Darshan : ಒಟ್ಟಿಗೆ ಅಭಿನಯ ಮಾಡ್ತಿದ್ದಾರ ಶಿವಣ್ಣ ದರ್ಶನ್..! ಅಭಿಮಾನಿಗಳು ಫುಲ್ ಖುಷ್

By Infoflick Correspondent

Updated:Friday, July 15, 2022, 18:44[IST]

Darshan : ಒಟ್ಟಿಗೆ ಅಭಿನಯ ಮಾಡ್ತಿದ್ದಾರ ಶಿವಣ್ಣ ದರ್ಶನ್..! ಅಭಿಮಾನಿಗಳು ಫುಲ್ ಖುಷ್

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಾಕಷ್ಟು ನಟರು ಅವರದ್ದೇ ಆದ ವಿಶೇಷ ಅಭಿನಯದ ಮೂಲಕ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಸಾಕಷ್ಟು ನಟರು ಮುಂದಿದ್ದಾರೆ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಕನ್ನಡದ ಅಭಿಮಾನಿಗಳು ಅವರವರ ಪ್ರೀತಿಯ ನಟರನ್ನು ಇಷ್ಟಪಡುತ್ತಾರೆ. ಅವರ ಸಿನಿಮಾ ಬಂದಾಗ ಮೊದಲ ದಿನವೇ ಮೊದಲ ಶೋ ನೋಡಿ ಸಕ್ಕತ್ ಖುಷಿ ಪಡುತ್ತಾರೆ ಅಭಿಮಾನಿ ಬಳಗದವ್ರು. ಹೌದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಬರುತಿದೆ ಎಂದರೆ ಅವರ ಅಭಿಮಾನಿಗಳಿಗೆ ಒಂದು ಹಬ್ಬ. ಆ ವಾತಾವರಣ ಎಲ್ಲಿ ನೋಡಿದರೂ ದರ್ಶನ್ ಅವರ ಸಿನಿಮಾದ್ದೆ ಜೋರಾಗಿರುತ್ತದೆ.

ಇನ್ನೊಂದು ಕಡೆ ಕಿಚ್ಚ ಸುದೀಪ್ ಅವರ ಸಿನಿಮಾ ಬರುತ್ತದೆ ಎಂದರೆ ಅವರ ಅಭಿಮಾನಿಗಳು ಕೂಡ ಒಂದು ಹಬ್ಬದ ರೀತಿಯೇ ಸಿನಿಮಾವನ್ನು ಸೆಲೆಬ್ರೇಟ್ ಮಾಡುತ್ತಾರೆ. ಹಾಗೆ ನಟ ಅಪ್ಪು ಅವರ ಸಿನಿಮಾವನ್ನು ಕೂಡ ಸೆಲೆಬ್ರೇಟ್ ಮಾಡುತ್ತಿದ್ದರು. ಇನ್ನೊಂದು ಕಡೆ ನಟ ಶಿವಣ್ಣ. ನಟ ಶಿವಣ್ಣ ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಶಿವಣ್ಣ ಏನೇ ಹೇಳಿದರು ಹೆಚ್ಚು ಖುಷಿ ನೀಡುತ್ತದೆ. ಹಾಗೆ ಅವರಲ್ಲಿರುವ ಮಾತಿನ ಅಂಶ, ಒಂದೊಂದು ಮಾತುಗಳು ನಿಜಕ್ಕೂ ಸತ್ಯ ಎನ್ನುವಂತೆ ಕಂಡುಬರುತ್ತವೆ ಅವರನ್ನು ಪ್ರೀತಿ ಮಾಡದೇ ಇರುವ ವ್ಯಕ್ತಿಗಳು ಸಿಗದಿರುವುದು ಹೇರಳ ಎನ್ನಬಹುದು. ಇದೀಗ ಶಿವಣ್ಣ ಮತ್ತು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಂದು ವಿಚಾರ ಹೊರ ಬಂದಿದೆ.

ಇತ್ತೀಚಿಗೆ ಸಿನಿಮಾ ಒಂದರ ಮುಹೂರ್ತದ ವೇಳೆ ಶಿವಣ್ಣ ಮತ್ತು ದರ್ಶನ್ ಒಟ್ಟಿಗೆ ಕಾಣಿಸಿದ್ದರು. ಆಗ ಇಬ್ಬರಿಗೂ ಸೇರಿ ಒಂದು ಪ್ರಶ್ನೆ ಮಾಡಲಾಗಿತ್ತು. ನೀವಿಬ್ಬರು ಒಂದೇ ಚಿತ್ರದಲ್ಲಿ ಅಭಿನಯ ಮಾಡುತ್ತೀರಾ, ನಟನೆ ಮಾಡಿದರೆ ಯಾರು ಲಾಂಗ್ ಹಿಡಿಯುತ್ತೀರಾ ಎಂದು ಪ್ರಶ್ನೆ ಮಾಡಲಾಗಿತ್ತು. ಆಗ ಶಿವಣ್ಣ ಅವರು ನಗುತ್ತಲೇ ಅದಕ್ಕೇನಿದೆ, ದರ್ಶನ್ ಅವರ ಜೊತೆ ಸಿನಿಮಾ ಮಾಡಬಾರದು ಅಂತ ನನ್ನದು ಏನಿಲ್ಲಾ. ಒಳ್ಳೆಯ ಕಥೆ ಸಿಕ್ಕರೆ ಖಂಡಿತ ಮಾಡುತ್ತೇವೆ. ಎಲ್ಲಾ ನಟರ ಜೊತೆಗೆ ನಟಿಸಬೇಕು ಎಂಬುದೇ ನನ್ನ ಆಸೆ ಕೂಡ ಎಂದು ಶಿವಣ್ಣ ಹೇಳುತ್ತಾರೆ. ಆಗ ನಟ ದರ್ಶನ್ ನಮ್ಮಿಬ್ಬರನ್ನು ಹ್ಯಾಂಡಲ್ ಮಾಡುವ ಡೈರೆಕ್ಟರ್ ಇನ್ನೂ ಕಂಡುಬಂದಿಲ್ಲ, ಒಂದು ವೇಳೆ ಕಂಡು ಬಂದರೆ ನಿಜಕ್ಕೂ ಒಟ್ಟಿಗೆ ಸಿನಿಮಾ ಮಾಡುತ್ತೇವೆ, ಅದರಲ್ಲಿ ಏನಿದೆ ಎಂದಿದ್ದಾರೆ.

ಹೌದು ಇಬ್ಬರು ಕೂಡ ಲಾಂಗು ಮತ್ತು ಹಿಡಿಯುವುದರಲ್ಲಿ ಫೇಮಸ್. ಒಂದು ವೇಳೆ ಲಾಂಗ್ ಹಿಡಿಯುವುದಾದರೆ ನಿಮ್ಮ ಸಿನಿಮಾದಲ್ಲಿ ಯಾರು ಹಿಡಿಯುತ್ತೀರಾ ಎಂದಾಗ, ದರ್ಶನ್, ಶಿವಣ್ಣ ಸೀನಿಯರ್ ಅವರೆ ಲಾಂಗ್ ಹಿಡಿಯಲಿ, ನಾನು ಅವರ ಹಿಂದೆ ಇರುತ್ತೇನೆ ಎಂದು ತುಂಬಾ ಸರಳವಾಗಿ ಸರಳತನದಿಂದಲೇ ಉತ್ತರ ನೀಡಿದ್ದಾರೆ ಡಿ ಬಾಸ್. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಆದಷ್ಟು ಬೇಗ ಸ್ಟಾರ್ ನಟರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸುವ ಕಥೆ ಹೊರಬರಲಿ ಎಂದು ಆಶಿಸೋಣ. ಜೊತೆಗೆ ಒಂದು ವೇಳೆ ಈ ಸ್ಟಾರ್ ನಟರ ಸಿನಿಮಾ ಹೊರಗಡೆ ಬಂದಿದ್ದೆ ಆದ್ರೆ ಇಡೀ ಭಾರತೀಯ ಚಿತ್ರರಂಗ ಶೇಕ್ ಆಗುವುದು ಕನ್ಫರ್ಮ್ ಎಂದು ಹೇಳಲಾಗುತ್ತಿದೆ. ನಿಮ್ಮ ಅನಿಸಿಕೆ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...