ಮಿಲನಾ ಹುಟ್ಟುಹಬ್ಬದಂದು ಡಾರ್ಲಿಂಗ್ ಕೃಷ್ಣ ಮಾಡಿದ ಕೆಲಸ‌ ಇದು ! ದಂಗಾದ ಚಂದದ ಬೆಡಗಿ

By Infoflick Correspondent

Updated:Tuesday, April 26, 2022, 21:24[IST]

ಮಿಲನಾ ಹುಟ್ಟುಹಬ್ಬದಂದು ಡಾರ್ಲಿಂಗ್ ಕೃಷ್ಣ ಮಾಡಿದ ಕೆಲಸ‌ ಇದು ! ದಂಗಾದ ಚಂದದ ಬೆಡಗಿ

ಸ್ಯಾಂಡಲ್ ವುಡ್ ನಟಿ ಮಿಲನಾ ನಾಗರಾಜ್ ಗೆ ಇಂದು ಜನ್ಮದಿನದ ಸಂಭ್ರಮ. ಚಂದನವನದ ಚಂದದ ಜೊಡಿ ಎಂದೇ ಗುರುತಿಸಿಕೊಂಡ ಮಿಲನಾ- ಕೃಷ್ಣ ಎಲ್ಲರ ಅಚ್ಚು ಮೆಚ್ಚು. ಪ್ರತಿ ವರ್ಷವೂ ಕೃಷ್ಣ ಮಿಲನಾ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ಬಾರಿಯೂ ಬಿಗ್ ಶಾಕ್ ಮತ್ತು ಸರ್ಪೈಸ್ ನೀಡಿದ್ದಾರೆ. 

ಸದ್ಯ ಈ ಜೋಡಿ ಈಗ ಸಿಂಗಾಪುರ್ ನಲ್ಲಿ ಹಾಲಿಡೇ ಮೂಡ್ ನಲ್ಲಿದೆ. ಕೆಲವು ದಿನಗಳಿಂದ ಇಲ್ಲಿ ರಜಾ ಮಜಾ ಮಾಡುತ್ತಿದ್ದಾರೆ.ಸಿಂಗಾಪೂರ್ ಟೂರ್ ಪೋಟೊ ಎಲ್ಲೆಡೆ ವೈರಲ್ ಆಗುತ್ತಿರುವಾಗ ವಿಶೇಷವಾಗಿ ಮಡದಿಯ ಹುಟ್ಟುಹಬ್ಬ ಆಚರಿಸಿ ಮಿಲನಾಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದ್ದಾರೆ ಕೃಷ್ಣ.   

ಮಾಲ್ ವೊಂದರಲ್ಲಿ ಮಿಲನಾ ಅವರನ್ನು ಕೃಷ್ಣ ಕರೆದೊಯ್ದು ಮಾಲ್ ಮಧ್ಯದಲ್ಲಿ ಪೂರ್ತಿ ಸಿಂಗರಿಸಿದ ಜೂಮರ್ ಬೆಳಕಿನ ಕೆಳಗೆ ತಿರುಗುವ ಚಕ್ರದಲ್ಲಿ  Happy birthday milana ಎಂದು ಜಗಮಗಿಸುವ ಬೆಳಕಿನ ಅಲಂಕಾರದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದನ್ನು ನೋಡಿ ಮಿಲನಾ ಸಂತಸದಿಂದ ದಂಗಾಗಿದ್ದಾರೆ. ಈ ವಿಶೇಷ ಆಚರಣೆಯ ವಿಡಿಯೋ ಇಲ್ಲಿದೆ ನೋಡಿ