Darshan : ಡಿ ಬಾಸ್ ಹೇರ್ ಸ್ಟೈಲ್ ಚೆಂಜ್ ಕಾರಣವೇನು ಗೊತ್ತೆ ಇಲ್ಲಿದೆ ಅಭಿಮಾನಿಗಳಿಗೆ ಸಿಹಿ ಸುದ್ದಿ

By Infoflick Correspondent

Updated:Monday, July 25, 2022, 08:12[IST]

Darshan : ಡಿ ಬಾಸ್ ಹೇರ್ ಸ್ಟೈಲ್ ಚೆಂಜ್ ಕಾರಣವೇನು ಗೊತ್ತೆ ಇಲ್ಲಿದೆ ಅಭಿಮಾನಿಗಳಿಗೆ ಸಿಹಿ ಸುದ್ದಿ

ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿ ಇರುವ ಡಿ ಬಾಸ್ ಇದೀಗ ಹೊಸ ಹೇರ್ ಸ್ಟೈಲ್ನಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. ಆ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ದರ್ಶನ್ ಟ್ರೆಂಡಿ ಹೇರ್ ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆರಂಭದ ದಿನಗಳಲ್ಲಿ ದರ್ಶನ್ ಮಾಮೂಲಿ ಹೇರ್‌ ಸ್ಟೈಲ್‌ನಲ್ಲೇ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದರು. ಬಳಿಕ ನಿಧಾನಕ್ಕೆ ಪಾತ್ರಗಳಿಗೆ ತಕ್ಕಂತೆ ಹೇರ್ ಸ್ಟೈಲ್ ಚೇಂಜ್ ಮಾಡೋಕೆ ಪ್ರಾರಂಭಿಸಿದರು. ಪ್ರತಿ ಹೇರ್ ಸ್ಟೈಲ್ ಹೊಸ ಟ್ರೆಂಡ್ ಹುಟ್ಟಾಕ್ಕಿತ್ತು.ಇದೀಗ ನಟ ದರ್ಶನ್ ಹೊಸ ಹೇರ್ ಸ್ಟೈಲ್ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಹಿಂದೆಂದೂ ಕಾಣಿಸಿಕೊಂಡಿರದ ಹೊಸ ಸ್ಟೈಲಿಶ್ ಹೇರ್ ಸ್ಟೈಲ್‌ನಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದಾರೆ. 

ವೈರಲ್ ಆಗುತ್ತಿರುವ ನಟ ದರ್ಶನ್ ಹೇರ್ ಸ್ಟೈಲ್ ಹಿಂದಿನ ರಹಸ್ಯ ಏನು ಎನ್ನುವ ಕುತೂಹಲ ಹುಟ್ಟಿಕೊಂಡಿದೆ. ಮೂಲಗಳ ಮಾಹಿತಿಯ ಪ್ರಕಾರ ನಟ ದರ್ಶನ್ ಹೇರ್ ಸ್ಟೈಲ್ ತಮ್ಮ ಮುಂದಿನ ಸಿನಿಮಾಗಾಗಿ ಈ ಹೇರ್‌ ಸ್ಟೈಲ್ ಮಾಡಿಕೊಂಡಿದ್ದಾರೆ. ದರ್ಶನ್ ಮುಂದಿನ ಸಿನಿಮಾ D56. ಇದೆ ಚಿತ್ರಕ್ಕಾಗಿ ನಟ ದರ್ಶನ್ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.  

ನಟ ದರ್ಶನ್ D56 ಸಿನಿಮಾಗಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ನಿರ್ದೇಶಕ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾದ ಬಹುತೇಕ ಕೆಲಸಗಳು ಶುರುವಾಗಿವೆ. ಸದ್ಯ ದರ್ಶನ್ ಅವರ ಲುಕ್ ಟೆಸ್ಟ್ ನಡೆಯುತ್ತಿದ್ದು, ಫಸ್ಟ್ ಲುಕ್ ಗಾಗಿ ದರ್ಶನ್ ವಿಭಿನ್ನ ಪ್ರಯೋಗ ಮಾಡುತ್ತಿದ್ದಾರೆ. ಅದರಲ್ಲಿ ಹೊಸ ಹೇರ್ ಸ್ಟೈಲ್ ಕೂಡ ಒಂದು. ಅದೇನೇ ಇದ್ದರೂ ಹೊಸ ಹೇರ್ ಸ್ಟೈಲ್‌ಲ್ಲಿ ದರ್ಶನ್ ಅವ್ರನ್ನ ಕಂಡ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 

ವರಮಹಾಲಕ್ಷ್ಮಿ ಹಬ್ಬದಂದು ಸಿನಿಮಾ ಸೆಟ್ಟೇರಲಿದೆ ಎನ್ನುವ ಮಾಹಿತಿ ಇದೆ.  ವರಮಹಾಲಕ್ಷ್ಮಿ ಹಬ್ಬದಂದು ನಟ ದರ್ಶನ್ ಲುಕ್ ಕೊಡ ಲಾಂಚ್ ಆಗಲಿದೆ. ಈ ಹೇರ್ ಸ್ಟೈಲ್ ಬಗ್ಗೆ ಸಖತ್ ಪ್ರಶಂಸೆಗಳು ಕೇಳಿ ಬರುತ್ತಿದ್ದು ವಿಭಿನ್ನ ವೆರೈಟಿ ಹೇರ್ ಸ್ಟೈಲ್ ನಲ್ಲಿ ಡಿ ಬಾಸ್ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದಾಗಿ ಅಭಿಮಾನಿಗಳು ಹರ್ಷೋದ್ಗಾರ ವ್ಯಕ್ತಪಡಿಸುತ್ತಿದ್ದಾರೆ.