ಕೆಜಿಎಫ್ 2 ಸಿನಿಮಾವನ್ನು ಹಾಡಿ ಹೊಗಳಿದ ನಮ್ಮ ಡಾಲಿ ಧನಂಜಯ್..! ಹೇಳಿದ್ದು ಕೇಳಿ ಹೆಮ್ಮೆ ಅನ್ಸುತ್ತೆ..!

By Infoflick Correspondent

Updated:Thursday, April 21, 2022, 19:27[IST]

ಕೆಜಿಎಫ್ 2 ಸಿನಿಮಾವನ್ನು ಹಾಡಿ ಹೊಗಳಿದ ನಮ್ಮ ಡಾಲಿ ಧನಂಜಯ್..! ಹೇಳಿದ್ದು ಕೇಳಿ ಹೆಮ್ಮೆ ಅನ್ಸುತ್ತೆ..!

ಕನ್ನಡ ಚಿತ್ರರಂಗ ಇದೀಗ ಉತ್ತುಂಗ ಸ್ಥಾನದಲ್ಲಿದೆ. ಹೌದು ಕೆಜಿಎಫ್ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗ ಗೆದ್ದಿದೆ ಎಂದು ಹೇಳಲಿಕ್ಕಾಗದು. ಕನ್ನಡ ಸಿನಿಮಾಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಈ ಹಿಂದೆಯೇ ಸದ್ದು ಮಾಡಿವೆ. ಡಾಕ್ಟರ್ ವಿಷ್ಣುವರ್ಧನ್ ಅವರ ಕಾಲದಲ್ಲಿ ಹಾಗೆ ವರನಟ ಡಾಕ್ಟರ್ ರಾಜಕುಮಾರ್ ಕಾಲದಲ್ಲಿಯೇ ಸಿನಿಮಾ ದೊಡ್ಡದಾಗಿ ಸದ್ದು ಮಾಡುತ್ತಿದ್ದವು. ಹೌದು ಇದೀಗ ಕೆಜಿಎಫ್ ಚಾಪ್ಟರ್ ಟು ಸಿನಿಮಾ ಕೂಡ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಕನ್ನಡಿಗರಿಗೆ ತುಂಬಾ ಹೆಮ್ಮೆ ಪಡುವ ವಿಷಯ. ಕೆಜಿಎಫ್ ಚಾಪ್ಟರ್ 2 ಊಹೆಗೂ ಮೀರಿ ಸಿನಿಮಾ ಮೂಡಿ ಬಂದಿದೆ. ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ದೊಡ್ಡ ಸೆಲ್ಯೂಟ್ ಹೊಡೆಯಲೇಬೇಕು.

ಪ್ರಶಾಂತ್ ನೀಲ್ ಅವರು ಒಬ್ಬ ಪ್ರತಿಭಾವಂತ ನಿರ್ದೇಶಕ ಆಗಿದ್ದಾರೆ. ಹಾಗೆ ನಟ ರಾಕಿಂಗ್ ಸ್ಟಾರ್ ಯಶ್ ಕೂಡ ಒಳ್ಳೆಯ ಕಲಾವಿದ. ಹೀಗಿರುವಾಗ ಇವರಿಬ್ಬರು ಸೇರಿ ವಿಜಯ್ ಕಿರಗಂದೂರು ಅವರ ಸಂಸ್ಥೆಯ ನಿರ್ಮಾಣದಲ್ಲಿ ಕೆಜಿಎಫ್ ಚಿತ್ರವನ್ನು ಇಡಿ ವಿಶ್ವಕ್ಕೆ ಹಂಚಿದ್ದಾರೆ. ಸಿನಿಪ್ರಿಯರು ಈ ಸಿನಿಮಾಗೆ ಫಿದಾ ಆಗಿದ್ದಾರೆ. ಕನ್ನಡ ಸಿನಿಮಾರಂಗದ ಇನ್ನೊಬ್ಬ ಯುವ ನಟ ಡಾಲಿ ಎಂದೇ ಕರೆಯಲ್ಪಡುವ ನಟ ಧನಂಜಯ್ ಅವರು ಸಹ ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಕಾಣೆಯಾದವರ ಬಗ್ಗೆ ಪ್ರಕಟಣೆ ಎನ್ನುವ ಹೊಸ ಸಿನಿಮಾದ ಟ್ರೈಲರ್ ಲಾಂಚ್ ಮಾಡಿಕೊಟ್ಟ ನಟ ಡಾಲಿ ಧನಂಜಯ್ ಅವರು, ಸಿನಿಮಾಗೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ಬಳಿಕ ಕೆಜಿಎಫ್ ಬಗ್ಗೆ ಪ್ರಶ್ನೆ ಮಾಡಿದಾಗ, ಕೆಜಿಎಫ್ ಚಿತ್ರ ಸಾವಿರ ಕೋಟಿ ಕಲೆಕ್ಷನ್ ಮಾಡುತ್ತದೆ ಎಂದರೆ ತುಂಬಾ ಹೆಮ್ಮೆಯಾಗುತ್ತದೆ. ಹಾಗೆ ಆ ರೀತಿ ಕನಸುಗಳನ್ನು ನನಸು ಮಾಡಿದ ಕೆಜಿಎಫ್ ತಂಡ ನೋಡಿ ಖುಷಿಪಡಬೇಕು. ಒಂದು ಕನಸು ನನಸಾದರೆ 100 ಕನಸುಗಳಿಗೆ ದಾರಿ ಸಿಕ್ಕಂತೆ. ಅದೇ ರೀತಿ ಕನಸುಗಳನ್ನು ಹೆಚ್ಚು ಕಾಣೋಣ, ಆ ಕನಸುಗಳನ್ನು ನನಸು ಮಾಡುವಲ್ಲಿ ಕೆಲಸ ಮಾಡುತ್ತೇವೆ. ಎಂದರು.

VIDEO CREDIT : POWER TV