ಮಗಳ ಮದುವೆ ಇದೆ ಎಂದಾಗ ದರ್ಶನ್ ಶೂಟಿಂಗ್ ಸೆಟ್ಟಿನಲ್ಲೇ ಮಾಡಿದ್ದೇನು..? ಅಸಲಿ ಸತ್ಯ ಬಯಲು

By Infoflick Correspondent

Updated:Saturday, March 12, 2022, 09:22[IST]

ಮಗಳ ಮದುವೆ ಇದೆ ಎಂದಾಗ ದರ್ಶನ್ ಶೂಟಿಂಗ್ ಸೆಟ್ಟಿನಲ್ಲೇ ಮಾಡಿದ್ದೇನು..? ಅಸಲಿ ಸತ್ಯ ಬಯಲು

ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್  (Darshan)  ಅವರು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕೆಲವೊಂದಿಷ್ಟು ವಿಷಯಗಳ ಕುರಿತಾಗಿ ಹೆಚ್ಚು ಸದ್ದು ಮಾಡುತ್ತಾರೆ. ಹೌದು ನಟ ದರ್ಶನ್ ಅವರನ್ನು ಡಿ ಬಾಸ್ ಕೂಡ ಎಂದು ಅವರ ಪ್ರೀತಿಯ ಅಭಿಮಾನಿಗಳು ಕರೆಯುವುದುಂಟು. ಹಾಗೇನೆ ಇದೀಗ ದರ್ಶನ್ ಬಗ್ಗೆ ಒಂದು ಮಾಹಿತಿಯೂ ಲಭ್ಯವಾಗಿದೆ. ಅದೇನೆಂದರೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದಾಗ ಅವರ ಬಳಿ ಕಷ್ಟ ಇದೆ ಎಂದು ಹೇಳಿಕೊಂಡು ಬರುವ ಜನರು, ಆಗಾಗ ಸಹಾಯ ಬೇಡಿಕೊಂಡು ಬರುತ್ತಾರೆ. ಆಗ ಅವರು ನಡೆದುಕೊಳ್ಳುವ ರೀತಿ, ಅಸಲಿಗೆ ಸಹಾಯ ಮಾಡುವ ಮನಸ್ಥಿತಿ ಕೆಲ ನಟರು ಹೊಂದಿರುತ್ತಾರೆ. ಇನ್ನೂ ಕೆಲವರು ಅಂತಹ ವಿಷಯಗಳಲ್ಲಿ ತೀರಾ ಹಿಂದೇಟು ಹಾಕುವುದು ಮಮೂಲಿ.

ಹೌದು ನಟ ದರ್ಶನ್ ಅವರ ಜೊತೆ ಅಭಿನಯಿಸಿದ್ದ ಒಬ್ಬ ಹಿರಿಯ ಕಲಾವಿದ ಇದೀಗ ಒಂದು ವಿಷಯವನ್ನು ದರ್ಶನ್ ಕುರಿತಾಗಿ ಬಿಚ್ಚಿಟ್ಟಿದ್ದಾರೆ. ನಟ ದರ್ಶನ್ ಅವರ ಜೊತೆ ಚಕ್ರವರ್ತಿ ಸಿನಿಮಾದಲ್ಲಿ ನನ್ನದು ಒಂದು ಕ್ಯಾರೆಕ್ಟರ್ ಇತ್ತು ಎಂದ ಶಂಕನಾದ ಅಂಜನಪ್ಪ ಅವರು ಈಗ ಕೆಲ ವಿಷಯ ಹಂಚಿಕೊಂಡಿದ್ದಾರೆ. ಹೌದು ನಟ ದರ್ಶನ್ ಅವರನ್ನು  ಹುಡುಕಿಕೊಂಡು ಅಂದು ಚಕ್ರವರ್ತಿ ಸಿನಿಮಾ ಸೆಟ್ಟಿಗೆ ಒಬ್ಬ ತನ್ನ ಮಗಳ ಮದುವೆ ಇದೆ ಎಂದು ಹೇಳಿಕೊಂಡು ಬಂದಿದ್ದ. ಆಗ ದರ್ಶನ್ ಅವರನ್ನು ಮೀಟ್ ಮಾಡಬೇಕು ಎಂದಾಗ ಅವರ ಬಾಡಿಗಾರ್ಡ್ ಗಳು ಅವರನ್ನು ತಡೆದಿದ್ದರು. ದರ್ಶನ್ ಅದನ್ನು ಗಮನಿಸಿ ಹತ್ತಿರ ಕರೆದು ಮಾತನಾಡಿಸಿ ಆತನಿಂದ ಬಾಡಿಗಾರ್ಡ್ ಎಲ್ಲರನ್ನೂ ಪಕ್ಕಕ್ಕೆ ಕಳುಹಿಸಿದರು.

ಮಗಳ ಮದುವೆ ಇದೆ ತುಂಬಾ ಕಷ್ಟದಲ್ಲಿದ್ದೇನೆ ಸಾರ್ ಎಂದು ಹೇಳಿಕೊಂಡು ಬಂದಿದ್ದ. ಆತನನ್ನು ಕರೆದುಕೊಂಡು ಸೈಡಿಗೆ ಹೋಗಿ ಸಹಾಯ ಮಾಡಿದ್ದರು. ಹಾಗೇನೇ ನಂತರ ಮರಳಿ ಹೋಗುವಾಗ ಸಹಾಯ ಕೇಳಿಕೊಂಡು ಬಂದಿದ್ದ ಆತನ ಮುಖದಲ್ಲಿ ಇದ್ದ ಕಷ್ಟ ನೋವು ಎಲ್ಲವೂ ಮಾಯವಾಗಿತ್ತು. ದರ್ಶನ್ ಅವರು ಸಹಾಯ ಮಾಡಿರುವುದಾಗಿ ನನಗೆ ಗಮನಕ್ಕೆ ಬಂದಿತ್ತು. ಜೊತೆಗೆ ದರ್ಶನ್ ಅವರು ಆತನನ್ನು ಕರೆದು, ನಾನು ಮಾಡಿದ ಸಹಾಯವನ್ನು ಯಾರ ಬಳಿಯೂ ಹೇಳಿಕೊಳ್ಳಬಾರದು ಎಂದು ಹೇಳಿದ್ದನ್ನು ನೋಡಿದೆ ಎಂದು ಇದೀಗ ಅಂಜನಪ್ಪ ಅವರು ದರ್ಶನ್ ಅವರ ಸಹಾಯದ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ...