ಮತ್ತೆ ಜೊಡಿಯಾಗಿ ಸಿಹಿ ಸುದ್ದಿ ನೀಡಿದ ಡಾಲಿ ಧನಂಜಯ್ ಮತ್ತು  ಅಮೃತಾ ಅಯ್ಯಂಗಾರ್

By Infoflick Correspondent

Updated:Tuesday, April 26, 2022, 14:44[IST]

ಮತ್ತೆ ಜೊಡಿಯಾಗಿ ಸಿಹಿ ಸುದ್ದಿ ನೀಡಿದ ಡಾಲಿ ಧನಂಜಯ್ ಮತ್ತು  ಅಮೃತಾ ಅಯ್ಯಂಗಾರ್

ಕನ್ನಡ ಚಿತ್ರರಂಗದ ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವವರು ನಟ ಡಾಲಿ ಧನಂಜಯ್ ಎಂಥದ್ದೇ ಪಾತ್ರ ಕೊಟ್ಟರು ಧನಂಜಯ್ ಅದ್ಭುತವಾಗಿ ನಟಿಸುತ್ತಾರೆ. ಸದ್ಯದ ಅವರ ಬಡವ ರಾಸ್ಕಲ್ ಸಿನಿಮಾ ಈಗಲೂ ಸದ್ದು ಮಾಡುತ್ತಿದೆ. ಅಮೃತಾ ಅಯ್ಯಂಗಾರ್ ಜೊತೆ ಹಲವಾರು ಸಿನಿಮಾದಲ್ಲಿ ನಟಿಸಿದ ಡಾಲಿ, ಇವರಿಬ್ಬರ ಜೊಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಡಾಲಿ ಮತ್ತು ಅಮೃಂತಾ ಜೊಡಿ ನಿಜಜೀವನದಲ್ಲೂ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ ಜನತೆ. 

ಈ ಜೋಡಿ ಜಸ್ಟ್ ಫ್ರೆಂಡ್ಸ್ ಅಲ್ಲ, ಇಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ಗಾಸಿಪ್ ಸಹ ಸಾಕಷ್ಟು ದಿನಗಳಿಂದ ಕೇಳಿ ಬರುತ್ತಿದೆ. ಡಾಲಿ ಧನಂಜಯ್ ಮತ್ತು ಅಮೃತಾ ಅವರು ಈವರೆಗೂ ಪಾಪ್ ಕಾರ್ನ್ ಮಂಕಿ ಟೈಗರ್ ಮತ್ತು ಬಡವ ರಾಸ್ಕಲ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದು, ಇದೀಗ ಮತ್ತೊಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಲಿದ್ದಾರೆ.‌ಈ ಜೊಡಿ ತೆರೆಯ ಮೇಲೆ‌ ಮತ್ತೆ ಒಂದಾಗಿ ಬರುತ್ತಿರುವುದು ಸಿನಿಪ್ರಿಯರ ಸಂತಸ ಸುದ್ದಿಯಾಗಿದೆ.   

ಧನಂಜಯ್ ಅಭಿನಯದ 25ನೇ ಸಿನಿಮಾ "ಹೊಯ್ಸಳ‌"ದಲ್ಲಿ ಅಂಮೃತಾ ನಾಯಕ ನಟಿಯಾಗಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ದೇವಸ್ಥಾನದಲ್ಲಿ ಹೊಯ್ಸಳ ಸಿನಿಮಾದ ಮುಹೂರ್ತ ನೆರವೇರಿತು. ಈ ಸಿನಿಮಾವನ್ನು ಕೆ.ಆರ್.ಜಿ ಕನೆಕ್ಟ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ವಿಜಯ್ ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೈಸೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ 75 ದಿನಗಳ ಚಿತ್ರೀಕರಣ ನಡೆಯಲಿದೆ. 

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕಾರ್ತಿಕ್ ಎಸ್ ಅವರು ಛಾಯಾಗ್ರಹಣ ನೀಡಿದರೆ, ದೀಪು ಎಸ್ ಕುಮಾರ್ ಅವರು ಸಂಕಲನ ಕೊಡಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯಲಿದ್ದಾರೆ.