Darshan : ಕನ್ನಡ ಚಿತ್ರಗಳೇ ಪ್ಯಾನ್ ಇಂಡಿಯಾಗೆ ಹೋಗುವಾಗ ಅಲ್ಲಿಗೆ ಹೋಗೋದ್ಯಾಕೆ..! ದರ್ಶನ್ ವಾರ್ನಿಂಗ್

By Infoflick Correspondent

Updated:Monday, May 16, 2022, 17:37[IST]

Darshan :  ಕನ್ನಡ ಚಿತ್ರಗಳೇ ಪ್ಯಾನ್ ಇಂಡಿಯಾಗೆ ಹೋಗುವಾಗ ಅಲ್ಲಿಗೆ ಹೋಗೋದ್ಯಾಕೆ..! ದರ್ಶನ್ ವಾರ್ನಿಂಗ್

ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾತುಗಳು ಎಂದರೆ ತುಂಬಾನೇ ಮೌಲ್ಯ ಆಗಿರುತ್ತವೆ. ಹಾಗೆ ಅರ್ಥಗರ್ಭಿತವಾಗಿ ಮಾತನಾಡುತ್ತಾರೆ. ಮಾತನಾಡುವ ರೀತಿ, ನಟ ದರ್ಶನ್ ಅವರ ಶೈಲಿ, ಹಾಗೇನೇ ಅವರಿಗೆ ಇರುವ ಸಿನಿಮಾ ಬಗ್ಗೆ ಇಂಟರೆಸ್ಟ್ ಅವರಿಗೆ ಹೆಚ್ಚು ಎನ್ನಬಹುದು. ಹೌದು ದರ್ಶನ್ ಅವರದೇ ಆದ ಅಪಾರ ಅಭಿಮಾನಿ ಬಳಗವನ್ನು ಸಕ್ಕತ್ ಅಭಿನಯದ ಮೂಲಕವೇ ಕರ್ನಾಟಕದ ತುಂಬೆಲ್ಲಾ ಗಳಿಸಿಕೊಂಡಿದ್ದಾರೆ. ನಟ ದರ್ಶನ್ ಅವರ ಫ್ಯಾನ್ ಬೇಸ್ ಬಗ್ಗೆ ನಾವು ಮಾತನಾಡುವುದಕ್ಕೆ ಆಗುವುದಿಲ್ಲ. ಅಷ್ಟು ದೊಡ್ಡ ಮಟ್ಟಕ್ಕೆ ನಟ ಡಿ ಬಾಸ್ ಅವರ ಅಭಿಮಾನಿ ಬಳಗವಿದೆ. ನಟ ದರ್ಶನ್ ಸಂದರ್ಶನದಲ್ಲಿ ಆಗಾಗ ಮಾತನಾಡುವಾಗ ಕನ್ನಡ ಚಿತ್ರರಂಗದ ಬಗ್ಗೆ, ಹಾಗೆ ಕನ್ನಡ ಸಿನಿರಂಗದ ಎಲ್ಲಾ ನಿರ್ಮಾಪಕರ ಬಗ್ಗೆನೆ ಹೆಚ್ಚು ಮಾತನಾಡುತ್ತಾರೆ.     

ಚಿತ್ರರಂಗದ ನಿರ್ಮಾಪಕರು ಹೆಚ್ಚಿಗೆ ದುಡಿದುಕೊಳ್ಳಬೇಕು. ಅವರು ಚೆನ್ನಾಗಿದ್ದರೆ ಮಾತ್ರ ನಾವು ಚೆನ್ನಾಗಿ ಇರುವುದಕ್ಕೆ ಸಾಧ್ಯ, ನಂತರ ನಮ್ಮ ಅಭಿಮಾನಿಗಳನ್ನು ರಂಜಿಸುವುದಕ್ಕೆ ಸಾಧ್ಯ ಎನ್ನುತ್ತಾರೆ ದರ್ಶನ್. ಹೆಚ್ಚಾಗಿ ಪ್ರೊಡ್ಯೂಸರ್ಸ್ ಬಳಿ ನಾವು ಹಣ ಖರ್ಚು ಮಾಡಿಸುವುದಕ್ಕೆ ಹೋಗಲ್ಲ, ಕಾರಣ ಯಾಕೆಂದರೆ ನಾಳೆ ಹೆಚ್ಚು ಕಡಿಮೆ ಆಗಿ ಏನಾದ್ರು ಆದ್ರೆ ನಾವು ತಲೆ ಕೊಡ ಬೇಕಾಗುತ್ತದೆ ಎನ್ನುತ್ತಾರೆ ನಟ ದರ್ಶನ್. ಇಂಥಾ ವಿಚಾರಕ್ಕೆ ಡಿ ಬಾಸ್ ಎಲ್ಲರಿಗೂ ಇಷ್ಟ ಆಗೋದು ಅಲ್ವಾ. ದರ್ಶನ್ ಅವರು ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಹೇಳಿದ ಹಾಗೆ ಕನ್ನಡ ಸಿನಿಮಾ ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿವೆ. ಬೇರೆ ಇಂಡಸ್ಟ್ರಿಗೆ ಹೋಗಿ ಅವರ ಸಿನಿಮಾ ಮಾಡುವ ಬದಲು ನಮ್ಮ ಸಿನಿಮಾದಲ್ಲಿಯೇ ಮಾಡಿ ಅಲ್ಲಿಗೆ ಕಳುಹಿಸಿ ಕೊಡಬಹುದಲ್ಲ ಎಂದಿದ್ದಾರೆ.

ಬೇರೆ ಇಂಡಸ್ಟ್ರಿಗೆ ಕೆಲಸ ಮಾಡಬೇಕು ಎನ್ನುವವರಿಗೆ ಈ ಮಾತನ್ನು ಹೇಳಿದ್ದಾರೆ ದರ್ಶನ್ ಅವರು ಎಂದೆನಿಸುತ್ತದೆ ಅಲ್ವಾ. ಹಾಗೆ ಸಲಹೆ ಕೊಡುವವರು ಕೊಡುತ್ತಾರೆ ಅವರಿಗೆ ಗೆಣಸು ಕಿತ್ತರೆ ಮಾತ್ರ ಕಾಣುವುದು ಎನಿಸುತ್ತದೆ ಎಂದುಡಿ ಬಾಸ್ ಆಕ್ರೋಶ ಹೊರಹಾಕಿದರು. ಚಿತ್ರಕಥೆಗಳ ಆಯ್ಕೆ ಬಗ್ಗೆ ಮಾತನಾಡಿದ ನಟ ದರ್ಶನ್, ಜನರ ಸಿನಿಮಾ ನೋಡಲು ಯಾಕೆ ಬರುತ್ತಾರೆ ಹೇಳಿ, ಜೀವನದಲ್ಲಿ ಏನೇನೋ ಇರುತ್ತದೆ ಅದನ್ನೆಲ್ಲ ಬದಿಗಿಟ್ಟು, ಸ್ವಲ್ಪ ನೆಮ್ಮದಿಯಾಗಿ ಮನರಂಜನೆ ಪಡೆಯೋಣ ಎಂದು ಬರುತ್ತಾರೆ. ಸಿನಿಮಾಗೆ ಒಂದು ಫ್ಯಾಶನ್ ಇದೆ. ನಾವು ಹೇಗೆ ಬೇಕೋ ಹಾಗೆ ಮಾಡುವುದಕ್ಕೆ ಆಗುವುದಿಲ್ಲ ಎಂದು ದರ್ಶನ್ ಅವರು ಹೇಳಿದ್ದು, ಅವರು ಕೆಲ ವಿಚಾರಗಳ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.  ( video credit ; rx studio kannada