Darshan : ಕ್ರಾಂತಿ ಚಿತ್ರವನ್ನು ಪ್ರಚಾರ ಮಾಡಲ್ಲವೆಂದ ನ್ಯೂಸ್ ಮಾಧ್ಯಮಗಳು..! ಡಿ ಬಾಸ್ ಫ್ಯಾನ್ ಮಾಡಿದ್ದೇನು
Updated:Wednesday, June 15, 2022, 13:20[IST]

ಕ್ರಾಂತಿ ಕನ್ನಡದ ಆಕ್ಷನ್-ಡ್ರಾಮಾ ಚಿತ್ರವಾಗಿದ್ದು ವಿ ಹರಿಕೃಷ್ಣ ಅವರು ನಿರ್ದೇಶಿಸಿದ್ದಾರೆ. ನಟ ದರ್ಶನ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಶೈಲಜಾ ನಾಗ್, ಬಿ.ಸುರೇಶ್ ಜಂಟಿಯಾಗಿ ನಿರ್ಮಿಸಿರುವ ಚಿತ್ರ ಇದಾಗಿದ್ದು, ವಿ ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಾರೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ ಫಾಲೋವಿಂಗ್ ಬಗ್ಗೆ ನಾವು ಏನೂ ಹೇಳಬೇಕಾಗಿಲ್ಲ. ಈ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅವರದು ದೊಡ್ಡ ಅಭಿಮಾನಿ ಬಳಗವಿದೆ. ಅವರದೇ ಆದ ಅಭಿನಯಕ್ಕೆ ಫಿದಾ ಆಗಿ ಅವರನ್ನು ಪ್ರೀತಿಸುವ ಅಭಿಮಾನಿ ಬಳಗ ತುಂಬಾ ದೊಡ್ಡದಿದೆ ಎನ್ನಬಹುದು.
ಹೌದು ಕ್ರಾಂತಿ ಸಿನಿಮಾ ದರ್ಶನ್ ಅವರ 55ನೇ ಸಿನಿಮಾ. ಇದು ಕೂಡ ಕನ್ನಡ ಚಿತ್ರರಂಗದ ಇನ್ನೊಂದು ದೊಡ್ಡದಾಗಿ ಬರುತ್ತಿರುವ ಸಿನಿಮಾ, ದೊಡ್ಡ ಮೈಲುಗಲ್ಲು. ನಟ ದರ್ಶನ್ ಅವರಿಗೆ ನಾಯಕಿಯಾಗಿ ನಟಿ ರಚಿತಾ ರಾಮ್ ಅವರು ಅಭಿನಯಿಸುತ್ತಿದ್ದು ಇನ್ನೊಂದು ಕಡೆ ಪೋಷಕ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಪೋಸ್ಟರ್, ಹಾಗೂ ಟೀಸರ್ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಎಲ್ಲವೂ ಸಹ ಪ್ರಾಮಿಸಿಂಗ್ ಆಗಿದೆ. ದರ್ಶನ್ ಅವರು ಈ ಸಿನಿಮಾ ಮೂಲಕ ದೊಡ್ಡ ಹೆಸರನ್ನು ಮಾಡುತ್ತಾರೆ, ಹಾಗೆ ಇನ್ನಷ್ಟು ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಳ್ಳುವುದರಲಿ ಅನುಮಾನವಿಲ್ಲ. ಆ ನಿರೀಕ್ಷೆ ಇದೆ ಎನ್ನುತ್ತಾರೆ ಅಭಿಮಾನಿಗಳು. ಆದರೆ ಕನ್ನಡದ ಕೆಲ ನ್ಯೂಸ್ ಮಾಧ್ಯಮಗಳು ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುವುದಿಲ್ಲ,
ನಟ ದರ್ಶನ್ ಅವರ ಅಭಿನಯದ ಕ್ರಾಂತಿ ಸಿನಿಮಾವನ್ನು ನಾವು ಪ್ರಚಾರ ಮಾಡುವುದೆ ಇಲ್ಲವೆಂದು ಹೇಳುತ್ತಿದ್ದಾರಂತೆ. ಈ ಮಾತು ಅಭಿಮಾನಿಗಳ ಕಿವಿಗೆ ಬಿದ್ದಿದ್ದು ನೀವು ಪ್ರಚಾರ ಮಾಡದಿದ್ದರೆ ಏನು ಹೋಯಿತು, ನಾವು ಹೇಗೆ ಡಿ ಬಾಸ್ ಅವರ ಸಿನಿಮಾವನ್ನು ಗೆಲ್ಲಿಸಬೇಕು ಎಂಬುದು ನಮಗೂ ಸಹ ಗೊತ್ತಿದೆ. ನಾವು ನಿಮ್ಮ ನ್ಯೂಸ್ ನೋಡಿದರೆ ನಿಮಗೆ ಟಿ ಆರ್ಪಿ ಬರುತ್ತೆ, ನಮ್ಮಿಂದ ನೀವು, ನಿಮ್ಮಿಂದ ನಾವು ಅಲ್ಲ, ನಟ ಡಿ ಬಾಸ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ, ಅವರೇ ಸಿನಿಮಾವನ್ನು ಗೆಲ್ಲಿಸುತ್ತಾರೆ ಎಂದು ಈಗ ಅಭಿಮಾನಿಯೊಬ್ಬ ಕೆಲ ನ್ಯೂಸ್ ಚಾನೆಲ್ ಗಳನ್ನ ತರಾಟೆಗೆ ತೆಗೆದುಕೊಂಡಿದ್ದಾನೆ. ಇಲ್ಲಿದೆ ನೋಡಿ ವಿಡಿಯೋ, ಈತನ ಮಾತನ್ನು ಒಮ್ಮೆ ಕೇಳಿ. ಮಾಹಿತಿ ಶೇರ್ ಮಾಡಿ.