ಇಂದ್ರಜಿತ್ ಲಂಕೇಶ್ ವಿರುದ್ಧ ಕೊನೆಗೂ ಸಿಕ್ಕೆ ಬಿಡ್ತು ದರ್ಶನ್'ಗೆ ಮೊದಲ ಗೆಲುವು..! ಅದೇನ್ ಗೊತ್ತಾ..?

Updated: Thursday, July 22, 2021, 10:18 [IST]

    

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ 25 ಕೋಟಿ ಹಣ ಶೂರಿಟಿ ಪ್ರಕರಣ ಕೆಲವು ದಿನಗಳಿಂದ ತುಂಬಾನೇ ಚರ್ಚೆಯಾಗಿದ್ದು, 25ಕೋಟಿಯಿಂದ ಆರಂಭವಾದ ನಟ ದರ್ಶನ್ ಅವರ ಈ ಪ್ರಕರಣ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದುಕೊಂಡಿದ್ದು, ಮೈಸೂರಿನ ಪ್ರಿನ್ಸ್ ಹೋಟೆಲ್ ನ ಸಿಬ್ಬಂದಿಗೆ ದರ್ಶನ್ ಅವರು ಬೈದು ಹಲ್ಲೆ ಮಾಡಿದ್ದಾರೆ ಎನ್ನಲಾಗಿ ಇಂದ್ರಜಿತ್ ಲಂಕೇಶ್ ಮಾಡಿದ ಆರೋಪಕ್ಕೆ ಬಂದುನಿಂತಿತು. ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವ್ರು ನಟ ದರ್ಶನ್ ಅವರಿಗೆ ಮೇಲಿಂದ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿ, ಇದಕ್ಕೆಲ್ಲ ಸಾಕ್ಷಿ ನೀಡುತ್ತೇನೆ ಎಂಬುದಾಗಿಯೂ ಮಾಧ್ಯಮದ ಮುಂದೆ ಹೇಳಿದ್ದರು.

ನಂತರ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಫೋನ್ ಕಾಲ್ ಆಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ಸಹ ಕೇಳಿಬಂದವು. ಇಷ್ಟೆಲ್ಲಾ ಬೆಳವಣಿಗೆಯ ನಡುವೆ ನಟ ದರ್ಶನ್ ಅವರು ತುಂಬಾ ಕುಗ್ಗಿಯೇ ಹೋಗಿದ್ದರು ಎನ್ನಬಹುದು. ಇದರಿಂದ ಅಸಮಾಧಾನ ಹೊಂದಿದ್ದರು. ಮಾಧ್ಯಮದ ಮುಂದೆ ಆಕ್ರೋಶವನ್ನು ಹೊರಹಾಕಿದರು. ಕನ್ನಡ ಸಿನಿಮಾರಂಗದಲ್ಲಿ ತಮ್ಮ ಜೊತೆಗೆ ಇರುವವರನ್ನು ಬೆಳೆಸುವ ಗುಣ ಹೊಂದಿರುವ ನಟ ದರ್ಶನ್ ಅವರಿಗೆ ಇಂತಹ ಸಮಯದಲ್ಲಿ ಯಾವೊಬ್ಬ ನಟ ಕೂಡ ಬೆಂಬಲಕ್ಕೆ ಬರಲಿಲ್ಲ.. 

ಆದರೆ ಇದೀಗ ನಟ ದರ್ಶನ್ ಅವರ ಮೊದಲು ಗೆಲುವು ಸಾಧಿಸಿದ್ದಾರೆ. ನಟ ದರ್ಶನ್ ಅವರ ಮೇಲೆ ಸಾವಿರಾರು ಕಾಂಟ್ರೋವರ್ಸಿಗಳು ಕೇಳಿಬಂದರೂ ಸಹ ದರ್ಶನ್ ಅಭಿಮಾನಿಗಳು ದರ್ಶನ್ ಅವರನ್ನ ಕೈ ಬಿಡಲಿಲ್ಲ. ನಾವು ನಿಮ್ಮ ಜೊತೆ ಇದ್ದೇವೆ ಎಂದು ಬೆಂಬಲಕ್ಕೆ ನಿಂತರು.ಇದರ ಜೊತೆ ಇದೀಗ ದರ್ಶನ್ ಅವರಿಗೆ ಇನ್ನೊಂದು ಗೆಲುವು ಸಹ ಇಂದ್ರಜಿತ್ ಲಂಕೇಶ್ ವಿರುದ್ದ ಸಿಕ್ಕಿದೆ. ಅಷ್ಟಕ್ಕೂ ದರ್ಶನ್ ಅವರಿಗೆ ಸಿಕ್ಕ ಆ ಗೆಲುವು ಯಾವುದು ಗೊತ್ತಾ. ಈ ವಿಡಿಯೋ ನೋಡಿ ಮತ್ತು ನೀವು ಸಹ ಡಿ ಬಾಸ್ ಅಭಿಮಾನಿ ಆಗಿದ್ದರೆ ತಪ್ಪದೇ ಮಾಹಿತಿ ಬಗ್ಗೆ ಕಮೆಂಟ್ ಮಾಡಿ, ಮತ್ತು ವಿಡಿಯೋವನ್ನು ಶೇರ್ ಸಹ ಮಾಡಿ, ಧನ್ಯವಾದಗಳು....