ಚಹಲ್ ಧನಶ್ರೀ ದಾಂಪತ್ಯದಲ್ಲಿ ಬಿರುಕು ? ಸ್ಪಸ್ಟನೆ ನೀಡಿದ ಯುಜ್ವೇಂದ್ರ ಚಹಲ್

By Infoflick Correspondent

Updated:Saturday, August 20, 2022, 17:44[IST]

ಚಹಲ್ ಧನಶ್ರೀ ದಾಂಪತ್ಯದಲ್ಲಿ ಬಿರುಕು ? ಸ್ಪಸ್ಟನೆ ನೀಡಿದ ಯುಜ್ವೇಂದ್ರ ಚಹಲ್

ಚಹಲ್ ಮತ್ತು ಧನಶ್ರೀ ದಂಪತಿಯ ಸಂಬಂಧ ಬಿರುಕು ಬಿಟ್ಟಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೆಲ್ಲಾ ಶುರುವಾಗಿದ್ದು ಧನಶ್ರೀ ವರ್ಮಾ ಮಾಡಿದ ಅದೊಂದು ಕೆಲಸದಿಂದ. 

ಧನಶ್ರೀ ತನ್ನ ಇನ್​ಸ್ಟಾಗ್ರಾಮ್​ ಹ್ಯಾಂಡಲ್​ನಲ್ಲಿ ತನ್ನ ಹೆಸರಿನಿಂದ 'ಚಹಲ್​' ಅನ್ನು ಕೈಬಿಟ್ಟಿದ್ದು, ಇದು ದಂಪತಿಗಳ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಜಾಲತಾಣ​ ನಂಬುವಂತೆ ಮಾಡಿತ್ತು. ಈ ಮಧ್ಯೆ ಧನಶ್ರೀ ತಮ್ಮ ಚಿತ್ರಗಳ ಸೆಟ್​ ಅನ್ನು ಹಂಚಿಕೊಂಡು "ರಾಜಕುಮಾರಿ ಯಾವಾಗಲೂ ತನ್ನ ನೋವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತಾಳೆ" ಎಂದು ಬರೆದುಕೊಂಡಿದ್ದರು. 

ತಮ್ಮ ಇನ್’ಸ್ಟಾಗ್ರಾಂನಲ್ಲಿ “ಹೊಸ ಜೀವನ ಶುರುವಾಗುತ್ತಿದೆ” ಎಂದು ಬರೆದುಕೊಂಡಿದ್ದರು. ಇದು ಮತ್ತಷ್ಟು ಕುತೂಹಲಗಳನ್ನು ಹುಟ್ಟು ಹಾಕಿತ್ತು. ಚಹಲ್ ಮತ್ತು ಧನಶ್ರೀ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದ್ದವು.  

ತಮ್ಮ ಮತ್ತು ಪತ್ನಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಚಹಲ್, ನಮ್ಮ ಮಧ್ಯೆ ಅಂಥದ್ದೇನೂ ಆಗಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮ ಸಂಬಂಧದ ಬಗ್ಗೆ ಹಬ್ಬುತ್ತಿರುವ ರೂಮರ್’ಗಳನನ್ನು ಯಾರೂ ನಂಬಬೇಡಿ. ದಯವಿಟ್ಟು ಎಲ್ಲವನ್ನೂ ಇಲ್ಲೇ ಮುಗಿಸಿ ಬಿಡಿ” ಎಂದು ಚಹಲ್ ಹಾಗು ಧನಶ್ರೀ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.