Darshan ; ಡಿ ಬಾಸ್ ಯಾಕೆ ಮಿಡಿಯಾಗಳನ್ನ ದೂರ ಇಟ್ಟರು ಗೊತ್ತಾ.? ಇಲ್ಲಿದೆ ನೋಡಿ ಅಸಲಿ ವಿಡೀಯೋ..!

By Infoflick Correspondent

Updated:Tuesday, July 26, 2022, 20:03[IST]

Darshan ; ಡಿ ಬಾಸ್ ಯಾಕೆ ಮಿಡಿಯಾಗಳನ್ನ ದೂರ ಇಟ್ಟರು ಗೊತ್ತಾ.? ಇಲ್ಲಿದೆ ನೋಡಿ ಅಸಲಿ ವಿಡೀಯೋ..!

ಅಭಿಮಾನಿಗಳ ಪಾಲಿನ ಹೆಮ್ಮೆಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್  (Darshan) ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ದರ್ಶನ್ ಅವರು ಕನ್ನಡ ಸಿನಿಮಾರಂಗದ ಅದ್ಭುತ ನಟ. ಹಾಗೂ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡು ನಂಬರ್ ಒನ್ ಸ್ಥಾನದಲ್ಲಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಕನ್ನಡದ ನಟ ಆಗಿ ಹೊರಹೊಮ್ಮಿದ್ದಾರೆ. ನಟ ದರ್ಶನ್ ಅವರನ್ನ ಅವರ ಪ್ರೀತಿಯ ಅಭಿಮಾನಿಗಳು  ಇಂದಿಗೂ ಡಿ ಬಾಸ್ ಎಂದು ಕರೆಯಲ್ಪಡುವುದಕ್ಕೆ ಹೆಚ್ಚು ಖುಷಿ ಪಡುತ್ತಾರೆ. ಹಾಗೆ ಡಿ ಬಾಸ್ ಅವರನ್ನು ಎಂದಿಗೂ ಕೂಡ ಅಭಿಮಾನಿಗಳು ಬಿಟ್ಟು ಕೊಟ್ಟಿಲ್ಲ.ಅದು ಯಾವುದೇ ವಿಚಾರ ಇರಲಿ. ಹಾಗೇನೇ ನಟ ದರ್ಶನ್ ಅವರು ಕೂಡ ಅಭಿಮಾನಿಗಳನ್ನು ಎಂದಿಗೂ ಬಿಟ್ಟು ಕೊಟ್ಟಿಲ್ಲ. ಕಷ್ಟ ಎಂದವರಿಗೆ ಸದಾ ಸಹಾಯ ಮಾಡುತ್ತಲೆ ದರ್ಶನ್ ಅವರು ಬಂದಿದ್ದಾರೆ. 

ಹೆಚ್ಚು ಅಭಿಮಾನಿಗಳೊಂದಿಗೆ ಸಂವಾದ ನಡೆಸುವ ದರ್ಶನ್ ಅವರು ಅಭಿಮಾನಿಗಳಿಗೆ ಹೆಚ್ಚು ಗೌರವ ನೀಡುತ್ತಾರೆ. ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಈಗ ತೆರೆಗೆ ಬರಲು ಸಜ್ಜಾಗಿದ್ದು ಅವರ ಕೋಟ್ಯಾನು ಕೋಟಿ ಅಭಿಮಾನಿಗಳು ಕ್ರಾಂತಿ ಸಿನಿಮಾವನ್ನು ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ.ಹಾಗೆ ಈ ಸಿನಿಮಾ ಬಗ್ಗೆ ಯಾವ ನ್ಯೂಸ್ ಮಾಧ್ಯಮಗಳಲ್ಲೂ ಸಹ ತೋರಿಸುತ್ತಿಲ್ಲ. ಸಿನಿಮಾ ಬಗ್ಗೆ ಏನು ಪ್ರಚಾರ ಮಾಡುತ್ತಿಲ್ಲ. ನ್ಯೂಸ್ ಮಾಧ್ಯಮಗಳು ಮಾಡದೆ ಹೋದ್ರೆ ಏನಾಯ್ತು ನಮ್ಮ ನಟನ ಸಿನಿಮಾವನ್ನು ನಾವು ಪ್ರಚಾರ ಮಾಡುತ್ತೇವೆ ಎಂದು ತೊಡೆ ತಟ್ಟಿ ದರ್ಶನ್ ಅವರ ಅಭಿಮಾನಿಗಳು ಪಣ ತೊಟ್ಟಿದ್ದಾರೆ. ಈಗ ಡಿ ಬಾಸ್ ಅಭಿಮಾನಿಗಳಿಂದ ಹಾಗೂ ಅವರ ಅಪಾರ ಬಳಗಗಳಿಂದ ಸಿನಿಮಾ ಪ್ರಚಾರ ಆಗುತ್ತಿದೆ.

ಇದು ಇನ್ನೊಂದು ಕಡೆ ಅತಿ ದೊಡ ಖುಷಿಯ ವಿಚಾರ ಎನ್ನಬಹುದು.  ಹೌದು ಇದೇ ಮೊಟ್ಟಮೊದಲ ಬಾರಿಗೆ ಈ ರೀತಿಯ ಒಂದು ಪ್ರಯೋಗ ಆಗುತ್ತಿದೆ. ದರ್ಶನ್ ಅವರು ಇದರಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಬಹುದು. ದರ್ಶನ್ ಅವರು ಯಾಕೆ ಈ ನ್ಯೂಸ್ ಮೀಡಿಯಾಗಳನ್ನ ದೂರವೇ ಇಟ್ಟಿದ್ದಾರೆ, ಅಸಲಿಗೆ ಆ ಅದಕ್ಕೆ ಕಾರಣವೇನು ಎಂದೆಲ್ಲಾ ಸಾಕಷ್ಟು ಜನರಿಗೆ ಗೊತ್ತಿಲ್ಲ. ಈ ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಅದಕ್ಕೆ ಕಾರಣ ತಿಳಿದುಬಂದಿದೆ. ನಟ ದರ್ಶನ್ ಅವರೆ ನ್ಯೂಸ್ ಮೀಡಿಯಾ ಒಂದರಲಿ ಕುಳಿತು ಆ ಮೀಡಿಯಾದವರಿಗೆ ಚಳಿ ಬಿಡಿಸಿದ್ದಾರೆ. ಹಾಗೆ ಯಾಕೆ ಇದು ಆಗಿದ್ದು ಸಹ ಅವರೇ ಹೇಳಿದ್ದಾರೆ. ಈ ಮೀಡಿಯಾ ಕಂಡ್ರೆ ದರ್ಶನ್ ಅವರಿಗೆ ಯಾಕೆ ಆಗಲ್ಲ ಎಂಬುವ ವಿಚಾರವನ್ನು ಅವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ. ಒಮ್ಮೆ ನೋಡಿ ಮತ್ತು ಕ್ರಾಂತಿ ಬಹುನಿರೀಕ್ಷಿತ ಸಿನಿಮಾವಾಗಿದ್ದು ಅದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ( video credit : d boss samrajya )