ದರ್ಶನ್ ಕಡೆಯಿಂದ ಬಂತು ಅಮೂಲ್ಯ ಸೀಮಂತ ಕಾರ್ಯಕ್ಕೆ ಅತಿ ದೊಡ್ಡ ಗಿಫ್ಟ್..! ಅಮೂಲ್ಯ ಭಾವುಕ
Updated:Friday, January 21, 2022, 11:36[IST]

ನಿನ್ನೆಯಷ್ಟೇ ಕನ್ನಡ ಸಿನಿಮಾರಂಗದ ಖ್ಯಾತ ನಟಿ ಅಮೂಲ್ಯ ಅವರ ಸೀಮಂತ ಕಾರ್ಯ ನಡೆದಿದೆ. ಹೌದು ಅಮೂಲ್ಯ ಅವರ ಸೀಮಂತ ಕಾರ್ಯಕ್ಕೆ ಕೆಲವೇ ಕೆಲವು ಆಪ್ತರು, ಅವರ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಕರೋನ ಕಾರಣದಿಂದ ಅಮೂಲ್ಯ ಅವರ ಸೀಮಂತದ ಕಾರ್ಯವನ್ನು ತುಂಬಾ ಸರಳವಾಗಿಯೇ ಮೊದಲೇ ಪ್ಲಾನ್ ಮಾಡಿ ಕಾರ್ಯ ಆಚರಿಸಿದ್ದಾರೆ. ಅಮೂಲ್ಯ ಪತಿ ಜಗದೀಶ್ ಅವರ ಆಪ್ತರು ಸ್ನೇಹಿತರು ಅಮೂಲ್ಯ ಅವರ ಸೀಮಂತ ಕಾರ್ಯಕ್ಕೆ ಬಂದು ಶುಭಾಶಯ ಕೋರಿ ಹೋಗಿದ್ದಾರೆ. ಹೌದು ನಟ ಡಿ ಬಾಸ್ ಕೂಡ ಇದೀಗ ಅಮೂಲ್ಯ ಅವರ ಸೀಮಂತದ ಕಾರ್ಯಕ್ಕೆ ಶುಭಕೋರಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿನಿಮಾರಂಗದಲ್ಲಿ ಸಣ್ಣ ವಯಸ್ಸಿನಿಂದಲೂ ನಟ ಡಿ ಬಾಸ್ ಅವರ ಜೊತೆ ಅಭಿನಯ ಮಾಡುತ್ತಾ ಬಾಲ ಕಲಾವಿದೆ ಆಗಿ ಮಿಂಚಿದ ಅಮೂಲ್ಯ ದರ್ಶನ್ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ಸದಾ ಡಿ ಬಾಸ್ ಅಥವಾ ಅಣ್ಣ ಎಂದು ಕರೆಯುವ ಅಮೂಲ್ಯ ಅವರಿಗೆ ಡಿ ಬಾಸ್ ದರ್ಶನ್ ಎಂದರೆ ಅಚ್ಚುಮೆಚ್ಚು. ಅಮೂಲ್ಯ ಹಾಗೂ ದರ್ಶನ್ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರೂ ತುಂಬಾ ತುಂಟಾಟ ಮಾಡುತ್ತ,, ಪ್ರೀತಿಯಿಂದ ಜಗಳವಾಡುವುದು.. ಅಮೂಲ್ಯ ಅವರನ್ನ ಡಿ ಬಾಸ್ ಅವರು ಹೆಚ್ಚು ಕಾಡಿಸುವುದು ಇದೇ ಕಾಣುತ್ತದೆ. ಇವರಿಬ್ಬರ ಅಣ್ಣ ತಂಗಿಯ ಪ್ರೀತಿ ನೋಡಿದರೆ ನಿಜಕ್ಕೂ ಅಭಿಮಾನಿಗಳಿಗೆ ಖುಷಿ ಆಗುತ್ತದೆ. ಹಾಗೆನೆ ಮೊದಲಿಂದಲೂ ಅಣ್ಣ-ತಂಗಿ ಆಗಿರುವ ಅಮೂಲ್ಯ ಹಾಗೂ ದರ್ಶನ್ ಒಳ್ಳೆಯ ಪ್ರೀತಿ ವಾತ್ಸಲ್ಯ ಇಟ್ಟುಕೊಂಡಿದ್ದಾರೆ.
ದರ್ಶನ್ ಅವರ ಹುಟ್ಟು ಹಬ್ಬದ ಕಾರ್ಯಕ್ರಮ ಬಂದರೆ, ನಟಿ ಅಮೂಲ್ಯ ಅವರ ಮನೆಗೆ ಹೋಗಿಯೇ ವಿಶೇಷವಾಗಿ ಶುಭಕೋರಿ ಬರುತ್ತಾರೆ. ಅದರಂತೆ ಅಮೂಲ್ಯ ಅವರ ಮನೆಯಲ್ಲಿ ಯಾವುದೇ ಕಾರ್ಯ ನಡೆದರೂ ಬಾಸ್ ಇದ್ದೇ ಇರುತ್ತಾರೆ. ಆದರೆ ಅಮೂಲ್ಯ ಅವರ ಸೀಮಂತ ಕಾರ್ಯಕ್ಕೆ ದರ್ಶನ್ ಅವರು ಬರಲು ಇದೇ ಮೊದಲ ಬಾರಿ ಆಗಿಲ್ಲ. ಹಾಗಾಗಿ ಅಲ್ಲಿಂದಲೇ ಫೋನ್ ಮಾಡಿ ಅಮೂಲ್ಯಗೆ ಶುಭಕೋರಿ, ನಿನ್ನ ಮಗುವಿಗೆ ವಿಶೇಷವಾದ ಸರ್ಪ್ರೈಸ್ ಗಿಫ್ಟ ನೀಡುತ್ತೇನೆ ತುಂಬಾ ಜೋಪಾನವಾಗಿರು, ನಿನ್ನ ಆರೋಗ್ಯ ನೋಡಿಕೋ ಎಂದು ಹೇಳಿ ಹೂ ಗುಚ್ಛ ನೀಡಿದ್ದಾರಂತೆ. ದರ್ಶನ್ ಅವರ ಶುಭಾಶಯ ನೋಡಿ ಅಮೂಲ್ಯ ಭಾವುಕರಾಗಿದ್ದಾರೆ ಎನ್ನಲಾಗಿದೆ. ಜೊತೆಗೆ ಜಗದೀಶ್ ಗೂ ಕೂಡ ಶುಭಕೋರಿ ಅಮೂಲ್ಯರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.