ನಡೆಯಬಾರದ ಘಟನೆ ನಡೆದು ಹೋಗಿದೆ: ಸಂಚಾರಿ ವಿಜಯ್ ಬಗ್ಗೆ ಡಿಸಿಎಂ ಮಾತು..

Updated: Monday, June 14, 2021, 12:46 [IST]

    

ಶನಿವಾರ ತಡರಾತ್ರಿ ಬೈಕ್ ಅಪಘಾತದಲ್ಲಿ ಮೆದುಳಿಗೆ ಗಂಭೀರವಾಗಿ ಗಾಯಗೊಂಡು ನಟ ಸಂಚಾರಿ ವಿಜಯ್ ಆಸ್ಪತ್ರೆ ಸೇರಿದ್ದರು. ಅಪಘಾತದಲ್ಲಿ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು,  

ಕಳೆದ 36 ಗಂಟೆಗಳಿಂದ ಸಂಚಾರಿ ವಿಜಯ್ ಚಿಕಿತ್ಸೆಗೆ ಸ್ಪಂದಿಸದ ಕಾರಣ ಇದೀಗ ಅವರು ಮೃತಪಟ್ಟಿದ್ದಾರೆ. 
ಹೀಗಿರುವಾಗ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಚಿಕಿತ್ಸಾ ವೆಚ್ಚವನ್ನು ನಾವು ಭರಿಸುತ್ತೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ.    

ನಟ ಸಂಚಾರಿ ವಿಜಯ್ ಅವರ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನ ಡಾ.ಆಶ್ವಥ್ ನಾರಾಯಣ್ ಫೌಂಡೇಶನ್ ಭರಿಸಲಿದೆ. ನಡೆಯಬಾರದ ಘಟನೆ ನಡೆದಿದೆ, ಅವರು ಬಹುಬೇಗ ಗುಣಮುಖರಾಗಿ ಬರಲಿ. ವಿಜಯ್ ಅವರ ಸಂಪೂರ್ಣ ವೆಚ್ಚವನ್ನ ನಾವೇ ನೋಡಿಕೊಳ್ಳುತ್ತೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ. 
ಸರ್ಕಾರದ ಸಹಾಯಕ್ಕೆ ಸಂಚಾರಿ ವಿಜಯ್ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ. ಸಂಚಾರಿ ವಿಜಯ್ ಅವರು ಸದ್ಯ ಸಂಪೂರ್ಣ ಜೀವರಕ್ಷಕದ ನೆರವಿನಲ್ಲಿದ್ದಾರೆ. ಅವರು ಉಸಿರಾಡುವುದನ್ನೂ ನಿಲ್ಲಿಸಿದ್ದಾರೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದರು. ಆಸ್ಪತ್ರೆಯಲ್ಲಿ ನ್ಯೂರೋ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಕೊಡಲಾಗಿತ್ತು.