Yash : ಹೊಂಬಾಳೆ ಸಂಸ್ಥೆಯಿಂದ ಯಶಗೆ ಬಾಕ್ಸ್ ಆಫೀಸ್ ಸುಲ್ತಾನ ಎಂಬ ಪೋಸ್ಟ್..! ದರ್ಶನ್ ಫ್ಯಾನ್ಸ್ ಮಾಡಿದ್ದೆ ಬೇರೆ ನೋಡಿ

By Infoflick Correspondent

Updated:Wednesday, May 11, 2022, 17:32[IST]

Yash :  ಹೊಂಬಾಳೆ ಸಂಸ್ಥೆಯಿಂದ ಯಶಗೆ ಬಾಕ್ಸ್ ಆಫೀಸ್ ಸುಲ್ತಾನ ಎಂಬ ಪೋಸ್ಟ್..! ದರ್ಶನ್ ಫ್ಯಾನ್ಸ್ ಮಾಡಿದ್ದೆ ಬೇರೆ ನೋಡಿ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬಾರಿ ಸೂಪರ್ ಸ್ಟಾರ್ ಫ್ಯಾನ್ ಗಳ ಮದ್ಯೆ ಹೆಚ್ಚು ಕಾದಾಟ ಕಿತ್ತಾಟ ನಡೆದಿದೆ. ನಮ್ಮ ಸೂಪರ್ ಸ್ಟಾರ್ ಹೀರೋ ದೊಡ್ಡವ, ನಿಮ್ಮ ಸೂಪರ್ ಸ್ಟಾರ್ ಹೀರೋ ಚಿಕ್ಕವ ಎಂಬುದಾಗಿ ಸಾಕಷ್ಟು ಬಾರಿ ಕಿತ್ತಾಟ ನಡೆಸಿದ್ದಾರೆ. ಆದರೆ ಯಾವೊಬ್ಬ ನಟನಾಗಲಿ ಫ್ಯಾನ್ ವಾರ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಸಿನಿಮಾದಲ್ಲಿ ನಿರ್ದೇಶಕ ಹೇಳಿಕೊಡುವ ಡೈಲಾಗ್ ಮೂಲಕ ಉತ್ತರ ನೀಡುತ್ತಿದ್ದರು ಎಂದು ಹೇಳಬಹುದು. ಹೌದು ಇತ್ತೀಚಿಗೆ ಕೆಜಿಎಫ್ ಭಾಗ-2 ಚಿತ್ರ ಇಡೀ ವಿಶ್ವದಾದ್ಯಂತ ಸಕತ್ತಾಗಿ ಧೂಳೆಬ್ಬಿಸಿದೆ. ಮೇ 9ನೇ ತಾರೀಕು 25 ದಿನಗಳನ್ನು ಪೂರ್ತಿ ಮಾಡಿದೆ. ಹನ್ನೆರಡು ನೂರು ಕೋಟಿ ಗಡಿ ದಾಟಿ ಯಶಸ್ವಿ ದಾಖಲೆ ಮಾಡುತ್ತಿದೆ.

ಇನ್ನು ಕೂಡ ಬಾಕ್ಸಾಫೀಸಿನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ಕೋಟ ಮುನ್ನಡೆಸಿದೆ. ಹೀಗಿರುವಾಗ ಹೊಂಬಾಳೆ ಸಂಸ್ಥೆ 25 ದಿನಗಳ ಕಂಪ್ಲೀಟ್ ಮಾಡಿದ ಕೆಜಿಎಫ್ ಚಿತ್ರದ ಕಲೆಕ್ಷನ್ ಬಗ್ಗೆ ಮಾತನಾಡಿದ್ದು, ಬಾಕ್ಸಾಫೀಸ್ ಸುಲ್ತಾನ ಎನ್ನುವ ಟೈಟಲ್ ಉಪಯೋಗ ಮಾಡಿದ್ದಾರೆ. ಇದನ್ನು ನೋಡಿದ ದರ್ಶನ್ ಅಭಿಮಾನಿಗಳು ಈಗ ಕೆಂಡಕಾರಿದ್ದಾರೆಂದು ಹೇಳಬಹುದು. ಹೊಂಬಾಳೆ ಫಿಲಂಸ್ ವಿರುದ್ಧ ತಿರುಗಿಬಿದ್ದಿದ್ದಾರೆ. ಟ್ವಿಟರ್ನಲ್ಲಿ ಅಭಿಯಾನ ಶುರು ಮಾಡಿದ ದರ್ಶನ್ ಅಭಿಮಾನಿಗಳು ನಿಜವಾದ ಬಾಕ್ಸ್ ಆಫೀಸ್ ಸುಲ್ತಾನ ಯಾರು ಎಂದು ಎಲ್ರಿಗೂ ಗೊತ್ತು ಎಂದು ಹೇಳುತ್ತಿದ್ದಾರೆ. ದರ್ಶನ್ ಅವರ ಅಭಿಮಾನಿಗಳ ವರ್ತನೆ ಕಂಡ ಯಶ್ ಅಭಿಮಾನಿಗಳು ಕೆಜಿಎಫ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ.   

ಹಾಗಾಗಿ ದರ್ಶನ್ ಅವರ ಅಭಿಮಾನಿಗಳಿಗೆ ಆ ಯಶಸ್ಸನ್ನು  ತಡೆದುಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಹೀಗೆ ಈ ರೀತಿ ಮಾತನಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಬಾಕ್ಸಾಫೀಸ್ ಸುಲ್ತಾನ ಎಂದು ದರ್ಶನ್ ರನ್ನ ಅಭಿಮಾನಿಗಳು ಕರೆಯುತ್ತಿದ್ದರು. ಆದ್ರೆ ಅದನ್ನೇ ಹೊಂಬಾಳೆ ಸಂಸ್ಥೆಯವರು ಉಪಯೋಗಿಸಿ ಅದನ್ನು ಕದ್ದು ಈ ರೀತಿ ಬರೆದುಕೊಂಡಿದ್ದಾರೆ ಯಾರೇ ಆಗಲಿ ಏನೇ ಬರಲಿ ನಮಗೆ ಬಾಕ್ಸಾಫೀಸ್ ಸುಲ್ತಾನ ನಮ್ಮ ದರ್ಶನ್ ಅವರು ಮಾತ್ರ ಎಂದು ಹೇಳುತ್ತಿದ್ದಾರೆ ದರ್ಶನ್ ಫ್ಯಾನ್ಸ್.. ಬಜಾರ್ ನಲ್ಲಿ ಸಾಕಷ್ಟು ಜನರು ಸುಲ್ತಾನ ಸುಲ್ತಾನ ಎಂದು ಹೇಳಿಕೊಳ್ಳುತ್ತಾ ಹೋರಾಟ ನಡೆಸಿದ್ದಾರೆ ನಿಜವಾದ ಸುಲ್ತಾನ ಎನ್ನುವ ಯಾರು ಎಂದು ಎಲ್ಲರಿಗೂ ಗೊತ್ತು ಎಂದು ಯಜಮಾನ ಚಿತ್ರದ ಡೈಲಾಗ್ ಹೊಡೆದು ಆಕ್ರೋಶ ಹೊರಹಾಕಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಬಾಕ್ಸಾಫೀಸ್ ಸುಲ್ತಾನ ಟೈಟಲ್ ಗಲಾಟೆ ಕುರಿತು ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ಧನ್ಯವಾದಗಳು.