ಸೂರ್ಯಕಾಂತ್ ಅವರನ್ನ ಮನೆಗೆ ಕರೆಸಿದ ನಟ ದರ್ಶನ್..! ಕೊಟ್ಟ ಆ ಉಡುಗೊರೆ ಏನು ಗೊತ್ತಾ..?

Updated: Saturday, September 11, 2021, 13:49 [IST]

ಹೌದು ಸ್ನೇಹಿತರೆ ಎಸ್ಪಿಬಿ ಬಾಲಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ಈ ಮುಂಚೆ ಪ್ರಸಾರವಾಗುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಇತ್ತೀಚಿಗಷ್ಟೇ ಮತ್ತೆ ಎಸ್ಪಿಬಿ ಅವರ ಆಶೀರ್ವಾದದೊಂದಿಗೆನೆ ಕಾರ್ಯಕ್ರಮ ಆರಂಭವಾಗಿದೆ. ಜಡ್ಜ್ ಗಳಾಗಿ ರಘು ದೀಕ್ಷಿತ್, ಗುರು ಕಿರಣ್, ರಾಜೇಶ್ ಕೃಷ್ಣ, ಹಾಗೇನೇ ವಿ. ಹರಿ ಕೃಷ್ಣ  ಅವ್ರು ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಎದೆತುಂಬಿ ಕಾರ್ಯಕ್ರಮ ಮೂಲಕ ಕನ್ನಡಿಗರ ಮನೆಮಾತಾಗಿರುವ ಹಾಡುಗಾರ ಸೂರ್ಯಕಾಂತ್ ಅವರು ಸಾಕಷ್ಟು ಜನರಿಗೆ ಇಷ್ಟವಾಗಿದ್ದಾರೆ. 

ಸೂರ್ಯಕಾಂತ್ ಅವರು ಮೂಲತಹ ಗುಲಬುರ್ಗ ಜಿಲ್ಲೆಯವರು. ಒಂದು ಪುಟ್ಟ ಹಳ್ಳಿಯಿಂದ ಬಂದು ಇದೀಗ ಎದೆ ತುಂಬಿ ಹಾಡುವೇನು ಕಾರ್ಯಕ್ರಮದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸ್ವಲ್ಪ ಇವರ ಮಾತಿನಲ್ಲಿ ತೊದಲು ಇದ್ದು ಇವರು ಹೇಗೆ ಹಾಡುತ್ತಾರೆ ಎಂದವರಿಗೆ ಮೊದಲ ಸುತ್ತಿನಲ್ಲಿ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ ಸೂರ್ಯಕಾಂತ್. ಇದೀಗ ಎದೆ ತುಂಬಿ ಹಾಡುವೇನು ಕಾರ್ಯಕ್ರಮದ ಮೂಲಬಿಂದು ಹಾಗೂ ಹೆಚ್ಚು ಆಕರ್ಷಣೆ ಆಗುತ್ತಿದ್ದಾರೆ. ಇವರ ಬೆಳವಣಿಗೆ ನೋಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೂರ್ಯಕಾಂತ್ ಅವರನ್ನು ಮನೆಗೆ ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

 ಹೌದು ಸೂರ್ಯಕಾಂತ್ ಅವರಿಗೆ ಶುಭ ಕೋರಿದ ಡಿ ಬಾಸ್ ಅವರು ಮುಂದಿನ ತಮ್ಮ ಚಿತ್ರದಲ್ಲಿ ಹಾಡೊಂದನ್ನು ಹಾಡಲು ಅವಕಾಶ ನೀಡುವುದಾಗಿ  ಹೇಳಿದ್ದಾರಂತೆ ಹಾಗೆ ಭರವಸೆ ಕೊಟ್ಟಿದ್ದಾರೆ ಎಂದು ಕೇಳಿ ಬಂದಿದೆ. ಹೌದು ಸೂರ್ಯಕಾಂತ್ ಅವರು ತುಂಬಾ ಬಡವರು. ಕಷ್ಟಪಟ್ಟು ಸೂರ್ಯಕಾಂತ್ ಅವರನ್ನು ಅವರ ತಾಯಿ ಬೆಳೆಸಿದ್ದಾರೆ. ಇದನ್ನೆಲ್ಲಾ ತಿಳಿದ ನಟ ದರ್ಶನ್ ಅವರು ಸೂರ್ಯಕಾಂತ್ ಅವರಿಗೆ ಆರ್ಥಿಕ ಸಹಾಯ ಮಾಡಿರುವುದಾಗಿ ಕೆಲವು ಕಡೆ ಕೇಳಿಬಂದಿದೆ.

ಜೊತೆಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದ ದರ್ಶನ್ ಅವರ ಇದೆ ಒಳ್ಳೆಯತನಕ್ಕೆ ರಾಜ್ಯದ ಜನತೆ ಡಿ ಬಾಸ್ ಮೇಲೆ ಇನ್ನಷ್ಟು ಪ್ರೀತಿ ಹೆಚ್ಚಾಯಿತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಡಿ ಬಾಸ್ ಅವರು ಸದಾ ಯಾವಾಗಲೂ ಕಷ್ಟ ಎಂದವರ ಪರ ನಿಲ್ಲುತ್ತಾರೆ ಎನ್ನುವುದಕ್ಕೆ ಮತ್ತೆ ಸಾಬೀತಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಕಳಿಸಿ, ಹಾಗೇನೆ ಸೂರ್ಯಕಾಂತ್ ಅವರಿಗೆ ಒಳ್ಳೆಯದಾಗಲಿ ಈ ಬಾರಿ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಗೆದ್ದು ಬರಲಿ ಎಂದು ಹಾರೈಸಿ ಧನ್ಯವಾದಗಳು.....