ಲೋಕಲ್ ಟ್ರೈನ್ ನಲ್ಲಿ ಸವಾರಿ ಮಾಡಲಿರುವ ಡಾರ್ಲಿಂಗ್ ಕೃಷ್ಣ..! ಏಪ್ರಿಲ್ ಒಂದಕ್ಕೆ ಬಿಡುಗಡೆ..!

By Infoflick Correspondent

Updated:Thursday, March 24, 2022, 21:19[IST]

ಲೋಕಲ್ ಟ್ರೈನ್ ನಲ್ಲಿ ಸವಾರಿ ಮಾಡಲಿರುವ ಡಾರ್ಲಿಂಗ್ ಕೃಷ್ಣ..! ಏಪ್ರಿಲ್ ಒಂದಕ್ಕೆ ಬಿಡುಗಡೆ..!

ಲವ್ ಮಾಕ್ಟೈಲ್ ಹಾಗೂ ಲವ್ ಮಾಕ್ಟೈಲ್ 2 ಚಿತ್ರದ ಮೂಲಕ ನಿರ್ದೇಶನ ಆರಂಭಿಸಿ ನಟನೆಯಲ್ಲೂ ಹೆಚ್ಚು ಅಭಿಮಾನಿ ಬಳಗ ಗಿಟ್ಟಿಸಿಕೊಂಡಿರುವ ಡಾರ್ಲಿಂಗ್ ಕೃಷ್ಣ ಅವರು ಇದೀಗ ಹೆಚ್ಚು ಪ್ರಖ್ಯಾತಿ ಹೊಂದಿದ್ದಾರೆ. ಈ ಚಿತ್ರದ  ಮೂಲಕ ವಾಣಿಜ್ಯ ಯಶಸ್ಸನ್ನು ಗಳಿಸಿದ ಡಾರ್ಲಿಂಗ್ ಕೃಷ್ಣ ಅವರು ದೊಡ್ಡ ಪರದೆಗೆ ಮತ್ತೆ ಮರಳಲು ಸಿದ್ಧರಾಗಿದ್ದಾರೆ. ಎಂದು ಕೇಳಿ ಬಂದಿದೆ. ನಟ ಡಾರ್ಲಿಂಗ್ ಕೃಷ್ಣ ಅವರ ಮುಂಬರುವ ವಾರಗಳಲ್ಲಿ ಹಲವಾರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ ಎನ್ನಲಾಗಿದೆ. ಅವುಗಳಲ್ಲಿ ಒಂದು ಪ್ರೇಮಕಥೆ ಲೋಕಲ್ ಟ್ರೈನ್ ಸಿನಿಮಾ ಕೂಡ ಒಂದು. ಈ ಸಿನಿಮಾ ಏಪ್ರಿಲ್ 1 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಲೋಕಲ್ ಟ್ರೈನ್ ಸಿನಿಮಾ, ವರದಿಗಳ ಪ್ರಕಾರ ಗ್ರಾಮೀಣ ಪ್ರದೇಶ ಹಾಗೂ ಬೆಂಗಳೂರನ್ನು ಸಂಪರ್ಕಿಸುವ ರೈಲಿನಲ್ಲಿ ಅರಳುವ ಪ್ರೇಮಕಥೆಯ ಕುರಿತಾಗಿದ್ದು, ಜೊತೆಗೆ ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದೆ. ಸಿನಿ ಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸುವುದಕ್ಕೆ ಡಾರ್ಲಿಂಗ್ ಕೃಷ್ಣ ಲೋಕಲ್ ಟ್ರೈನ್ ಸಿನಿಮಾ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಹಾಗೆ ಕೃಷ್ಣ ಅವರೊಂದಿಗೆ ಎಸ್ಟರ್ ನೊರೊನ್ಹಾ ಮತ್ತು ಮೀನಾ ದೀಕ್ಷಿತ್ ಅವರು ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದರೆ, ಅತ್ತ ರುದ್ರಮುನಿ ವೈ.ಎಸ್ ಅವರು ಲೋಕಲ್ ಟ್ರೈನ್ ಚಿತ್ರವನ್ನು ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ.. ಚಿತ್ರಕ್ಕೆ ಸುಬ್ರಾಯ ವಾಲ್ಕೆ ನಿರ್ಮಾಣವಿದೆ. ಹಾಗೆ ರಮೇಶ್ ಬಾಬು ಛಾಯಾಗ್ರಹಣ, ಮತ್ತು ಕೆ.ಎಂ. ಸೌಂದರ್ ರಾಜು ಸಂಪಾದಕರು ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ.  

ಲೋಕಲ್ ಟ್ರೈನ್ ಚಿತ್ರದಲ್ಲಿ ಹಾಸ್ಯ ನಟ ಸಾಧು ಕೋಕಿಲ, ಕಾಮಿಡಿ ಹಿರಿಯ ನಟ ಟೆನ್ನಿಸ್ ಕೃಷ್ಣ, ಸುಚೇಂದ್ರ ಪ್ರಸಾದ್, ಗುರುದತ್, ಭಜರಂಗಿ ಖ್ಯಾತಿಯ ನಟ ಲೋಕಿ, ಹಾಗೆ ಇನ್ನೂ ಮುಂತಾದವರು ಸಹ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.  ಸುಮಾರು ನಾಲ್ಕು ವರ್ಷಗಳ ಹಿಂದೆಯೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾದರೂ, ಚಿತ್ರತಂಡವು ಕೆಲ ತಾಂತ್ರಿಕ ತೊಂದರೆಗಳಿಗೆ ಸಿಲುಕಿದ್ದು, ಮತ್ತು ಕೋವಿಡ್ ಕಾರಣಕ್ಕೆ ಎಲ್ಲವೂ ತಡವಾಗಿತ್ತು. ಇದೆಲ್ಲದರ ನಡುವೆ ಇತ್ತೀಚಿಗೆ ಇದೆ ಲೋಕಲ್ ಟ್ರೈನ್ ಚಿತ್ರದ ಭರ್ಜರಿ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರತಂಡ ಈಗ ಅಂತಿಮವಾಗಿ ಬಿಡುಗಡೆಗೆ ಸಿದ್ಧವಾಗಿದೆ. ಡಾರ್ಲಿಂಗ್ ಕೃಷ್ಣ ಅವರು 'ಲವ್ ಮಾಕ್‌ಟೇಲ್ 2' ಸಿನಿಮಾದ ಯಶಸ್ಸಿನ ಅಲೆಯಲ್ಲಿ ಸವಾರಿ ಮಾಡುತ್ತಿದ್ದಾರೆ. ನಟಿ ನಿಶ್ವಿಕಾ ಜೊತೆಗೆ ದಿಲ್ ಪಸಂದ್, ಮಿಸ್ಟರ್ ಬ್ಯಾಚುಲರ್, ಶುಗರ್ ಫ್ಯಾಕ್ಟರಿ, ಮತ್ತು ಇನ್ನೂ ಕೆಲವು ಬಿಡುಗಡೆಗಾಗಿ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ...