Darshan : ಲೀಲಾವತಿ ಅಮ್ಮನವರ ಮನೆಗೆ ಭೇಟಿ ಕೊಟ್ಟ ದರ್ಶನ್..! ಡಿ ಬಾಸ್ ಕೆಲಸ ನೋಡಿ ವಿನೋದ್ ರಾಜ್ ಶಾಕ್

By Infoflick Correspondent

Updated:Tuesday, September 13, 2022, 10:51[IST]

Darshan :  ಲೀಲಾವತಿ ಅಮ್ಮನವರ ಮನೆಗೆ ಭೇಟಿ ಕೊಟ್ಟ ದರ್ಶನ್..! ಡಿ ಬಾಸ್ ಕೆಲಸ ನೋಡಿ ವಿನೋದ್ ರಾಜ್ ಶಾಕ್

ಕನ್ನಡ ಸೇರಿದಂತೆ ಬೇರೆ ಬೇರೆ ಸಿನಿಮಾಕ್ಷೇತ್ರದಲ್ಲೂ ಕೂಡ  ಹೆಚ್ಚು ಗುರುತಿಸಿಕೊಂಡವರಲ್ಲಿ ನಟಿ ಲೀಲಾವತಿ ಕೂಡ ಬರುತ್ತಾರೆ. ನಟಿ ಲೀಲಾವತಿ ಅವರಿಗೆ ಒಬ್ಬ ಮಗನಿದ್ದು ಅವರೇ ಬೇರೆ ಯಾರು ಅಲ್ಲ ಕನ್ನಡದ ಮೈಕಲ್ ಜಾಕ್ಸನ್ ಎಂದೇ ಕರೆಯಲ್ಪಡುವ ಹಾಗೆ ಅಭಿನಯದಲ್ಲಿ ನೃತ್ಯದಲ್ಲಿ ಹೆಚ್ಚು ಜನಮನ್ನಣೆ ಗಳಿಸಿರುವ ನಟ ವಿನೋದ್ ರಾಜ್. ಹೌದು ನಟಿ ಲೀಲಾವತಿ ಅವರು ರಾಜಣ್ಣ ಅವರ ಜೊತೆ ಹೆಚ್ಚು ಸ್ಕ್ರೀನ್ ಶೇರ್ ಮಾಡಿಕೊಂಡಿರುವ ನಟಿ. ಹೌದು ಇನ್ನೂ ಇವರ ಮಗನ ಬಗ್ಗೆ ಹೇಳುವುದಾದರೆ ವಿನೋದ್ ರಾಜ್ ಅವರು ಇಂದಿಗೂ ಕೂಡ ಮದುವೆಯಾಗಿಲ್ಲ, ಕಾರಣ ಅವರ ತಾಯಿ ಲೀಲಾವತಿಯವರ ವಿಚಾರಕ್ಕಾಗಿ. ಅವರ ತಾಯಿಯನ್ನು ಮದುವೆಯಾಗಿ ಬರುವ ಹೆಣ್ಣು ಸರಿಯಾಗಿ ನೋಡಿಕೊಳ್ಳುತ್ತಾಳೋ ಇಲ್ಲವೋ ಎಂದು ವಿನೋದ್ ರಾಜ್ ಅವರು ಮದುವೆಯನ್ನೇ ಆಗಿಲ್ಲ ಎಂದು ಹೇಳಲಾಗುತ್ತಿದೆ.

ನಟ ವಿನೋದ್ ರಾಜ್ ಮತ್ತು ಲೀಲಾವತಿ ಅವರು ನಮ್ಮ ರಾಜ್ಯ ಕಷ್ಟದಲ್ಲಿ ಇದೆ ಎಂದಾಗ, ಜನರು ಕಷ್ಟದಲಿ ಇದ್ದಾರೆ ಎಂದಾಗ ಅವರ ಕೈಲಾದ ಸಹಾಯ ಮಾಡುತ್ತಾರೆ. ಅದು ಹೆಚ್ಚು ವಿಶೇಷ ಬಿಡಿ. ಹಾಗೆ ಅವರು ವಾಸವಿರುವ ಹಳ್ಳಿಗೆ ಇತ್ತೀಚಿಗಷ್ಟೇ ಬಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಕಟ್ಟಿಸಿ ಕೊಟ್ಟಿದ್ದಾರೆ. ಜಲ ಪ್ರವಾಹ ಮಳೆಯಿಂದಾಗಿ ಹೆಚ್ಚು ನಷ್ಟಕ್ಕೆ ಒಳಗಾದ ಸ್ಥಳಗಳಿಗೆ ಅವರ ಕೈಲಾದ ಸಹಾಯವನ್ನು ಈ ಹಿಂದೆ ಮಾಡಿ ತುಂಬಾ ಒಳ್ಳೆಯ ಮನಸ್ಥಿತಿ ವ್ಯಕ್ತಿಗಳು ಇವರು ಎಂದೆನಿಸಿಕೊಂಡಿದ್ದಾರೆ. ಹೀಗೆ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಅವರ ಬಗ್ಗೆ ಹೇಳುತ್ತಾ ಹೋದರೆ ಅವರ ಕಾರ್ಯ ಕೆಲಸಗಳ ಅಷ್ಟು ಲಿಸ್ಟ್ ತುಂಬಾ ದೊಡ್ಡದಿದೆ ಎಂದು ಹೇಳಬಹುದು..ಇದೀಗ ನಟಿ ಲೀಲಾವತಿಯವರು ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ.     

ಅವರು ವಾಸವಿರುವ ಮನೆಯಲ್ಲಿಯೇ ವಯೋಸಹಜ ಕಾಯಿಲೆಯಿಂದ ಅವರ ಆರೋಗ್ಯದಲ್ಲಿ ಏರುಪೇರು ಆಗಿದೆ ಎನ್ನಲಾಗಿದೆ. ಈ ವಿಷಯ ಹೊರಗಡೆ ಬರುತ್ತಿದ್ದಂತೆ ನಟ ಡಿ ಬಾಸ್ ಅವರು ಲೀಲಾವತಿ ಅವರನ್ನು ನೋಡಲು ಅವರ ಮನೆಗೆ ಹೋಗಿದ್ದಾರೆ. ಹೋದ ಬಳಿಕ ಅಲ್ಲಿ ಡಿ ಬಾಸ್ ನಡೆದುಕೊಂಡ ರೀತಿಗೆ ವಿನೋದ್ ರಾಜ್ ಶಾಕ್ ಆಗಿದ್ದು ಅಮ್ಮನ ಕಾಲು ಮುಟ್ಟಿ ಆಶೀರ್ವಾದ ಪಡೆದ ಡಿ ಬಾಸ್ ಅವರ ಕೈಲಾದ ಸಹಾಯ ಮಾಡಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಯಾರಿಗೂ ಕೂಡ ಗೊತ್ತಾಗದ ಹಾಗೆ ದರ್ಶನ್ ಅವರು ಹೆಚ್ಚು ಸಹಾಯ ಮಾಡುತ್ತಲೇ ಬಂದಿದ್ದಾರೆ ಲೀಲಾವತಿ ಅಮ್ಮನವರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿ ಏನು ಕೊಡದೆ ಹಾಗೆ ಬಂದಿರುವುದಿಲ್ಲ ನಮ್ಮ ಡಿ ಬಾಸ್, ಕೈಲಾದ ಸಹಾಯವನ್ನು ಮಾಡಿ ಬಂದಿರುತ್ತಾರೆಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. (VIDEO CREDIT : KANNADA TAJA SUDDI )

ಇಲ್ಲಿದೆ ನೋಡಿ ಆ ವಿಡಿಯೋ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಆದಷ್ಟು ಬೇಗನೆ ನಟಿ ಲೀಲಾವತಿ ಅಮ್ಮನವರು ಗುಣಮುಖರಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿ, ಧನ್ಯವಾದಗಳು...