Darshan : ಭರತ್ ವಿರುದ್ಧ ದರ್ಶನ್ ಬೆದರಿಕೆ ಆರೋಪ ಮಾಡಿದ ಆಡಿಯೋ ಕೇಳಿದ್ದೀರಾ..?

By Infoflick Correspondent

Updated:Thursday, August 11, 2022, 17:34[IST]

Darshan : ಭರತ್ ವಿರುದ್ಧ ದರ್ಶನ್ ಬೆದರಿಕೆ ಆರೋಪ ಮಾಡಿದ ಆಡಿಯೋ ಕೇಳಿದ್ದೀರಾ..?

ನಟ ದರ್ಶನ್ ವಿರುದ್ಧ ಕಳೆದ ವರ್ಷವೂ ಕೆಲ ಆರೋಪಗ:ಳು ಕೇಳಿ ಬಂದಿದ್ದವು. ಹಲವು ತಿಂಗಳ ಕಾಲ ಆ ಸುದ್ದಿ ಹಸಿಬಿಸಿ ಚರ್ಚೆಯಾಗಿತ್ತು. ಇದೀಗ ಮತ್ತೆ ದರ್ಶನ್‌ ಅವರು ಬೆದರಿಕೆ ಹಾಕಿದ್ದಾರೆ ಎಂದು ಸುದ್ದಿಯಾಗುತ್ತಿದೆ. ತಮಗೆ ಬೆದರಿಕೆ ಹಾಕಿದ್ದಾರೆಂದು ನಿರ್ಮಾಪಕ ಭರತ್ ವಿಷ್ಣುಕಾಂತ್ ದೂರು ನೀಡಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಭರತ್‌ ಅವರು ದೂರು ನೀಡಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ಸಂಚಲನ ಸೃಷ್ಟಿಸಿದೆ. 

2020 ರಲ್ಲಿ ಭರತ್‌ ಅವರು 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ'ಎಂಬ ಸಿನಿಮಾಗೆ ಹಣ ಹೂಡಿದ್ದರು. ಈ ಸಿನಿಮಾದ ಧ್ರುವನ್‌ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ಆದರೆ ಚಿತ್ರದ ಕಥೆ ಬದಲಿಸಿ, ದರ್ಶನ್‌ ಹಾಗೂ ಧ್ರವನ್‌ ಸೇರಿ ನಿರ್ದೇಶಕರನ್ನೂ ಬದಲಿಸಿದ್ದರಂತೆ. ಇದೆಲ್ಲದಕ್ಕೂ ಭರತ್ ತಲೆ ದೂಗಿದ್ದರಂತೆ. ಕಾರಾಣಾಂತರಗಳಿಂದ ಸಿನಿಮಾದ ಚಿತ್ರೀಕರಣ ತಡವಾಗುತ್ತಿತ್ತಂತೆ. ಆಗ ದರ್ಶನ್‌ ಅವರು ಭರತ್‌ ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಮೊನ್ನೆ ದೂರು ನೀಡಿದ್ದಾರೆ.    

ಆಡಿಯೋ ಕ್ಲಿಪಿಂಗ್‌ ಸಮೇತ ದೂರು ನೀಡಿದ್ದು, ಇದರಲ್ಲಿ ದರ್ಶನ್‌ ಅವರ ಧ್ವನಿ ಹೋಲುವಂತೆಯೇ ಆಡಿಯೋ ಇದೆ. ಈ ಆಡಿಯೋದಲ್ಲಿ ಸಿನಿಮಾ ತಡ ಮಾಡಿದರೆ ಧ್ರುವನ್‌ ಅವರ ಭವಿಷ್ಯ ಹಾಳಾಗುತ್ತದೆ. ನಾನು ಏನಾದರೂ ಮಾಡೋದಾದರೇ ಹೇಳಿಯೇ ಮಾಡೋದು. ನೀನು ರೆಡಿ ಇರು ನೀನೇ ಕಾಣ್ದೆ ಇರೋ ಥರ ಮಾಡಿ ಬಿಡ್ತೀನಿ ಇದನ್ನ  ವಾರ್ನಿಂಗ್  ಎಂದು ಬೇಕಾದರೂ ತಿಳಿದಿಕೋ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಈ ಆಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ. ಇನ್ನು ಸಿನಿಮಾ ಝಾಯಾಗ್ರಾಹಕ ಸೇರಿದಂತೆ ಇಬ್ಬರು ಠಾಣೆಗೆ ಹೋಗಿ ಹೇಳಿಕೆಯನ್ನು ಸಹ ನೀಡಿದ್ದಾರೆ.