ಜೇಮ್ಸ್ ಚಿತ್ರದ ಈವೆಂಟ್ ನಲ್ಲಿ ಮತ್ತೆ ಒಂದಾಗ್ತಾರ ಕಿಚ್ಚ ದಚ್ಚು..? ಜೇಮ್ಸ್ ಹವಾ ಹೀಗಿರಲಿದೆ..!

By Infoflick Correspondent

Updated:Friday, March 4, 2022, 12:25[IST]

ಜೇಮ್ಸ್ ಚಿತ್ರದ ಈವೆಂಟ್ ನಲ್ಲಿ ಮತ್ತೆ ಒಂದಾಗ್ತಾರ ಕಿಚ್ಚ ದಚ್ಚು..? ಜೇಮ್ಸ್ ಹವಾ ಹೀಗಿರಲಿದೆ..!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿತ್ರ ಜೇಮ್ಸ್ ಇದೇ ತಿಂಗಳು 17 ನೇ ತಾರೀಕು ಅವರ ಹುಟ್ಟು ಹಬ್ಬದ ದಿವಸ ಭರ್ಜರಿಯಾಗಿ ಒಟ್ಟು ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಇದಾಗಿದ್ದು ಜೇಮ್ಸ್ ನಲ್ಲಿ ಅಪ್ಪು ಅವರನ್ನು ಕೊನೆಯ ಬಾರಿ ತೆರೆಯ ಮೇಲೆ ಕಾಣಲು ಈಗಾಗಲೇ ಅವರ ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ. ಜೊತೆಗೆ ಎಲ್ಲಾ ಸಿದ್ಧತೆಗಳ ತಯಾರಿ ನಡೆಸಿದ ಅಭಿಮಾನಿಗಳು ತುಂಬಾ ಗ್ರಾಂಡ್ ಆಗಿ ಅಪ್ಪು ಅವರನ್ನು ಬರ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹೌದು ಅಪ್ಪು ಅವರು ಈಗಾಗಲೇ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಮತ್ತು ಅವರ ಕುಟುಂಬದವರ ಬಳಗದಲ್ಲಿ ದೇವರಾಗಿ ನೆಲೆಸಿದ್ದಾರೆ ಎಂದರೆ ತಪ್ಪಾಗಲಾರದು.

ಕಾರಣ ಅಪ್ಪು ಬದುಕಿದ್ದಾಗ ಆ ದೇವರಿಗಿಂತಲೂ ಒಂದು ಕೈ ಮೇಲೆ ಎಂಬಂತೆ ಬದುಕಿದ್ದವರು. ಸರಳತನದಿಂದಲೇ ಜೀವನ ಮಾಡಿದಂತವರು. ಹಾಗೆಕಷ್ಟ ಎಂದವರಿಗೆ ಹಿಂದೂ ಮುಂದು ನೋಡದೆ ಯಾರಿಗೂ ಗೊತ್ತಾಗದ ಹಾಗೆ ಸಹಾಯ ಮಾಡಿದಂತವರು. ಹೆಚ್ಚು ಜನರಿಗೆ ಆಸರೆಯಾದಂತವರು ಅಪ್ಪು. ಆದ್ರೆ ಇಂದು ನಮ್ಮ ಜೊತೆಗಿಲ್ಲ. ದೇವರು ಅವರ ವಿಚಾರದಲ್ಲಿ ತುಂಬಾ ಕೆಟ್ಟ ನಿರ್ಧಾರ ಮಾಡಿಬಿಟ್ಟನು. ಹೌದು ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ಕ್ಕಾಗಿ ಈಗಾಗಲೆ ದಿನಗಣನೆ ಶುರುವಾಗಿದೆ. ಅಪ್ಪು ಅವರ ಜೇಮ್ಸ್ ಚಿತ್ರದ ಇವೆಂಟ್ ಕೆಲಸಗಳು ಈಗ ನಡೆಯುತ್ತಿದ್ದು, ಒಟ್ಟು ಮೂರು ಸ್ಥಳಗಳಲ್ಲಿ ಇವೆಂಟ್ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ.  

ಅಪ್ಪು ಅವರ ಆಸೆಯಂತೆ ಹೊಸಪೇಟೆಯಲ್ಲಿ ಇದೇ ಆರನೇ ತಾರೀಕು ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಈವೆಂಟ್ ಮೊದಲ ಕಾರ್ಯಕ್ರಮ ಜರುಗಲಿದೆ. ಹಾಗೆ ಕಾರ್ಯಕ್ರಮಕ್ಕೆ ಕನ್ನಡದ ಗಣ್ಯ ನಟ-ನಟಿಯರು ಆಗಮಿಸುತ್ತಿದ್ದಾರೆ. ನಟ ದರ್ಶನ್ ಸ್ಪೆಷಲ್ ಗೆಸ್ಟ್ ಆಗಿ ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಕಿಚ್ಚ ಸುದೀಪ್ ಕೂಡ ಇವೆಂಟ್ ಗೆ ಆಗಮಿಸಲಿದ್ದಾರೆ ಎಂದು ಮಾಧ್ಯಮ ವಲಯದಲ್ಲಿ ಹೇಳಲಾಗುತ್ತಿದೆ. ಜೇಮ್ಸ್ ಚಿತ್ರದ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ಹೊಸಪೇಟೆಯಲ್ಲಿ ನಡೆಯುತ್ತಿದ್ದು ನಟ ಎನ್ಟಿಆರ್ ಹಾಗೂ ಚಿರಂಜೀವಿ ಅವರು ಕೂಡ ಆಗಮಿಸಲಿದ್ದಾರೆ. ಹೌದು ದಚ್ಚು ಮತ್ತು ಸುದೀಪ್ ಅವರು ಬರುತ್ತಿದ್ದಾರೆ ಎನ್ನುವ ವಿಷಯ ಕೇಳುತ್ತಿದ್ದಂತೆ ಅವರ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದು ಈ ಮೂಲಕ ಆದರೂ ಕೂಡ ಇವರಿಬ್ಬರು ಮತ್ತೆ ಒಂದಾಗಲಿ ಎನ್ನುವುದೇ ಅಭಿಮಾನಿಗಳ ಆಶಯವಾಗಿದೆ. ಏನಾಗುತ್ತದೆ ಕಾದು ನೋಡಬೇಕು. ಹಾಗೆ ಅಪ್ಪು ಅವರ ಈ ಕೊನೆಯ ಚಿತ್ರವನ್ನು ಎಲ್ಲರೂ ಚಿತ್ರಮಂದಿರದಲ್ಲಿಯೇ ನೋಡಬೇಕು..