ಆಂಕರ್ ಅನುಶ್ರೀ ನಂಟಿದ್ದ ಡ್ರಗ್ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿಗೆ ಚಳಿ ಬಿಡಿಸಿದ ಪೊಲೀಸರು

By Infoflick Correspondent

Updated:Tuesday, July 12, 2022, 08:20[IST]

ಆಂಕರ್ ಅನುಶ್ರೀ ನಂಟಿದ್ದ ಡ್ರಗ್ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿಗೆ ಚಳಿ ಬಿಡಿಸಿದ ಪೊಲೀಸರು

ಆಂಕರ್ ಅನುಶ್ರೀ ಅವರ ಜೊತೆಗೆ ಸಂಪರ್ಕ ಹೊಂದಿದ್ದ ಡ್ರಗ್ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಅವರಿಗೆ ಮಂಗಳೂರು ಪೊಲೀಸ್‌ ಕಮಿಷನರ್ ಚಳಿ ಬಿಡಿಸಿದ್ದಾರೆ. ಮಂಗಳೂರಿನ ಪೊಲೀಸ್ ಗ್ರೌಂಡ್ ನಲ್ಲಿ ಕಮಿಷನರ್ ಶಶಿಕುಮಾರ್‌ ಅವರು ಆರೋಪಿಗಳ ಪರೇಡ್ ನಡೆಸಿದರು. ಈ ವೇಳೆ ಡ್ರಗ್ ಪ್ರಕರಣದ ಆರೋಪಿ ಕಿಶೋರ್ ಅಮನ್ ಶೆಟ್ಟಿಗೆ ಕ್ಲಾಸ್‌ ತೆಗೆದುಕೊಂಡರು. ಕಿಶೋರ್‌ ಬಟ್ಟೆ ಬಿಚ್ಚಿಸಿದ್ದು, ಆತನ ಮೈಮೇಲಿದ್ದ ಟ್ಯಾಟೂ ನೋಡಿ ಪ್ರಶ್ನೆಗಳನ್ನು ಕೇಳಿದರು.


ಡ್ರಗ್ಸ್ ಸಫ್ಲೈ ಮಾಡಿಕೊಂಡಿದ್ಯಾ ಅಥವಾ ಇನ್ನೂ ಮುಂದುವರಿಸಿದ್ದೀಯಾ..? ನೀನು ಡ್ರಗ್‌ ತೆಗೆದುಕೊಳ್ಳುತ್ತೀಯಾ ಹೇಗೆ..? ಮಾಡುವ ಕೆಸಲ ಮಾಡಿದರೆ ಸಾಕು. ಅದು ಬಿಟ್ಟು ಹಚ್ಚೆ ಎಲ್ಲಾ ಹಾಕಿಸಿಕೊಳ್ಳಬೇಕಾ ಎಂದು ಗದರಿದರು. ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧಿಯಾಗಿದ್ದ 2ಎ ಆರೋಪಿ ಕಿಶೋರ್ ಅಮನ್‌ ಶೆಟ್ಟಿ ಮತ್ತಷ್ಟು ಸಂಗತಿಗಳನ್ನು ವಿಚಾರಣೆ ವೇಳೆ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದ. ಕಿಶೋರ್ ಶೆಟ್ಟಿ ನೀಡಿದ ಮಾಹಿತಿಗಳ ಆಧಾರದ ಮೇಲೆ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ತಯಾರಿಸಿದ್ದರು. ಅದರಲ್ಲಿ ಆ್ಯಂಕರ್ ಅನುಶ್ರೀ ಹೆಸರು ಕೂಡ ದಾಖಲಾಗಿತ್ತು.


2007-08ರಲ್ಲಿ ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ ಸಂದರ್ಭದಲ್ಲಿ ಆ್ಯಂಕರ್ ಅನುಶ್ರೀ ಎಕ್ಸ್‌ಟಸಿ ಡ್ರಗ್ಸ್ ಸೇವಿಸುತ್ತಿದ್ದರು. ಅಷ್ಟು ಮಾತ್ರವಲ್ಲದೆ ಇತರ ಸ್ಪರ್ಧಿಗಳಿಗೆ ಡ್ರಗ್ಸ್ ಸೇವಿಸುವಂತೆ ಹುರಿದುಂಬಿಸುತ್ತಿದ್ದರು. ಡ್ರಗ್ ಪೆಡ್ಲರ್ ಗಳ ಜೊತೆ ಸಂಪರ್ಕ ಹೊಂದಿದವರಿಂದ ಡ್ರಗ್ಸ್ ಪೂರೈಕೆಗೆ ಕೂಡ ಸಹಕಾರ ನೀಡುತ್ತಿದ್ದರು ಎಂದು ಕಿಶೋರ್ ಶೆಟ್ಟಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಕಿಶೋರ್, ತರುಣ್ ಜೊತೆ ಸಾಕಷ್ಟು ಭಾರೀ ಮಾದಕ ವಸ್ತು ಸೇವಿಸಿರೋದಾಗಿ ಉಲ್ಲೇಖ‌ ಮಾಡಲಾಗಿತ್ತು. ಈ ಬಗ್ಗೆ ಆಂಕರ್‌ ಅನುಶ್ರೀ ಅವರನ್ನೂ ವಿಚಾರಣೆ ನಡೆಸಲಾಗಿತ್ತು.