ಬಿರಿಯಾನಿ ಹಾಗೂ ಒಂದು ಲಸ್ಸಿ ರೋಚಕ ಕಥೆ ಹೇಳಿದ ಡಿ ಬಾಸ್ ದರ್ಶನ್

By Infoflick Correspondent

Updated:Friday, April 22, 2022, 11:27[IST]

ಬಿರಿಯಾನಿ ಹಾಗೂ ಒಂದು ಲಸ್ಸಿ ರೋಚಕ  ಕಥೆ ಹೇಳಿದ ಡಿ ಬಾಸ್ ದರ್ಶನ್

ದರ್ಶನ್ ತೂಗುದೀಪ್ ಅವರು ಮೆಜೆಸ್ಟಿಕ್ ಸಿನಿಮಾ ಮೂಲಕ ಕನ್ನಡ ಫಿಲ್ಮಂ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಇಂದಿನವರೆಗೂ ಡಿ ಬಾಸ್ ಸಿನಿಮಾ ರಂಗದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಸದ್ಯ ದರ್ಶನ್ ಅವರು ಕ್ರಾಂತಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರು ಕ್ರಾಂತಿ ಚಿತ್ರದ ನಿರ್ಮಾಪಕರಾಗಿದ್ದಾರೆ. ಇನ್ನು ವಿ.ಹರಿಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಸಂಗೀತ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಕ್ರಾಂತಿ ಚಿತ್ರ ಶೂಟಿಂಗ್ ಹಂತದಲ್ಲಿದೆ.

ಕನ್ನಡದಲ್ಲಿ ತಯಾರಾಗುವ ಕ್ರಾಂತಿ ಚಿತ್ರ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಇದು ದರ್ಶನ್ 55ನೇ ಚಿತ್ರವಾಗಿದ್ದು, ದರ್ಶನ್ ಹುಟ್ಟುಹಬ್ಬ ಹಿನ್ನೆಲೆ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು. ಈ ಚಿತ್ರದ ಫಸ್ಟ್ ಲುಕ್ ನಲ್ಲಿ ದರ್ಶನ್ ಅವರು ಎಂದಿನಂತೆ ಕಾಣಿಸಿಕೊಂಡಿದ್ದಾರೆ. ಸುಂದರ ಪರಿಸರ ಫಸ್ಟ್ ಲುಕ್ ನಲ್ಲಿ ಚೆನ್ನಾಗಿ ಕಾಣುತ್ತಿದ್ದು, ಗಾಡಿಯ ಮೇಲೆ ವ್ಯಕ್ತಿಯನ್ನು ಎಳೆದು ತರುವ ದರ್ಶನ್ ಲುಕ್ ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದೆ. 

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ಇನ್ನು ದರ್ಶನ ಅವರ 56ನೇ ಸಿನಿಮಾ ಕೂಡ ನಿನ್ನೆ ಘೋಷಿಸಲಾಗಿದೆ. ದರ್ಶನ್ ಅವರ ಮುಂದಿನ ಸಿನಿಮಾವನ್ನು ಯಶಸ್ವಿ ನಿರ್ದೇಶಕ ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಇದೀಗ ದರ್ಶನ್ ಅವರು ಬಿರಿಯಾನಿ ಹಾಗೂ ಲಸ್ಸಿ ಕಥೆಯನ್ನು ಹೇಳಿದ್ದಾರೆ. ಹೌದು.. ದರ್ಶನ್ ಅವರ ಸ್ನೇಹಿತ ಸೌರಭ್ ಅವರು ಲಖ್ನೌನಲ್ಲಿ ಮೈನಿಂಗ್ ಬಿಸಿನೆಸ್ ಮಾಡುತ್ತಿದ್ದಾರಂತೆ. ಇವರನ್ನು ಭೇಟಿಯಾಗಲು ಹೋದಾಗ, ಲಖ್ನೌನಲ್ಲಿ ಸೌರಭ್ ಅವರು ಬಾಡಿ ಗಾರ್ಡ್ ಗಳನ್ನು ಕರೆಸಿದ್ದರಂತೆ. 

ಬಿರಿಯಾನಿ ತಿನ್ನಬೇಕು ಎಂದಿದ್ದಕ್ಕೆ ಹೋಟೆಲ್ ನಲ್ಲಿದ್ದವರನ್ನೆಲ್ಲಾ ಖಾಲಿ ಮಾಡಿಸಿದ್ದರಂತೆ. 20 ರೂಪಾಯಿ ಲಸ್ಸಿ ಕುಡಿಯಲು ಹೋದಾಗ ಬಾಡಿ ಗಾರ್ಡ್ ಗಳನ್ನು ಊರಿನವರೆಲ್ಲಾ ನಿಂತು ನೋಡುತ್ತಿದ್ದರಂತೆ. ಹಾಗಾಗಿ ದರ್ಶನ್ ಅವರು ಲಸ್ಸಿ ಕುಡಿದಿದ್ದೇ ತಡ 20 ರೂ ಕೊಡೋ ಕಡೆ 2000 ರೂಪಾಯಿ ಕೊಟ್ಟು ಚೇಂಜ್ ಇಟ್ಕೊಳ್ಳಿ ಎಂದು ಎಸ್ಕೇಪ್ ಆಗಿದ್ದರಂತೆ. ಇನ್ನು ದರ್ಶನ್ ಅವರ ಸ್ನೇಹಿತ ಸೌರಭ್ ಅವರು, ತಮ್ಮ ಜೊತೆ ಮಹಾಭಾರತದಲ್ಲಿ ವಿಲನ್ ಪಾತ್ರ, ನವಗ್ರಹ, ಸಂಗೊಳ್ಳಿ ರಾಯಣ್ಣ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರಂತೆ.