ಪುನೀತ್ ರಾಜ್ ಕುಮಾರ್ ಸತ್ತ ಮೇಲೆ ತೋರಿಸಿದ್ದನ್ನ ನನಗೆ ಈಗಲೇ ತೋರಿಸಿದರು ಎಂದ ದರ್ಶನ್..!

By Infoflick Correspondent

Updated:Sunday, August 7, 2022, 10:22[IST]

ಪುನೀತ್ ರಾಜ್ ಕುಮಾರ್ ಸತ್ತ ಮೇಲೆ ತೋರಿಸಿದ್ದನ್ನ ನನಗೆ ಈಗಲೇ ತೋರಿಸಿದರು ಎಂದ ದರ್ಶನ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ  ಚಿತ್ರ ಕ್ರಾಂತಿ ಈಗಾಗಲೇ ಎಲ್ಲಾ ಸಿದ್ಧತೆಯನ್ನು ನಡೆಸಿಕೊಂಡಿದೆ. ಹೌದು ತೆರೆಯ ಮೇಲೆ ದರ್ಶನ್ ಅವರನ್ನು ಕ್ರಾಂತಿ ಸಿನಿಮಾ ಮೂಲಕ ಮತ್ತೊಮ್ಮೆ ಅದ್ದೂರಿಯಾಗಿ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ದೊಡ್ಡ ಸಾಹಸಕ್ಕೆ ಕೈ ಹಾಕಿರುವುದು ನಿಮಗೆ ಗೊತ್ತು. ದರ್ಶನ್ ಅವರ ಸಿನಿಮಾ ಕ್ರಾಂತಿಯನ್ನು ಯಾವ ನ್ಯೂಸ್ ಮಾಧ್ಯಮವು ಸಹ ಪ್ರಚಾರ ಮಾಡುತ್ತಿಲ್ಲ. ಹಾಗಾಗಿ ನಿಮ್ಮ ಅವಶ್ಯಕತೆ ನಮಗೆ ಇಲ್ಲ ಎಂದು ಡಿ ಬಾಸ್ ಅಭಿಮಾನಿಗಳು ಅವರೇ ಸ್ವತಹ ಕ್ರಾಂತಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಪ್ರಮೋಷನ್ ಮಾಡುತ್ತಿದ್ದಾರೆ. ದರ್ಶನ್ ಅವರು ಸಿನಿಮಾ ಮೇಲೆ ಅವರ ಪ್ರೀತಿಯ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ಫಿದಾ ಆಗಿದ್ದಾರೆ ಎನ್ನಬಹುದು.

ಇತ್ತೀಚಿಗೆ ಸಂದರ್ಶನದಲ್ಲಿ ನಟ ದರ್ಶನ್ ಅವರು ಅವರ ಅಭಿಮಾನಿಗಳ ಬಗ್ಗೆ ಮಾತನಾಡಿರುವ ಒಂದು ವಿಡಿಯೋ ಈಗ ವೈರಲ್ ಆಗುತ್ತಿದ. ದರ್ಶನ್ ಅವರು ಹೇಳುವ ಹಾಗೆ ಪುನೀತ್ ರಾಜಕುಮಾರ್ ಅವರು ಹೋದಮೇಲೆ ನಿಜಕ್ಕೂ ಅಭಿಮಾನಿಗಳು ಯಾವ ರೀತಿ ಕಣ್ಣೀರು ಹಾಕಿ ಅಭಿಮಾನ ತೋರಿಸಿದರು ಎಂಬುದಾಗಿ ನಾವು ನೋಡಿದೆವು. ಆದರೆ ನನಗೆ ನಾನು ಬದುಕಿದ್ದಾಗಲೇ ಅಭಿಮಾನಿಗಳು ಏನು ಎಂದು ತೋರಿಸಿದ್ದಾರೆ. ನಿಜಕ್ಕೂ ನಾವು ಸಾವನಪ್ಪಿದ ಮೇಲೆ ಎಲ್ಲಿ ಇರುತ್ತೇವೆ, ನಂತರ ಏನಾಗುತ್ತೆವೆ, ಅದನ್ನು ಇಲ್ಲಿಯವರೆಗೂ ಯಾರು ಕಂಡುಹಿಡಿದಿಲ್ಲ. ಆದರೆ ಪುನೀತ್ ರಾಜಕುಮಾರ್ ಅವರು ಹೋದಾಗ ನಾವು ಅದನ್ನೆಲ್ಲ ನೋಡಿದೆವು, ಅಭಿಮಾನಿಗಳು ನನಗೆ ಅದನ್ನ ಈಗಲೆ ತೋರಿಸಿದರು ನಾನು ಸತ್ತ ಮೇಲೆ ಅದನ್ನೆಲ್ಲ ನೋಡಲು ಸಾಧ್ಯವಿಲ್ಲ ಎಂದು ಭಾವುಕಕರಾದರು.

ಕ್ರಾಂತಿ ಸಿನಿಮಾ ಪ್ರಮೋಷನ್ ಗಾಗಿ ಎಲ್ಲರಿಗೆ ದುಡ್ಡು ಕೊಟ್ಟು ಮಾಡಿಸುತ್ತಿದ್ದಾರೆ ಎನ್ನಲಾಗಿ ಹೇಳುತ್ತಿದ್ದಾರೆ. ನಮ್ಮ ಕಡೆಯಿಂದ ಆಗಲಿ, ಪ್ರೊಡ್ಯೂಸರ್ ಕಡೆಯಿಂದ ಆಗಲಿ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಅಭಿಮಾನಿಗಳು ಸ್ವತಃ ಅವರು ದುಡಿದ ದುಡ್ಡಿನಲ್ಲಿಯೇ ನಮ್ಮ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ, ನಿಜಕ್ಕೂ ಧನ್ಯವಾದಗಳು ಸಣ್ಣ ಪದ ಆಗುತ್ತದೆ, ಅವರೇ ನಮಗೆ ದೇವರು ಎಂದು ದರ್ಶನ್ ತುಂಬಾ ಭಾವುಕರಾಗಿ ಮಾತನಾಡಿದ್ದಾರೆ. ಅದರ ವಿಡಿಯೋ ತುಣುಕು ಇಲ್ಲಿದೆ ನೋಡಿ. ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ನಟ ಡಿ ಬಾಸ್ ಅವರ ಅಪ್ಪಟ ಅಭಿಮಾನಿಯಾಗಿದ್ದರೆ, ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಧನ್ಯವಾದಗಳು...

VIDEO CREDIT : RAJINI EXPRESS