ಕಾಲಿಗೆ ಬಿದ್ದು ಬಿಡ್ತಿನಿ ಸಾರ್, ಅದನ್ನ ಮಾಡೋಕೆ ಆಗಲ್ಲವೆಂದ ಡಿ ಬಾಸ್..! ಇದರ ಅಸಲಿಯತ್ತೇನು..?

By Infoflick Correspondent

Updated:Thursday, April 21, 2022, 22:25[IST]

ಕಾಲಿಗೆ ಬಿದ್ದು ಬಿಡ್ತಿನಿ ಸಾರ್, ಅದನ್ನ ಮಾಡೋಕೆ ಆಗಲ್ಲವೆಂದ ಡಿ ಬಾಸ್..! ಇದರ ಅಸಲಿಯತ್ತೇನು..?

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಅವರದೇಯಾದ ಅಭಿನಯದ ಮೂಲಕ ಹೆಚ್ಚು ಅಭಿಮಾನ ಬಳಗ ಗಿಟ್ಟಿಸಿಕೊಂಡು ಕನ್ನಡ ಚಿತ್ರಗಳನ್ನು ದೊಡ್ಡಮಟ್ಟದಲ್ಲಿ ಬೆಳೆಸಿದ್ದಾರೆ. ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿ ಇಂದಿಗೂ ಕೂಡ ಕನ್ನಡ ಚಿತ್ರರಂಗ ಎಂದರೆ ಒಂದು ಗೌರವ ತರುವಂತೆ ಮಾಡಿ ಹೋಗಿದ್ದಾರೆ. ಹೌದು ಅಣ್ಣಾವ್ರ ಬಗ್ಗೆ ನಾವು ಏನೂ ಹೇಳಬೇಕಾಗಿಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಎಷ್ಟು ಶ್ರದ್ಧೆಯಿಂದಲೇ ಇಷ್ಟಪಟ್ಟು ಆಯಾ ಪಾತ್ರವನ್ನು ಸವಿದು ಅಭಿನಯ ಮಾಡುತ್ತಿದ್ದರು ಎಂದರೆ ಅವರ ನಟನೆಗೆ ಅವರೇ ಸಾಟಿ ಎನ್ನಬಹುದು. ಆ ಬಗ್ಗೆ ನಮಗೆ ಮಾತನಾಡುವುದಕ್ಕೆ ಏನು ಇಲ್ಲ. 

ಇದೆ ವಿಚಾರವಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಬಾಸ್ ಅವರು ಕೂಡ ಮಾತನಾಡಿದ್ದರು. ಹಿಸ್ಟಾರಿಕಲ್ ಸಿನಿಮಾ ಬಗ್ಗೆ ದರ್ಶನ್ ಅವರಿಗೆ ಪ್ರಶ್ನೆ ಮಾಡಲಾಗಿತ್ತು. ಆಗ ನಟ ದರ್ಶನ್ ಅವರು ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೌದು ಡಿ ಬಾಸ್ ಹೇಳಿದ ಹಾಗೆ, 'ನೋಡಿ ಸರ್ ಈಗಾಗಲೇ ಕೆಲವು ಸಕತ್ ಸಿನಿಮಾಗಳು ಬಂದು ಹೋಗಿವೆ. ಅವುಗಳದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಹಾಗೆ ಆ ಪಾತ್ರ ಮಾಡಿದ ನಟರ ಪಾತ್ರಗಳನ್ನು ಮತ್ಯಾರು ಮಾಡಲು ಆಗುವುದಿಲ್ಲ. ಅಣ್ಣಾವ್ರು ಮಾಡಿದ ಹಿರಣ್ಯಕಶಿಪು, ಹಾಗೆ ಭಕ್ತ ಪ್ರಹ್ಲಾದ ಶ್ರೀನಿವಾಸ ಯಾವುದೇ ಪಾತ್ರಗಳು ಬಂದರೂ ನನ್ನ ಕೈಯಲ್ಲಿ ಆಗಲ್ಲ ಸರ್ ಎನ್ನುತ್ತೇನೆ, ಬೇಕಾದರೆ ಕಾಲು ಬಿದ್ದು ಬಿಡುತ್ತೇನೆ    ನನ್ನ ಕೈಯಲ್ಲಿ ಅವರು ಮಾಡಿದ ಪಾತ್ರ ಮಾಡಲಾಗುವುದಿಲ್ಲ ಎಂದು ಹೇಳುತ್ತೇನೆ ಎಂದಿದ್ದಾರೆ.  

ಹಾಗೆ ನಾರಾಯಣನ ಪಾತ್ರ ನಟ ಅನಂತನಾಗ್ ಕೈಯಲ್ಲಿ ಬಿಟ್ಟರೆ ಯಾರೂ ಮಾಡಲಾಗುವುದಿಲ್ಲ. ಅವರು ಯಾರು ದುರ್ಯೋಧನ ಪಾತ್ರ ಮಾಡಲಿಲ್ಲ, ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡಲಿಲ್ಲ, ಹಾಗಾಗಿ ನಾನು ಮಾಡಿದ್ದೇನೆ. ಅಣ್ಣಾವ್ರು ಮಾಡಿದ ಯಾವ ಪಾತ್ರಗಳನ್ನು ನಾನು ಮಾಡುವುದಿಲ್ಲ ಎಂದಿದ್ದಾರೆ ನಟ ದರ್ಶನ್. ಹೌದು ದರ್ಶನ್ ಹಿಸ್ಟರಿಕಲ್ ಚಿತ್ರಗಳ ಬಗ್ಗೆ ಮಾತನಾಡಿದ ಈ ವಿಡಿಯೋ ಇದೀಗ ತುಂಬಾ ವೈರಲ್ ಆಗುತ್ತಿದೆ. ಅದೆಷ್ಟು ಪ್ರೀತಿಯಿಂದ ಸರಳತೆಯಿಂದ ಡಿ ಬಾಸ್ ಅವರು ಮಾತನಾಡುತ್ತಾರೆ ಎಂಬುದಾಗಿ ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ತಿಳಿದುಕೊಳ್ಳಿ. ಹಾಗೆ ಇಷ್ಟವಾದಲ್ಲಿ ವಿಡಿಯೋ ಶೇರ್ ಮಾಡಿ ಧನ್ಯವಾದಗಳು..(video credit  :vijaya lanchana )