Darshan : ತಮ್ಮ ಮುಂದಿನ ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ನಟಿಯಾಗಿದ್ದಕ್ಕೆ ಡಿ ಬಾಸ್ ಪ್ರತಿಕ್ರಿಯೆ ಹೀಗಿತ್ತು..!

By Infoflick Correspondent

Updated:Friday, August 5, 2022, 19:22[IST]

Darshan :  ತಮ್ಮ ಮುಂದಿನ ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ನಟಿಯಾಗಿದ್ದಕ್ಕೆ ಡಿ ಬಾಸ್ ಪ್ರತಿಕ್ರಿಯೆ ಹೀಗಿತ್ತು..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರ ಡಿ 56 ಸಿನಿಮಾದ ಟೈಟಲ್ ಲಾಂಚ್ ಇನ್ನೂ ಕೂಡ ಆಗಿಲ್ಲ ಆದರೆ ಅವರ 56ನೇ ಸಿನಿಮಾಗೆ ನಾಯಕಿಯಾಗಿ ಯಾರು ಬರುತ್ತಾರೆ ಎಂದು ಮೊನ್ನೆಯಿಂದ ಚರ್ಚೆಯಾಗುತ್ತಿತ್ತು. ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು,  ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಡಿ ಬಾಸ್ ಅವರಿಗೆ ಯಾರು ನಟಿಯಾಗಿ ತೆರೆಯ ಮೇಲೆ ಅವರ ಮುಂದಿನ ಚಿತ್ರದಲಿ ಕಾಣಿಸಿಕೊಳ್ಳುತ್ತಾರೆ ಎಂದು ಅವರ ಅಭಿಮಾನಿಗಳು ಹೆಚ್ಚಾಗಿ ತಲೆಕೆಡಿಸಿಕೊಂಡಿದ್ದರು. ಇಂದು ವರಮಹಾಲಕ್ಷ್ಮಿ ಪೂಜೆ ಪ್ರಯುಕ್ತ ಅವರ ಮುಂದಿನ ಚಿತ್ರ ಕ್ರಾಂತಿ ಸಿನಿಮಾದ ಒಂದು ಪೋಸ್ಟರ್ ನೋಡಿ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ ಎನ್ನಬಹುದು. 

ನಟ ದರ್ಶನ್ ಅವರ ಮುಂದಿನ ಚಿತ್ರಕ್ಕೆ ಯಾರು ನಟಿ ಎಂಬುದಾಗಿ ಚರ್ಚೆ ನಡೆದಿದ್ದು, ಕನ್ನಡದ ನಗುಮುಖದ ಚೆಲುವೆ ಡಾಶಿಂಗ್ ಸ್ಟಾರ್ ನಟಿ ಮಾಲಾಶ್ರೀ ಅವರ ಮಗಳು ಎಂಬುದಾಗಿ ತಿಳಿದು ಬಂದಿದೆ. ಕನಸಿನ ರಾಣಿಯಾಗಿದ್ದ ನಟಿ ಮಾಲಾಶ್ರೀ ಅವರ ಮಗಳ ಹೆಸರು ಅನನ್ಯ ರಾಮು. ಇದೀಗ ದರ್ಶನ್ ಅವರ ಸಿನಿಮಾದಲ್ಲಿ ಮೊಟ್ಟಮೊದಲ ಸಿನಿಮಾಗೆ ನಾಯಕಿಯಾಗಿ ಅನನ್ಯ ರಾಮು ಅವರು ಆಯ್ಕೆ ಆಗಿದ್ದು ಅವರಿಗೂ ಖುಷಿ ತಂದಿದೇಯಂತೆ. ಹೌದು, ಚಿತ್ರರಂಗಕ್ಕೆ ಇವರನ್ನು ರಾಧನ ರಾಮ್ ಎನ್ನುವ ಹೆಸರಿನ ಮೂಲಕ ಪರಿಚಯ ಮಾಡಿಕೊಡಲಾಗಿದೆ. ಇದರ ಬಗ್ಗೆ ದರ್ಶನ್ ಅವರು ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಹೌದು 'ಎಲ್ಲರಿಗೂ ನಮಸ್ಕಾರ, ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು... ಎಂದು ಅವರ ಮುಂದಿನ 56ನೇ ಸಿನಿಮಾ ಬಗ್ಗೆಯೇ ಮಾತನಾಡಿದರು.

ಈಗಲೇ ಏನನ್ನ ಹೇಳಲು ಆಗುವುದಿಲ್ಲ, ನಮ್ಮ ಡಿ56 ಚಿತ್ರದ ಸಿನಿಮಾದ ಟೈಟಲ್ ಇಷ್ಟರಲ್ಲೇ ಹೇಳುತ್ತೇವೆ ಎಂದರು. ಹಾಗೆ ಮಾಲಾಶ್ರೀ ಅವರ ಮಗಳು ನಿಮಗೆ ನಾಯಕಿಯಾಗಿರುವ ವಿಚಾರದ ಬಗ್ಗೆ ಏನು ಹೇಳುತ್ತೀರಿ ಎಂದಾಗ, ಮಾಲಾಶ್ರೀ ಅವರು ತುಂಬಾ ದೊಡ್ಡವರು, ಅಂತ ನಟಿಯ ಬಗ್ಗೆ ನಾವು  ಮಾತನಾಡಲು ನಮಗೆ ಯೋಗ್ಯತೆ ಇದೆ ಏನಮ್ಮ, ಅವರು ಎಂತಹ ದೊಡ್ಡ ನಟಿ, ಇನ್ನೂ ಅವರ ಮಗಳು ಕೇಳಬೇಕಾ, ಇರಲಿ ಹೊಸಬರು ಚಿತ್ರ ರಂಗಕ್ಕೆ ಬರಬೇಕು ಎಂದು ನಗೆಯ ಬೀರಿದರು. ಅವರಿಗೆ ಏನಾದರೂ ಆಲ್ ದಿ ಬೆಸ್ಟ್ ಹೇಳಲು ಬಯಸುತ್ತೀರಾ ಎಂದಾಗ ದರ್ಶನ್ ಅವರು, ಅವರೇ ಎಲ್ಲಾ ಇಗಾಗ್ಲೇ ಪ್ರಿಪೇರ್ ಆಗಿ ಬಂದಿದ್ದಾರೆ ಎಂದರು. ನಟ ದರ್ಶನ್ ಅವರ ಮುಂದಿನ ಚಿತ್ರಕ್ಕೆ ಮತ್ತು ಅವರ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ, ನಟಿಯಾಗಿ ಬೆಳ್ಳಿ ತೆರೆಗೆ ಕಾಲಿಡುತ್ತಿರುವ ಮಾಲಾಶ್ರೀ ಪುತ್ರಿಗೂ ಸಹ ಶುಭಕೋರಿ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...