ತಮಿಳುನಾಡು ಶನೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟ ದರ್ಶನ್..! ಅಸಲಿಗೆ ಅಲ್ಲಿ ಏನಾಯ್ತು ನೀವೇ ನೋಡಿ..!

By Infoflick Correspondent

Updated:Tuesday, March 15, 2022, 14:03[IST]

ತಮಿಳುನಾಡು ಶನೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟ ದರ್ಶನ್..! ಅಸಲಿಗೆ ಅಲ್ಲಿ ಏನಾಯ್ತು ನೀವೇ ನೋಡಿ..!

ಸ್ಯಾಂಡಲ್ವುಡ್ನ ಡಿ ಬಾಸ್ ಎಂದು ಕರೆಯಲ್ಪಡುವ ನಟ ದರ್ಶನ್  (Darshan) ಅವರು ಆಗಾಗ ಗೆಳೆಯರೊಟ್ಟಿಗೆ ಪ್ರವಾಸ ಕೈಗೊಳ್ಳುತ್ತಾರೆ. ಅವರಿಗೆ ಇಷ್ಟ ಆಗುವ ಸ್ಥಳಗಳಿಗೆ ಭೇಟಿ ಕೊಟ್ಟು, ಅಲ್ಲಿಯ ಫೋಟೋಗಳನ್ನು ಅವರ ಅಭಿಮಾನಿ ದೇವರುಗಳಿಗೆ ಇದೆ ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಳ್ಳುತ್ತಾರೆ. ಹೌದು ಕೆಲವು ತಿಂಗಳ ಹಿಂದೆ ದರ್ಶನ್ ಅವರನ್ನು ಸಿನಿಮಾರಂಗದಿಂದ ಬ್ಯಾನ್ ಮಾಡಬೇಕು ಎನ್ನಲಾಗಿ ಕೆಲವು ಮಾತುಗಳು ಕೇಳಿಬಂದವು. ದರ್ಶನ್ ಅವರು ಅನಿರೀಕ್ಷಿತ ವಿವಾದಗಳಲ್ಲಿ ಮಾಧ್ಯಮದ ಜೊತೆ ಹೆಚ್ಚು ಕಾಣಿಸಿಕೊಂಡರು. 25ಕೋಟಿ ವಿವಾದದಿಂದ ಆರಂಭವಾದ ಜಗಳ ನಂತರ ಇಂದ್ರಜಿತ್ ಲಂಕೇಶ್ ಅವರು ಮಾಡಿದ ಕೆಲ ಅರೋಪಗಳು ಅಭಿಮಾನಿಗಳನ್ನು ತುಂಬಾ ಕೆರಳುವಂತೆ ಮಾಡಿತ್ತು.

ನಟ ದರ್ಶನ್ ಅವರ ಬಗ್ಗೆ ಈ ರೀತಿ ಮಾತನಾಡುತ್ತೀರಾ ಎಂದು ಅಭಿಮಾನಿಗಳು ತುಂಬಾ ಆಕ್ರೋಶ ಹೊರ2 ಹಾಕಿದ್ದು ಉಂಟು. ನಟ ದರ್ಶನ್ ಅವರ ಸುತ್ತ ಇವೆಲ್ಲ ವಾದ-ವಿವಾದಗಳು ಆರಂಭದಲ್ಲಿ ಹೆಚ್ಚು ನಡೆದವು. ಆದರೆ ಇದೀಗ ಅವರ ವಿರುದ್ಧ ಮಾಡಿದ ಆರೋಪಗಳು  ಯಾವು ನಿಜವಲ್ಲ ಎಂದು ಈಗ ಸ್ವಲ್ಪ ತಣ್ಣಗಾಗಿವೆ ಎಂದು ಮಾಧ್ಯಮ ವಲಯದಲ್ಲಿ ಕೇಳಿಬಂದಿದೆ. ಇದೆಲ್ಲದರ ನಡುವೆ ಇತ್ತೀಚಿಗೆ ನಟ ದರ್ಶನ್ ಅವರು ತಮಿಳುನಾಡಿನ ಪುದುಚೆರಿಯ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿ ಕುಳಿತುಕೊಂಡು ದೇವರ ಮುಂದೆ ಒಂದು ಕ್ಷಣ ಭಾವುಕರಾಗಿದ್ದರು ಎನ್ನಲಾಗಿದೆ.     

ಹಾಗೆ ಅಲ್ಲಿಯ ಫೋಟೋಗಳನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿದ್ದು ಅವರ ಅಭಿಮಾನಿಗಳು ಕೂಡ ಬಾಸ್ ಫೋಟೋಗಳನ್ನು ನೋಡಿ ಖುಷಿಯಾಗಿದ್ದಾರೆ. ದರ್ಶನ್ ಅವರ ವಿರುದ್ಧ ಕೇಳಿ ಬಂದ ವಿವಾದಗಳ ಸಂದರ್ಭದಲ್ಲಿ ದರ್ಶನ್ ಅವರ ಬೆಂಬಲವಾಗಿ ಅವರ ಸ್ನೇಹಿತರು, ಹಾಗೂ ಅವರ ಅಪಾರ ಅಭಿಮಾನಿ ಬಳಗದವರು ನಿಂತಿದ್ದು, ನಟ ದರ್ಶನ್ ಅವರನ್ನು ಏನು ಮಾಡಲು ಆಗಲಿಲ್ಲ ಎಂದು ಹೇಳಬಹುದು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...(Video credit : first cinema news )