Darshan : ದರ್ಶನ್ ನಟನೆಯ ಹೊಸ ಸಿನಿಮಾ ಚಿತ್ರೀಕರಣಕ್ಕೆ ದಿನಾಂಕ ನಿಗದಿ ಇಲ್ಲಿದೆ ಫುಲ್ ಮಾಹಿತಿ

By Infoflick Correspondent

Updated:Monday, August 1, 2022, 14:06[IST]

Darshan :  ದರ್ಶನ್ ನಟನೆಯ ಹೊಸ ಸಿನಿಮಾ ಚಿತ್ರೀಕರಣಕ್ಕೆ ದಿನಾಂಕ ನಿಗದಿ ಇಲ್ಲಿದೆ ಫುಲ್ ಮಾಹಿತಿ

ಕ್ರಾಂತಿ ಸಿನಿಮಾ ತೆರೆಕಾಣೋದಕ್ಕೂ ಮೊದಲೇ ಮುಂದಿನ ಹೊಸ ಚಿತ್ರದ ಶೂಟಿಂಗ್ ಸೆಟ್‌ಗೆ ಹೆಜ್ಜೆಯಿಟ್ಟಿದ್ದಾರೆ  ಡಿ-ಬಾಸ್. ಹೊಸ ಸಿನಿಮಾ ಸೆಟ್ಟೇರೋದಕ್ಕೆ ಡೇಟ್ ಫಿಕ್ಸ್ ಆಗಿದ್ದುದರ್ಶನ್‌ರ ಮುಂದಿನ ಚಿತ್ರ ಸೆಟ್ಟೇರಲು ದಿನಾಂಕ ನಿಗದಿಯಾಗಿದೆ.  ಕ್ರಾಂತಿ ಸಿನಿಮಾದ ಬಿಡುಗಡೆಯ ಹಂತದಲ್ಲಿರುವ ಡಿಬಾಸ್ ಈ ಬಾರಿ ಮಾತ್ರ ಯಾವುದೇ ಬ್ರೇಕ್ ಇಲ್ಲದೆ, ಒಮ್ಮೆಲೆ ಹೊಸ ಸಿನಿಮಾದ ಚಿತ್ರೀಕರಣಕ್ಕೆ ಹೆಜ್ಜೆಯಿಟ್ಟಿದ್ದಾರೆ. ದರ್ಶನ್‌ರ ಹೊಸ ಸಿನಿಮಾ 'ಕ್ರಾಂತಿ'ಯ ಡಬ್ಬಿಂಗ್ ಅನ್ನು ಇತ್ತೀಚೆಗಷ್ಟೆ ದರ್ಶನ್ ಮುಗಿಸಿದ್ದು, ಆ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಗೆ ಬಂದಿವೆ. ಈ ನಡುವೆ ದರ್ಶನ್ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ.‌ 

ವರಮಹಾಲಕ್ಷ್ಮಿ ಹಬ್ಬದಂದು ಅದ್ಧೂರಿಯಾಗಿ ಸಿನಿಮಾದ ಮುಹೂರ್ತ ನಡೆಯಲಿದೆ. ಅಂದರೆ ಆಗಸ್ಟ್ 5ರಿಂದಲೇ ಪ್ರಾರಂಭವಾಗಲಿದೆ. ದರ್ಶನ್‌ರ 56ನೇ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡುವವರಿದ್ದಾರೆ.ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರದ ಟೈಟಲ್ ಕಾಟೇರ ಎನ್ನಲಾಗ್ತಿದ್ದು, ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಹೇಳಬೇಕಿದೆ.

ನೈಜ ಘಟನೆಗಳನ್ನು ಆಧರಿಸಿದೆ ಎಂದು ಹೇಳಲಾದ ಚಿತ್ರದ (ಡಿ 56) ಫಸ್ಟ್-ಲುಕ್ ನಲ್ಲಿ ಕುರಿಗಳ ಹಿಂಡನ್ನು ರಕ್ಷಿಸುವ ನಾಯಿಯನ್ನು ಒಳಗೊಂಡಿದೆ. ಕುರಿಗಳ ರಕ್ಷಣೆಯನ್ನು ತನ್ನ ಪ್ರಧಾನ ಕರ್ತವ್ಯವೆಂದು ನಾಯಿ ಪರಿಗಣಿಸುತ್ತದೆ ಮತ್ತು ಕುರಿಗಳನ್ನು ರಕ್ಷಿಸಲು ಅದು ತೆಗೆದುಕೊಳ್ಳುವ ತ್ಯಾಗವು ಅದರ ನಿಸ್ವಾರ್ಥ ಸ್ವಭಾವವನ್ನು ಪ್ರತಿನಿಧಿಸುತ್ತದೆ" ಎಂದು ನಿರ್ದೇಶಕ ತರುಣ್ ಸುದೀರ್ ತಿಳಿಸಿದ್ದಾರೆ.