ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ನಟ ದರ್ಶನ್ ಹೇಳಿದ್ದೇನು..? ಅಸಲಿ ಮಾಹಿತಿ ಈಗ ಲಭ್ಯ..!!

By Infoflick Correspondent

Updated:Saturday, March 5, 2022, 09:44[IST]

ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ನಟ ದರ್ಶನ್ ಹೇಳಿದ್ದೇನು..? ಅಸಲಿ ಮಾಹಿತಿ ಈಗ ಲಭ್ಯ..!!

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ನಿನ್ನೆಯಷ್ಟೇ 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹೌದು ಈ ಕಾರ್ಯಕ್ರಮಕ್ಕೆ ಕನ್ನಡದ ಹಿರಿಯ ನಟಿ ಭಾರತಿ,  ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್, ಜೊತೆಗೆ ಸಾಕಷ್ಟು ನಿರ್ದೇಶಕ ನಿರ್ಮಾಪಕರು ಕೂಡ ಆಗಮಿಸಿದ್ದರು. ಕನ್ನಡದ ದಿಗ್ಗಜ ಹಿರಿಯ ಕಲಾವಿದರು ಸಹ ಆಗಮಿಸಿದ್ದರು. ಜೊತೆಗೆ ನಮ್ಮ ಕರ್ನಾಟಕ ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡ ಆಗಮಿಸಿದ್ದರು. ಹೌದು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆಯಿತು.

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್  (Darshan)  ಅವರು ಕೂಡ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಕಾರ್ಯಕ್ರಮ ವೇಳೆ ವೇದಿಕೆ ಮೇಲೆ ಕೆಲ ಅನಿಸಿಕೆ ಹಂಚಿಕೊಂಡರು. ವೇದಿಕೆ ಮೇಲೆ ಮಾತನಾಡಲು ಶುರು ಮಾಡಿದ ದರ್ಶನ್ ಅವರು ಕನ್ನಡದ ದಿಗ್ಗಜರು ಗಳಿಗೆಲ್ಲ ನನ್ನ ನಮಸ್ಕಾರ, ಎಲ್ಲಾ ದೊಡ್ಡ ದೊಡ್ಡ ದಿಗ್ಗಜರಿಗೆ ನಿರ್ಮಾಪಕ ನಿರ್ದೇಶಕ ಹಿರಿಯರೆಲ್ಲರ ಪಾದಗಳಿಗೆ ನಮಸ್ಕಾರ. ಹಾಗೆ ಭಾರತಿ ಅಮ್ಮನವರಿಗೆ ನಮಸ್ಕಾರ. ಜೊತೆಗೆ ಶ್ರೀಮತಿ ಪುನೀತ್ ರಾಜಕುಮಾರ್ ಅವರಿಗೂ ಕೂಡ ನಮಸ್ಕಾರ ತಿಳಿಸಿದರು. ಹೆಚ್ಚಿಗೆ ಏನೂ ಮಾತನಾಡುವುದಿಲ್ಲ ಎಂದ ದರ್ಶನ್ ಅವರು, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರಕ್ಕೆ ಒಳ್ಳೆಯದಾಗಲಿ, ಹಾಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿನಿ ಪ್ರಿಯರು ಆಗಾಗ ಹೆಚ್ಚು ಸಿನಿಮಾಗಳನ್ನು ನೋಡುತ್ತಾರೆ.

ಈಗ ಅಲ್ಲ ಬದಲಿಗೆ ಅವರು ಸಚಿವರಾಗಿದ್ದಾಗಲೂ ಸಿನಿಮಾ ನೋಡುತ್ತಿದ್ದರು. ಹಾಗಾಗಿ ನನಗೆ ಅವರು ಬಹಾಳ ಇಷ್ಟ ಆಗುತ್ತಾರೆ. ಎರಡು ಗಂಟೆ ಸಮಯ ಮೀಸಲಿಡುತ್ತಿದ್ದರು. ಎಂದು ಹೇಳಿ ಡಿ ಬಾಸ್ ಮಾತನಾಡಿದರು. ಹೌದು ಪುನೀತ್ ರಾಜ್ ಕುಮಾರ್ ಅವರ ಎಲ್ಲಾ ಕೆಲಸಗಳನ್ನು ಇದೀಗ ಅವರ ಪತ್ನಿ ಅಶ್ವಿನಿ ಪುನೀತ್  (Aswini Puneeth) ಅವರು ನೆರವೇರಿಸಿಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ದರ್ಶನ್ ಅವರು ಈ ಮುಂಚೆ ಹೇಳಿದ್ದು ಅಶ್ವಿನಿ ಪುನೀತ್ ಅವರು ಹೆಚ್ಚು ಧೈರ್ಯವಂತರು, ಅವರ ಕಾರ್ಯ ಕೆಲಸಗಳಿಗೆ ನಾನು ಕೂಡ ಸಪೋರ್ಟ್ ಹಾಗೆ ನಿಂತಿರುತ್ತೇನೆ ಎಂದಿದ್ದರು. ಪುನೀತ್ ಅವರು ಮತ್ತು ದರ್ಶನ್ ಅವರ ಸರಿ ಇಲ್ಲವೆಂದು ಅಪ್ಪು ಬದುಕಿದ್ದಾಗ ಕೆಲ ಅಭಿಮಾನಿಗಳು ಕಿತ್ತಾಟ ನಡೆಸಿದ್ದುಂಟು.    

ಆದರೆ ಅಪ್ಪು ಇಲ್ಲವಾದ ಬಳಿಕ ದರ್ಶನ್ ಮತ್ತು ಪುನೀತ್ (Puneeth Rajkumar) ಅವರದು ಎಂಥಾ ಸ್ನೇಹ ಹೊಂದಿದ್ದರು ಎಂಬುದಾಗಿ ಈಗ ಗೊತ್ತಾಗುತ್ತಿದೆ. ಇದೀಗ ಈ ಕಾರ್ಯಕ್ರಮ ಮೂಲಕ ರಾಜ್ ಕುಟುಂಬ ಅಂದ್ರೆ ದರ್ಶನ್ ಅವರಿಗೆ ಎಂತಹ ಪ್ರೀತಿ ವಾತ್ಸಲ್ಯ ಮಮತೆ ಇದೆ ಎಂಬುದಾಗಿ ಗೊತ್ತಾಗುತ್ತದೆ..(Video credit : btv news)