ಜೇಮ್ಸ್ ಚಿತ್ರ ನೋಡಿ ಪುನೀತ್ ರಾಜ್ ಕುಮಾರ್ ನಟನೆ ಬಗ್ಗೆ ದರ್ಶನ್ ಹೇಳಿದ್ದೇನು..?

By Infoflick Correspondent

Updated:Friday, March 18, 2022, 12:28[IST]

ಜೇಮ್ಸ್ ಚಿತ್ರ ನೋಡಿ ಪುನೀತ್ ರಾಜ್ ಕುಮಾರ್ ನಟನೆ ಬಗ್ಗೆ ದರ್ಶನ್ ಹೇಳಿದ್ದೇನು..?

ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ನಿನ್ನೆ ರಿಲೀಸ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಥಿಯೇಟರ್ ಗಳ ಎದುರು ಮುಗಿಬಿದ್ದು ಟಿಕೆಟ್ ಪಡೆದು ಸಿನಿಮಾ ನೋಡಿದ್ದಾರೆ. ಎಲ್ಲಿ ನೋಡಿದರೂ ಅಪ್ಪು ಅವರ ದೊಡ್ಡ ದೊಡ್ಡ ದೊಡ್ಡ ಕಟೌಟ್ ಗಳೇ ರಾರಾಜಿಸುತ್ತಿವೆ. ಸಿನಿಮಾ ರಿಲೀಸ್ ಆದ ಮೊದಲನೇ ದಿನವೇ ದಾಖಲೆ ಮಟ್ಟದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಕಮಾಯಿ ಮಾಡಿದೆ. ಅದಾಗಲೇ ಜೇಮ್ಸ್ ಚಿತ್ರ ಬಾಕ್ಸ್ ಆಫೀಸಿನಲ್ಲಿ 20 ಕೋಟಿಗೂ ಅಧಿಕ ಹಣ ಸಂಗ್ರಹಿಸಿ ದಾಖಲೆ ಬರೆದಿದೆ. ಜೇಮ್ಸ್ ಚಿತ್ರದ ಟಿವಿ ರೈಟ್ಸ್ ಕೂಡ ಸೇಲ್ ಆಗಿದೆ. 

ಕನ್ನಡ,ಮಲಯಾಳಂ ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಜೇಮ್ಸ್ ಚಿತ್ರದ ಪ್ರಸಾರದ ಹಕ್ಕನ್ನು ಪಡೆದುಕೊಂಡಿವೆ. ಸರಿ ಸುಮಾರು 80 ಕೋಟಿಗೂ ಅಧಿಕ ಹಣವನ್ನು ಕೊಟ್ಟು ಎಲ್ಲಾ ಭಾಷೆಗಳ ಟಿವಿ ರೈಟ್ ಸೇಲ್ ಆಗಿದೆ ಎಂದು ಸುದ್ದಿಯಾಗುತ್ತಿದೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ಎಲ್ಲಾ ಟಿಕೆಟ್ ಗಳು ಸೇಲ್ ಆಗಿ ದಾಖಲೆಯನ್ನು ಬರೆದಿತ್ತು. ನಂತರ ಕಾವೇರಿ ಥಿಯೇಟರ್ ನಲ್ಲಿ 5 ಸಾವಿರಕ್ಕೂ ಹೆಚ್ಚು ಟಿಕೆಟ್ ಗಳು ಸಲ್ ಆಗಿ ಕಮಾಯಿ ಮಾಡಿತ್ತು. ಇನ್ನು ನಿನ್ನೆ ಡಿ ಬಾಸ್ ದರ್ಶನ್, ಆಂಕರ್ ಅನುಶ್ರೀ, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಸೆಲೆಬ್ರಿಟಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಿ ಸಂಭ್ರಮಿಸಿದ್ದಾರೆ. 

ಫಸ್ಟ್ ಡೇ ಫಸ್ಟ್ ಶೊ ನೋಡಿ ಆಯ್ತು. ಆದರೂ ಸಮಾಧಾನವಾಗಲಿಲ್ಲ. ಮತ್ತೆ ನೋಡಬೇಕು ಅನಿಸ್ತಿದೆ. ಸಿನಿಮಾ ಹೇಗಿದೆ ಎಂಬುದು ಮುಖ್ಯವಲ್ಲ. ಚಿತ್ರದಲ್ಲಿ ಯಾರಿದ್ದಾರೆ ಎಂಬುದು ಬಹಳ ಮುಖ್ಯ. ನೀವೂ ಬಂದು ಸಿನಿಮಾ ನೋಡಿ ಎಂದು ನಿನ್ನೆ ಆಂಕರ್ ಅನುಶ್ರೀ ಅವರು ಹೇಳಿದ್ದರು. ಇನ್ನು ದರ್ಶನ್ ಅವರು ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಚಿತ್ರ ನೋಡಿ ಏನ್ ಹೇಳಿದ್ದಾರೆ ಎಂದು ತಿಳಿಯೋಣ ಬನ್ನಿ.. 

ಜೇಮ್ಸ್ ಚಿತ್ರ ನೋಡಿದ ದರ್ಶನ್  (Darshan)  ಅವರು ಮಾಧ್ಯಮದ ಜೊತೆ ಮಾತನಾಡಿ, ಪುನೀತ್ ರಾಜ್ ಕುಮಾರ್ (Puneeth Rajkumar) ಎಲ್ಲೂ ಹೋಗಿಲ್ಲ, ನಮ್ಮ ಜೊತೆಯಲ್ಲೇ ಇದ್ದಾರೆ. ನಮ್ಮಲ್ಲೇ ಸದಾ ಇರುತ್ತಾರೆ. ಜೇಮ್ಸ್ ಸಿನಿಮಾದಲ್ಲಿ ಅಪ್ಪು ಅದ್ಭುತವಾಗಿ ನಟಿಸಿದ್ದಾರೆ. ಎಲ್ಲರೂ ತಪ್ಪದೆ ಜೇಮ್ಸ್ ಸಿನಿಮಾವನ್ನು ಥಿಯೇಟರ್ ಗೇ ಬಂದು ನೋಡಿ ಎಂದು ದರ್ಶನ್ ಅವರು ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಚಿತ್ರ ನೋಡಿ ಅಭಿಮಾನಿಗಳಿಗೂ ಸಿನಿಮಾ ನೋಡುವಂತೆ ಹೇಳಿದ್ದಾರೆ.