ಬ್ಯಾಡಾರಳ್ಳಿ ಚಿತ್ರಮಂದಿರ ಮಾಲೀಕ ಅಂದು ದರ್ಶನ್ ಗೆ ಏನು ಮಾಡಿದ್ದರು ಗೊತ್ತಾ..? ಡಿ ಬಾಸ್ ಬಾಯಲ್ಲೇ ಕೇಳಿ
Updated:Saturday, March 5, 2022, 20:56[IST]

ನಟ ದರ್ಶನ್ (Darshan) ಅವರಿಗೆ ಅತಿಹೆಚ್ಚು ಅಭಿಮಾನಿಗಳ ಬಳಗ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೌದು ನಟ ದರ್ಶನ್ ಅವರು ಸ್ಯಾಂಡಲ್ವುಡ್ನ ಖ್ಯಾತ ನಟ ಆಗಿ ಹೆಚ್ಚು ಅಭಿಮಾನಿಗಳ ಗಿತ್ತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಟ ದರ್ಶನ್ ಅಂದರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ, ದರ್ಶನ್ ಅವರು ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ ಎಂದರು ಅವರ ಅಭಿಮಾನಿಗಳಿಗೆ ತಡೆಯಲಾರದ ಹರ್ಷೋದ್ಗಾರ ಎಂದು ಹೇಳಬಹುದು. ಅಷ್ಟು ಖುಷಿಯಾಗುತ್ತಾರೆ ನಟ ದರ್ಶನ್ ಅವ್ರನ್ನ ಕಾಣಲು. ಹೌದು ನಟ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಚಿತ್ರ ಬಿಡುಗಡೆ ವೇಳೆ ಆಗಿದ್ದ ಒಂದು ಘಟನೆ ಬಗ್ಗೆ ಇದೀಗ ಮಾಧ್ಯಮದ ಜೊತೆ ಡಿ ಬಾಸ್ ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಚಿತ್ರ ಸಂಗೊಳ್ಳಿ ರಾಯಣ್ಣ ಬಿಡುಗಡೆ ಆದ ಸಂದರ್ಭದಲ್ಲಿ ಒಂದು ಪುಟ್ಟ ಹಳ್ಳಿಯಲ್ಲಿ ಡಿ ಬಾಸ್ ಅವರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ಎಲ್ಲರಿಗೂ ತೋರಿಸಲೇಬೇಕು ಎಂದು ಆತ, ಅವರ ಊರಿನ ಜನರೆದುರು ದೊಡ್ಡದಾಗಿ ಚಾಲೆಂಜ್ ಮಾಡಿದ್ದನಂತೆ. ನಂತರ ಸಿನಿಮಾವನ್ನು 30 ಲಕ್ಷ ಹಣಕೊಟ್ಟು ತೆಗೆದುಕೊಂಡು ಅವರ ಊರಾದ ಬ್ಯಾಡರಹಳ್ಳಿಯಲ್ಲಿ ನಟ ಡಿ ಬಾಸ್ ಅಭಿನಯದ ಸಂಗೊಳ್ಳಿ ರಾಯಣ್ಣ ಸಿನಿಮಾ ಹಾಕಿದ್ರಂತೆ. ಹೌದು ನಟ ದರ್ಶನ್ ಹಾಗೂ ಇಡೀ ಸಂಗೊಳ್ಳಿ ರಾಯಣ್ಣ ಚಿತ್ರತಂಡ ಸಿನಿಮಾ ಗೆದ್ದ ಖುಷಿಗಾಗಿ ವಿಜಯ ಯಾತ್ರೆ ಕೈಗೊಂಡಿದ್ದರು.
ಆಗ ಕೆಲ ಊರಿಗೆ ತೆರಳುವಾಗ ನಮ್ಮ ಉತ್ತರ ಕರ್ನಾಟಕದ ಬ್ಯಾಡರಹಳ್ಳಿ ಊರಿನ ಆ ಚಿತ್ರಮಂದಿರದ ಮಾಲೀಕ ದರ್ಶನ್ (Darshan) ಅವರಿಗೆ ಯಾವ ರೀತಿ ಸರ್ಪ್ರೈಸ್ ನೀಡಿದ್ದರು.ಹೇಗೆ ಬರಮಾಡಿಕೊಂಡರು, ನಂತರ ಅಲ್ಲಿ ನಡೆದ ಕೆಲವು ವಿಚಾರಗಳನ್ನು ಈಗ ಡಿ ಬಾಸ್ ಆತನ ಬಗ್ಗೆ ಹಾಗೂ ಊರಿನ ಜನತೆ ಬಗ್ಗೆ, ಹಾಗೇ ನಮ್ಮ ಉತ್ತರ ಕರ್ನಾಟಕದ ಬಗ್ಗೆ ಒಂದು ಸಂದರ್ಶನದಲ್ಲಿ ಈ ರೀತಿ ಹೇಳಿಕೊಂಡಿದ್ದಾರೆ. ಎಲ್ಲರೂ ದರ್ಶನ್ ಅವರನ್ನು ಇಷ್ಟ ಪಡುವುದು ಇದೆ ಕಾರಣಕ್ಕೆ. ನೀವೇ ಒಂದು ಬಾರಿ ಈ ಲೇಖನದಲ್ಲಿರುವ ವಿಡಿಯೋವನ್ನು ನೋಡಿ. ದರ್ಶನ್ ಅಭಿಮಾನಿಯಾಗಿದ್ದರೆ ವಿಡಿಯೋವನ್ನು ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು..