ಡಿ ಬಾಸ್ ಕನಸು ಕಂಡಿದ್ದ ಜೀವನದ ಆ ಮೂರು ಆಸೆಗಳು ಯಾವುವು ಗೊತ್ತಾ..? ಅವ್ರೆ ಹೇಳಿದ್ದಾರೆ ನೋಡಿ

By Infoflick Correspondent

Updated:Thursday, March 3, 2022, 09:41[IST]

ಡಿ ಬಾಸ್ ಕನಸು ಕಂಡಿದ್ದ ಜೀವನದ ಆ ಮೂರು ಆಸೆಗಳು ಯಾವುವು ಗೊತ್ತಾ..? ಅವ್ರೆ ಹೇಳಿದ್ದಾರೆ ನೋಡಿ

ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ (Darshan)  ಈಗೀಗ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ದರ್ಶನ್ ಅವರದೇ ಆದ ಅಭಿಮಾನಿಗಳ ಬಳಗವನ್ನು ಸಹ ಗಿಟ್ಟಿಸಿಕೊಂಡಿದ್ದಾರೆ. ಹಾಗೆ ಎಲ್ಲರಿಂದಲೂ ಡಿ ಬಾಸ್ ಎಂದೇ ಕರೆಯಲ್ಪಡುವ ದರ್ಶನ್ ಅವರ ವಿಡಿಯೋಗಳನ್ನು ನೋಡುವರ ಸಂಖ್ಯೆ ಕೂಡ ಹೆಚ್ಚಿದೆ. ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಅವರ ಅಭಿಮಾನಿಗಳಿಗೆ ಸದಾ ಇರುತ್ತದೆ. ಒಬ್ಬ ಸ್ಟಾರ್ ನಟ ಎಂದರೆ ಅವರ ಬಗ್ಗೆ ತಿಳಿದುಕೊಳ್ಳುವ ಹಾಗೂ ಅವರು ಅನುಸರಿಸುವ ಮತ್ತು ಅವರ ಆಸೆಗಳ ಬಗ್ಗೆ ಎಲ್ಲರೂ ಕೂಡ ತಿಳಿದುಕೊಳ್ಳಬೇಕು ಎನ್ನುವ ಉತ್ಸಾಹ ಹೊಂದಿರುತ್ತಾರೆ.  ನಟ ದರ್ಶನ್ ಅವರು ಇದೀಗ ಅವರ ಜೀವನದ ಮೂರು ಆಸೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಹಾಗೆ ಅವರಿಗಿದ್ದ ಈ ಮೂರು ಆಸೆಗಳು ಯಾವುವು ಮತ್ತು ಹೇಗೆ ಅವುಗಳನ್ನು ನೆರವೇರಿಸಿಕೊಂಡರು ಎಂಬುದಾಗಿ ಅವರೇ ಹೇಳಿಕೊಂಡಿದ್ದಾರೆ.. ಸಂದರ್ಶನ ನೀಡುವ ವೇಳೆ ಡಿ ಬಾಸ್  (Darshan)  ಅವರು ನನಗೆ ನನ್ನ ಜೀವನದಲ್ಲಿ ಮೂರು ದೊಡ್ಡ ಆಸೆಗಳಿದ್ದವು. ಒಂದು ಡಾ. ರಾಜಕುಮಾರ್ (Raj Kumar) ಅವರನ್ನು ತಬ್ಬಿಕೊಳ್ಳಬೇಕು ಎಂದು. ಅದು ನನ್ನ ಪ್ರೀತಿಯ ರಾಮು ಸಿನಿಮಾ ಬಿಡುಗಡೆಯಾದ ಬಳಿಕ ಅವರೇ ನನ್ನನ್ನು ಮನೆಗೆ ಬರುವಂತೆ ಹೇಳಿದ್ದರು. ಎಷ್ಟು ಚೆನ್ನಾಗಿ ಅಭಿನಯ ಮಾಡಿದ್ದೀಯಾ ಎಂದು ನನ್ನನ್ನು ತಬ್ಬಿಕೊಂಡರು.ಆ ಒಂದು ಕ್ಷಣ ವಾವ್ ಇದೆಂತ ಫೀಲ್ ಎನ್ನಿಸಿತು. ಎರಡನೆಯ ಆಸೆ ರಜನಿಕಾಂತ್ ಅವರನ್ನ ಮೀಟ್ ಮಾಡಬೇಕೆಂದುಕೊಂಡಿದ್ದೆ, ಅದರಂತೆ ಶಾಸ್ತ್ರಿ ಸಿನಿಮಾ ಶೂಟಿಂಗ್ ವೇಳೆ ಪಕ್ಕದಲ್ಲಿಯೇ ಚಂದ್ರಮುಖಿ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಆಗ ರಜನಿಕಾಂತ್ ಅವರನ್ನು ಮೀಟ್ ಮಾಡಿದ್ದೆ.

ಮೂರನೆಯ ಆಸೆ ಅಮಿತಾ ಬಚ್ಚನ್ ಅವರನ್ನು ಮೀಟ್ ಮಾಡಬೇಕು ಎಂದುಕೊಂಡಿದ್ದೇನೆ. ಆದರೆ ನಾನು ಒಬ್ಬ ಸ್ಟಾರ್ ನಟನಾಗಿ ಅಲ್ಲ, ಬದಲಿಗೆ ಒಬ್ಬ ಅಭಿಮಾನಿಯಾಗಿ ಮೀಟ್ ಮಾಡಬೇಕು ಎಂದು ಹೇಳಿದ್ದರು. ಹೌದು ಅದರ ವಿಡಿಯೋ ತುಣುಕು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ದರ್ಶನ್ ಅಭಿಮಾನಿಗಳು ವಿಡಿಯೋ ನೋಡಿ ಖುಷಿಯಿಂದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೀವು ಒಮ್ಮೆ ಈ ವಿಡಿಯೋವನ್ನ ನೋಡಿ. ಹಾಗೆ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...