ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ ಧರಿಸಿದ್ದ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ? ಶಾಕ್ ಆಗ್ತೀರಾ

By Infoflick Correspondent

Updated:Wednesday, September 14, 2022, 10:22[IST]

ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ ಧರಿಸಿದ್ದ ನೆಕ್ಲೆಸ್   ಬೆಲೆ ಎಷ್ಟು ಗೊತ್ತಾ ? ಶಾಕ್ ಆಗ್ತೀರಾ

ಸೈಮಾ 2022 ಕಾರ್ಯಕ್ರಮ ಸೆ.10 ಮತ್ತು ಸೆ.11ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿತ್ತು. ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಮಾ 2022 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನಟ-ನಟಿಯರು ಸೇರಿದಂತೆ ಎಲ್ಲಾ ಸೆಲಬ್ರಿಟಿಗಳೂ ಆಗಮಿಸಿದ್ದರು. ಈ ಬಾರಿಯ ಸೈಮಾ ಅವಾರ್ಡ್ ಕಾರ್ಯಕ್ರಮವನ್ನು ಪುನೀತ್ ರಾಜ್ ಕುಮಾರ್ ಅವರಿಗಾಗಿ ಅರ್ಪಿಸಲಾಗಿತ್ತು. 

ಮೊದಲ ದಿನದ ಕಾರ್ಯಕ್ರಮದಲ್ಲಿ ತೆಲುಗು ಮತ್ತು ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಯ್ತು. ಮೊದಲ ದಿನದ ಕಾರ್ಯಕ್ರಮಕ್ಕೆ ಕಮಲ್ ಹಾಸನ್, ಶಿವರಾರ್ ಕುಮಾರ್, ಯಶ್, ರಾಧಿಕಾ ಪಂಡಿತ್, ಅಲ್ಲು ಅರ್ಜುನ್, ರಣ್ವೀರ್ ಸಿಂಗ್, ಆಶಿಕಾ ರಂಗನಾಥ್ ಸೇರಿದಂತೆ ಹಲವು ಸೆಲಬ್ರಿಟಿಗಳು ಆಗಮಿಸಿದ್ದರು. ಎರಡನೇ ದಿನ ನಡೆದ ಕಾರ್ಯಕ್ರಮದಲ್ಲಿ ತಮಿಳು ಹಾಗೂ ಮಲಯಾಳಂ ಸಿನಿ ತಾರೆಯರಿಗೆ ಪ್ರಶಸ್ತಿ ನೀಡಲಾಯ್ತು. ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ಸೈಮಾ ಕಾರ್ಯಕ್ರಮ ಭರ್ಜರಿ ಯಶಸ್ಸನ್ನು ಕಂಡಿದೆ.   

ಇನ್ನು ಈ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಅವರ ಪತ್ನಿ ಹಾಗೂ ನಟಿ ರಾಧಿಕಾ ಪಂಡಿತ್ ಕೂಡ ಆಗಮಿಸಿದ್ದರು. ಸಮಾರಂಭಕ್ಕೆ ಸೀರೆಯುಟ್ಟಿದ್ದ ರಾಧಿಕಾ, ನೆಕ್ಲೆಸ್ ಒಂದನ್ನು ಧರಿಸಿದ್ದರು. ಆ ನೆಕ್ಲೇಸ್ ಈಗ ವೈರಲ್ ಆಗಿದೆ. ಎಲ್ಲರ ಕಣ್ಣು ರಾಧಿಕಾ ಅವರು ಹಾಕಿದ್ದ ನೆಕ್ಲೆಸ್ ಮೇಲೆ ಬಿದ್ದಿದೆ. ಅಷ್ಟಕ್ಕೂ ಈ ನೆಕ್ಲೆಸ್ ಪುರಾತನ ಕಾಲದ ಒಡವೆಯಂತೆ ಸಿದ್ಧ ಪಡಿಸಲಾಗಿದೆ. ಕಲ್ಯಾಣ್ ಜುವೆಲರ್ಸ್ ನಲ್ಲಿ ಈ ನೆಕ್ಲೆಸ್ ಅನ್ನು ರಾಧಿಕಾ ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ 19 ಲಕ್ಷ ರೂಪಾಯಿ ಅಂತೆ.