ದಾಸ ಪುರಂದರ ಧಾರಾವಾಹಿಯಲ್ಲಿ ಶ್ರೀನಿ ಪಾತ್ರ ಮಾಡಲು ತ್ಯಾಗಗಳೇನು ಗೊತ್ತಾ..?

By Infoflick Correspondent

Updated:Tuesday, August 2, 2022, 09:03[IST]

ದಾಸ ಪುರಂದರ ಧಾರಾವಾಹಿಯಲ್ಲಿ ಶ್ರೀನಿ ಪಾತ್ರ ಮಾಡಲು ತ್ಯಾಗಗಳೇನು ಗೊತ್ತಾ..?

ದಾಸ ಪುರಂದರ ಧಾರಾವಾಹಿ ಶುರುವಾಗಿ ನಾಲ್ಕು ತಿಂಗಳಾಗಿದೆ. ಧಾರಾವಾಹಿ ಅದ್ಭಿತವಾಗಿ ಮೂಡಿ ಬರುತ್ತಿದ್ದು, ಸೀರಿಯಲ್ ನಲ್ಲಿ ಶ್ರೀನಿವಾಸನ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸಣ್ಣ ವಯಸ್ಸಿನ ಶ್ರೀನಿವಾಸ ಪಾತ್ರದಷ್ಟೇ ಅದ್ಭುತವಾಗಿ ಫ್ರೌಢಾವಸ್ತೆಯ ಶ್ರೀನಿ ಅಭಿನಯ ಕೂಡ ಚೆನ್ನಾಗಿದೆ. ಈ ಧಾರಾವಾಹಿಯಲ್ಲಿ ನಟಿಸುಗತ್ತಿರುವ ಎಲ್ಲಾ ಪಾತ್ರಧಾರಿಗಳು ಬಹುತೇಕ ರಂಗಭೂಮಿ ಕಲಾವಿದರಿದ್ದಾರೆ. ಇನ್ನು ಶ್ರೀನಿ ಪಾತ್ರ ಮಾಡುತ್ತಿರುವವರೂ ಕೂಡ ಮೂಲತಃ ರಂಗಭೂಮಿ ಕಲಾವಿದರು. ಇವರ ಹೆಸರು ದೀಪಕ್ ಸುಬ್ರಹ್ಮಣ್ಯ. ಸುಮಾರು 20 ವರ್ಷಗಳಿಂದ ರಂಗಭೂಮಿಯಲ್ಲಿರುವ ಇವರು ಈ ಧಾರಾವಾಹಿಗೋಸ್ಕರ ಹಲವು ತ್ಯಾಗಗಳನ್ನು ಮಾಡಿದ್ದಾರೆ.     

ರಂಗಭೂಮಿಯಲ್ಲಿ ಹಲವು ನಾಟಕಗಳಲ್ಲಿ ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿದ್ದಾರಂತೆ. ದಾಸ ಪುರಂದರ ಧಾರಾವಾಹಿಗೂ ಮುನ್ನ ಬೇರೊಂದು ನಾಟಕಕ್ಕಾಗಿ ಚೆನ್ನಾಗಿ ತಿಂದು ದೀಪಕ್ ಅವರು ಸುಮಾರು 94 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರಂತೆ. ದಾಸ ಪುರಂದರ ಧಾರಾವಾಹಿಗಾಗಿ ಸತತ 9 ತಿಂಗಳ ಕಾಲ ತಯಾರಿ ನಡೆಸಿದ್ದಾರಂತೆ. ಈ ಪಾತ್ರಕ್ಕಾಗಿ ದೀಪಕ್ ಅವರು ತಮ್ಮ ಜೀವನ ಶೈಲಿಯಲ್ಲಿ, ಆಹಾರ ಕ್ರಮದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರಂತೆ. ಕಳೆದ 9 ತಿಂಗಳಿನಿಂದ ದೀಪಕ್ ಅವರು ಕೇವಲ ಒಪ್ಪೊತ್ತಿನ ಊಟ ಮಾಡುತ್ತಿದ್ದಾರಂತೆ.

ಹೌದು. ನಿತ್ಯ ದೀಪಕ್ ಅವರು ಒಂದೇ ಹೊತ್ತು ಊಟ ಮಾಡುತ್ತಾರಂತೆ. ಶ್ರೀನಿವಾಸನ ಪಾತ್ರಕ್ಕೆ ನ್ಯಾಯ ಒದಗಿಸುವ ಸಲುವಾಗಿ, ಸಣ್ಣಗಾಗಿ 20-22 ವರ್ಷದ ಯುಕವನಂತೆ ತಮ್ಮ ಲುಕ್ ಅನ್ನು ಬದಲಿಸಿಕೊಂಡಿದ್ದಾರಂತೆ. ನಿತ್ಯ ಬೆಳಗ್ಗೆ 4.30ಗೆ ಎದ್ದು, ತಮ್ಮ ದಿನಚರಿಯನ್ನು ಶುರು ಮಾಡುತ್ತಾರಂತೆ. ಡಾ ರಾಜ್‌ಕುಮಾರ್, ಅಶ್ವತ್ಥ್ ಸೇರಿದಂತೆ ದಿಗ್ಗಜರು ಪುರಂದರ ದಾಸರ ಪಾತ್ರವನ್ನು ಮಾಡಿದ್ದರು. ಅಂತಹ ಪಾತ್ರವನ್ನು ನಾನು ಇಂದು ಮಾಡುತ್ತಿದ್ದೇನೆ. ಇದು ನನ್ನ ಭಾಗ್ಯವೇ ಹೌದು, ಇಂತ ಪಾತ್ರ ಸಿಗುತ್ತದೆ ಎಂದು ನಾನೆಂದೂ ನಿರೀಕ್ಷೆಯೇ ಮಾಡಿರಲಿಲ್ಲ ಎಂದು ದೀಪಕ್ ಹೇಳಿದ್ದಾರೆ. ( video credit : south samachara )