ನನ್ನ ಶಾ*ಕ್ಕೆ ಸಮ ಎಂದ ದರ್ಶನ್ ಧ್ವನಿ ಆಡಿಯೋ ನಿಜಕ್ಕೂ ಯಾರದ್ದು ಗೊತ್ತಾ..? ವಿಡಿಯೋ ವೈರಲ್

Updated: Tuesday, July 20, 2021, 11:59 [IST]

    

ಹೌದು ಸ್ನೇಹಿತರೆ ಇತ್ತೀಚೆಗಷ್ಟೇ ನಟ ದರ್ಶನ್ ಹಾಗೂ ಅರುಣಾಕುಮಾರಿ ಅವರಿಬ್ಬರ ನಡುವೆ ಸಂಬಂಧಿಸಿದ 25 ಕೋಟಿ ಶೂರಿಟಿ ವಿಚಾರ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದುಕೊಂಡಿದ್ದು, ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಮೈಸೂರಿನ ಪ್ರಿನ್ಸ್ ನ ಹೋಟೆಲಲ್ಲಿ ನಟ ದರ್ಶನ್ ಕೆಲಸಗಾರನೊಬ್ಬನಿಗೆ ಹೊಡೆದಿದ್ದಾರೆ ಎಂದು ಆರೋಪ ಮಾಡಿದರು. ನಂತರ ದರ್ಶನ್ ಅವರು ಮಾಧ್ಯಮದ ಜೊತೆ ಮಾತನಾಡಿ ನಾನು ಹೊಡೆದಿಲ್ಲ,ಎಂಬುದಾಗಿ ಸ್ಪಷ್ಟ ಹೇಳಿಕೆ ನೀಡಿದರು ಇದಾದ ಬಳಿಕ ಕೇಳಿಬಂದ ಕೆಲವು ಫೇಕ್ ಫೋನ್ ಕಾಲ್ ಆಡಿಯೋಗಳು ದರ್ಶನ್ ಅವರನ್ನು ತುಂಬ ಆಕ್ರೋಶಕ್ಕೆ ಒಳಗಾಗುವಂತೆ ಮಾಡಿದ್ದವು.

ಒಬ್ಬ ನಟನಿಗೆ ಇದು ಒಳ್ಳೆಯದಲ್ಲ, ನಿಜ ಜೀವನವೇ ಬೇರೆ ಸಿನಿಮಾ ಜೀವನವೇ ಬೇರೆ, ಎಂದು ಹೇಳಿ ಹೇಗೆ ನಡೆದುಕೊಳ್ಳಬೇಕು ಎಂದು ಮೊದಲು ನಟ ಕಲಿಬೇಕು ಎಂದು ಇಂದ್ರಜಿತ್ ನಟ ದರ್ಶನ್ ಕ್ಷಮೆ ಕೇಳಬೇಕಾಗಿ ಮನವಿ ಮಾಡಿದ್ದರು.ಇದಾದ ಬಳಿಕ ಮಾಧ್ಯಮದ ಜೊತೆ ಮಾತನಾಡಿ ದರ್ಶನ್ ಅವರು ಇಂದ್ರಜಿತ್ ಅವರಪ್ಪನಿಗೆ ಹುಟ್ಟಿದ್ದರೆ ಆ ಆಡಿಯೋ ರಿಲೀಸ್ ಮಾಡಲಿ ಎಂದು ಕೋಪದಲ್ಲಿಯೇ ಉತ್ತರಿಸಿದರು. ನಂತರ ನಟ ದರ್ಶನ್ ಅವರು ನಿರ್ದೇಶಕ ಪ್ರೇಮ್ ವಿಚಾರವಾಗಿಯೂ ಸಹ ಮಾತನಾಡಿದರು. ಈ ವಿಚಾರ ಸಹ ಚರ್ಚೆಯಾಯಿತು.

ಆಮೇಲೆ ಉಮಾಪತಿ ಪ್ರಾಪರ್ಟಿ ವಿಚಾರವಾಗಿ ಕೇಳಿ ಬಂದ ಮಾತಿಗೂ ಸಹ ನಟ ದರ್ಶನ್ ಮಾತನಾಡಿದರು. ಇದಾದ ಬಳಿಕ ದರ್ಶನ್ ಅವರು ಮಾಧ್ಯಮದವರಿಗೆ ಬೈದಿರುವ ಆಡಿಯೋ ಎನ್ನಲಾದ ಒಂದು ಆಡಿಯೋ ಇತ್ತೀಚಿಗೆ ತುಂಬಾ ವೈರಲ್ ಆಯ್ತು. ಅಷ್ಟಕ್ಕೂ ಇದು ದರ್ಶನ್ ಧ್ವನಿ ಅಲ್ಲವೇ ಅಲ್ಲ ಎಂದು ಹೇಳಲಾಗುತ್ತಿದೆ. ಯಾರೋ ಮಿಮಿಕ್ರಿ ಕಲಾವಿದ ನಟ ದರ್ಶನ್ ಅವರ ಹಾಗೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ರೀತಿ ಫೇಕ್ ಆಡಿಯೋ ಎಷ್ಟೇ ಬಂದರೂ  ನಟ ದರ್ಶನ್ ಡಿ ಬಾಸ್ ಅವರನ್ನು ಏನೂ ಮಾಡಲು ಆಗುವುದಿಲ್ಲ ಎಂದು ಅವರ ಅಭಿಮಾನಿಗಳು ಪ್ರೀತಿಯ ದರ್ಶನ್ ಪರ ನಿಂತಿದ್ದಾರೆ....