ಇಂದ್ರಜಿತ್ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಡಿ ಬಾಸ್ ಫ್ಯಾನ್ಸ್..! ಸಂಕಷ್ಟಕ್ಕೆ ಸಿಲುಕಿದ ಇಂದ್ರಜಿತ್

Updated: Thursday, July 22, 2021, 12:03 [IST]

    

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಮೇಲೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೆಲ ಆರೋಪಗಳನ್ನು ಮಾಡಿದ್ದು, ಸಂದೇಶ್ ಮಾಲೀಕತ್ವದ ಪ್ರಿನ್ಸ್ ಹೋಟೆಲ್ ಸಿಬ್ಬಂದಿಗೆ ದರ್ಶನ್ ಹಲ್ಲೆ ಮಾಡಿದ್ದಾರೆ, ಹಾಗೆ ಬೈದಿದ್ದಾರೆ ಎಂದು ಆರೋಪ ಮಾಡಿದರು. ಹೌದು ನಟ ದರ್ಶನ್ ಅಭಿಮಾನಿಗಳು ಈ ಬಗ್ಗೆ ಇದೀಗ ಮಾತನಾಡಿದ್ದು ದರ್ಶನ್ ಅವರ ತೇಜೋವಧೆಯನ್ನು ಈ ಇಂದ್ರಜಿತ್ ಲಂಕೇಶ್ ಮಾಡುತ್ತಿದ್ದಾರೆ, ಹಾಗಾಗಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ದಾಸ ದರ್ಶನ್ ಅವರ ಅಭಿಮಾನಿಗಳು ಚಿಕ್ಕಬಳ್ಳಾಪುರದ ಪೊಲೀಸರ ಬಳಿ ದೂರು ನೀಡಿದ್ದಾರೆ ಎಂದು ಈಗಷ್ಟೇ ತಿಳಿದುಬಂದಿದೆ.

ಹೌದು ವೈಯಕ್ತಿಕ ಕಾರಣಗಳಿಂದ ದರ್ಶನ್ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಅವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ಹಾಕಿದ್ದು, ಇಂದ್ರಜಿತ್ ಲಂಕೇಶ್ ಅವರ ಉದ್ದೇಶವನ್ನು ದೂರಿನಲ್ಲಿ ತಿಳಿಸಿದ್ದಾರೆ. ಹಾಗೆ ಇವರ ವಿರುದ್ಧವಾಗಿ ದೂರು ನೀಡಿದ್ದಾರೆ. ಅಷ್ಟಕ್ಕೂ ದರ್ಶನ್ ಅಭಿಮಾನಿಗಳು ದೂರಿನಲ್ಲಿ ಹೇಳಿದ್ದಾದರೂ ಏನು ಗೊತ್ತಾ ಮುಂದೆ ಓದಿ..  

'ಇಂದ್ರಜಿತ್ ಲಂಕೇಶ್‌ರ ಮೊದಲ ಪ್ರೆಸ್ ಹೇಳಿಕೆಯಲ್ಲಿ ನಟ ದರ್ಶನ್ ತೇಜೋವಧೆ ಮಾಡಲೆಂದೇ ಇಲ್ಲಸಲ್ಲದ ಆರೋಪವನ್ನು ಸೃಷ್ಟಿಸಿದ್ದಾರೆ. ದಲಿತ ಸಪ್ಲೈಯರ್‌ಗೆ ಹೊಡೆದರು ಎಂದು ಸುಳ್ಳು ಆರೋಪವನ್ನು ಮಾಡಿ, ಹಿಂದುಳಿದ ಜನಾಂಗದ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ತನ್ನ ವೈಯುಕ್ತಿಕ ದ್ವೇಷಕ್ಕೆ ನಟ ದರ್ಶನ್ ತೂಗುದೀಪ ರವರ ಕೀರ್ತಿಗೆ ಧಕ್ಕೆಯನ್ನು ಉಂಟುಮಾಡಲು ದಲಿತ ಜನಾಂಗದ ಹೆಸರನ್ನು ಬಳಸಿಕೊಂಡಿರುವುದು ಖಂಡನೀಯವಾದುದು. ಈ ಬೆಳವಣಿಗೆಯಿಂದ ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುವ ಪ್ರಯತ್ನ ಇಂದ್ರಜಿತ್ ಲಂಕೇಶ್ ಮಾಡಿರುತ್ತಾರೆ. 

ನಟ ದರ್ಶನ್ ಅವರ ತೇಜೋವಧೆ ಮಾಡಲು ಯತ್ನಿಸುತ್ತಿರುವ ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಕೂಡಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮವನ್ನು ಜರುಗಿಸಬೇಕು' ಎಂದು ಕರುನಾಡು ಕಲಾಚಕ್ರವರ್ತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಚಿಕ್ಕಬಳ್ಳಾಪುರ ಪೊಲೀಸರಿಗೆ ದೂರು ನೀಡಿದ್ದು ಈ ಎಲ್ಲಾ ವಿವರಣೆಯನ್ನು ಡಿ ಕಂಪನಿ ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ....