ ವಾರಕ್ಕೆ ನಾಯಕನಾಗಿ ರೂಪೇಶ್ ಶೆಟ್ಟಿ ಅವರು ಕಾಣಿಸಿದ್ದು ಇವರು ಸಹ ಫಿನಾಲೆ ವಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇನ್ನೊಬ್ಬರನ್ನು ಉಳಿಸಿಕೊಳ್ಳಬೇಕು ಎಂಬ ನಾಯಕನ ಆಯ್ಕೆಗೆ ರೂಪೇಶ್ ಶೆಟ್ಟಿ ಅವರ ಆಯ್ಕೆಯಂತೆ ಸಾನಿಯಾ ಅಯ್ಯರ್ ಕೂಡ ಬಿಗ್ ಬಾಸ್ ಫಿನಾಲೆ ವಾರಕ್ಕೆ ಎಂಟ್ರಿ ಪಡೆದುಕೊಂಡಿದ್ದಾರೆ. ಇನ್ನುಳಿದ ಒಟ್ಟು ಆರು ಸ್ಪರ್ಧಿಗಳು ಈ ವಾರ ಸಕ್ಕತ್ತಾಗಿ ಆಟವನ್ನು ಆಡಬೇಕಿದೆ.

ಫಿನಾಲೆಯ ಆರನೇ ವಾರ ಮುಗಿಯುತ್ತಿದ್ದಂತೆ ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರ ಆಗುವ 9ನೇ ಸೀಸನ್ ನಂತರದಲ್ಲೇ ಆರಂಭವಾಗುತ್ತದೆ ಎಂದು ತಿಳಿದುಬಂದಿದೆ. ಹೌದು ಈ ಮೂವರನ್ನು ಹೊರತು ಪಡಿಸಿ, ನಂದಿನಿ, ಜಶ್ವಂತ್​, ಸೋನು ಶ್ರೀನಿವಾಸ್​ ಗೌಡ, ಆರ್ಯವರ್ಧನ್​ ಗುರೂಜಿ, ಸೋಮಣ್ಣ ಮಾಚಿಮಾಡ, ಜಯಶ್ರೀ ಆರಾಧ್ಯ ಅವರು ಈ ಐದನೇ ವಾರ ನಾಮಿನೇಟ್ ಆಗಿರುವ ಸ್ಪರ್ಧಿಗಳು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಹಾಗೆ ನಿಮ್ಮ ಪ್ರಕಾರ ಯಾರು ಟಾಪ್ ಐದರಲಿ ಕಾಣಿಸಬೇಕು ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು...