ಕ್ರೇಜಿ ಸ್ಟಾರ್ ಎಲ್ಲಿದ್ರೂನು ಕ್ರೇಜಿನೆ ಬಿಡಿ..! ವೈರಲ್ ಆದ ವೀಡಿಯೋ ಹೀಗಿದೆ ನೋಡಿ..!

By Infoflick Correspondent

Updated:Tuesday, April 12, 2022, 12:52[IST]

ಕ್ರೇಜಿ ಸ್ಟಾರ್ ಎಲ್ಲಿದ್ರೂನು ಕ್ರೇಜಿನೆ ಬಿಡಿ..! ವೈರಲ್ ಆದ ವೀಡಿಯೋ ಹೀಗಿದೆ ನೋಡಿ..!

ಕನ್ನಡದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇದೀಗ ಇತ್ತೀಚಿಗೆ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಹೌದು ಈ ಮುಂಚೆ ಸಾಕಷ್ಟು ಡಾನ್ಸ್ ಪ್ರೋಗ್ರಾಮ್ ಗಳಲ್ಲಿ ಕನ್ನಡದ ನಟ ರವಿಚಂದ್ರನ್ ಅವರು ಜಡ್ಜ್ ಆಗಿ ನೇಮಕ ಆಗಿದ್ದರು. ಹಾಗೆ ಹೆಚ್ಚು ಕನ್ನಡಿಗರನ್ನು ಮನರಂಜಿಸಿದ್ದರು. ಇದೀಗ ಮತ್ತೆ ಡ್ರಾಮಾ ಜೂನಿಯರ್ಸ್ ಸೀಸನ್ ನಾಲ್ಕಕ್ಕೆ ಎಂಟ್ರಿಕೊಟ್ಟಿದ್ದು ಮಕ್ಕಳ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೌದು ಈ ಕಾರ್ಯಕ್ರಮ ಮೊನ್ನೆ ಜೀ ಕನ್ನಡದಲ್ಲಿ ಆರಂಭವಾಗಿದೆ. ಒಳ್ಳೆಯ ಓಪನಿಂಗ್ ಕೊಡ ಪಡೆದುಕೊಂಡಿದೆ. ಅಲ್ಲಿ ಎಲ್ಲಾ ಮಕ್ಕಳು ಅದ್ಭುತವಾಗಿ ಅಭಿನಯ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ರವಿಚಂದ್ರನ್ ಅವರ ಜೊತೆ ನಟಿ ರಚಿತಾ ರಾಮ್ ಹಾಗೂ ಲಕ್ಷ್ಮಿ ಅವರು ಕೂಡ ಜಡ್ಜ್ ಆಗಿ ಆಯ್ಕೆಯಾಗಿದ್ದಾರೆ. 

ಇನ್ನೊಂದು ಕಡೆ ವೇದಿಕೆ ಮೇಲೆ ನಿರೂಪಕಿಯಾಗಿ ಅನುಶ್ರೀ ಅವರು ಕಾಣಿಸಿದ್ದಾರೆ. ನಟ ರವಿಚಂದ್ರನ್ ಅವರಿಗೆ ಮೊನ್ನೆ ಒಂದು ಟಾಸ್ಕ್ ರೀತಿ ಮತ್ತೆ ವೇದಿಕೆಯ ಮೇಲೆ ಹೆಜ್ಜೆ ಹಾಕುವ ಸನ್ನಿವೇಶ ಬಂದೊದಗಿತ್ತು. ನಟಿ ರಚಿತಾ ರಾಮ್, ನಿರೂಪಕಿ ಅನುಶ್ರೀ ಅವರ ಜೊತೆ ನಾನು ನನ್ನ ಹೆಂಡತಿರು ಸಿನಿಮಾದ ಒಂದು ಹಾಡಿಗೆ ರವಿಚಂದ್ರನ್ ಅವರು ಡಾನ್ಸ್ ಮಾಡಲು ಮುಂದಾಗಿದ್ದರು. ನಟ ರವಿಚಂದ್ರನ್ ಅವರ ಜೊತೆ ತುಂಬಾ ನಾಚಿಕೊಂಡು ನಟಿ ರಚಿತಾ ರಾಮ್ ಹಾಗೇನೇ ಈ ಅನುಶ್ರೀ ಅವರು ನಾನು ನನ್ನ ಹೆಂಡತಿರು ಎನ್ನುವ ಹಾಡಿಗೆ ಬರ್ಜರಿ ಸ್ಟೆಪ್ ಹಾಕಿದರು. ಅದರ ವಿಡಿಯೋ ತುಣುಕು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ನಟ ರವಿಚಂದ್ರನ್ ಅವರ ಜೊತೆ ಹೆಜ್ಜೆ ಹಾಕಿದ ಪರಿ ನೋಡಿ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ. ರವಿಚಂದ್ರನ್ ಅವರಿಗೆ ಎಷ್ಟೇ ವಯಸ್ಸಾದರೂ, ಕ್ರೇಜಿಸ್ಟಾರ್ ಯಾವತ್ತಿಗೂ ಇಂದಿಗೂ ಕೂಡ ಕ್ರೇಜಿಸ್ಟಾರ್ ಎಂದು ಹಾಡಿ ಹೊಗಳಿದ್ದಾರೆ. ಅಸಲಿಗೆ ನಟ ರವಿಚಂದ್ರನ್ ಅವರ ಜೊತೆ ಹೆಜ್ಜೆ ಹಾಕಿದ ಅನುಶ್ರೀ ಮತ್ತು ರಚಿತಾ ರಾಮ್ ಅವರ ವಿಡಿಯೋ ಹೇಗಿದೆ ಗೊತ್ತಾ.? ಲೇಖನದ ಕೊನೆಯಲ್ಲಿ ಇದೆ ಒಮ್ಮೆ ನೋಡಿ. ಹಾಗೆ ನಿಮಗೂ ಸಹ ರೊಮ್ಯಾಂಟಿಕ್  ಡ್ಯಾನ್ಸ್ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ ಧನ್ಯವಾದ..

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)