ಅಭಿಮಾನಿಗಳಲ್ಲಿ ಡಾಲಿ ಮನವಿಮಾಡಿ ಕ್ಷಮೆ ಕೇಳಿದ್ದು ಏಕೆ! ಇಲ್ಲಿದೆ ಮಹತ್ವದ ಮಾತುಗಳು

By Infoflick Correspondent

Updated:Monday, August 22, 2022, 19:31[IST]

ಅಭಿಮಾನಿಗಳಲ್ಲಿ ಡಾಲಿ ಮನವಿಮಾಡಿ ಕ್ಷಮೆ ಕೇಳಿದ್ದು ಏಕೆ! ಇಲ್ಲಿದೆ ಮಹತ್ವದ ಮಾತುಗಳು

ನಟ ರಾಕ್ಷಸ ಡಾಲಿ ಧನಂಜಯ ಇದೇ ಮಂಗಳವಾರ ( ಆ.23 ರಂದು) 36 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅವರ ಹುಟ್ಟುಹಬ್ಬ ಪ್ರತಿವರ್ಷ ಜೋರಾಗಿ ನಡೆಯುತ್ತದೆ. ಆದರೆ 2 ವರ್ಷದಿಂದ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.  ಈ ಬಾರಿಯೂ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ ಹಾಗಾಗಿ ಅಭಿಮಾನಿಗಳಿಗೆ ಮುಖ್ಯವಾದ ಮಾತುಗಳನ್ನು ಹೇಳಿ ಮನವಿ ಮಾಡಿಕೊಂಡಿದ್ದಾರೆ.ಪುನೀತ್ ರಾಜ್​ಕುಮಾರ್  ಅವರ ಅಗಲಿಕೆ ನೋವಿನಲ್ಲಿರೋ ​ ಇಡೀ ಸ್ಯಾಂಡಲ್​ವುಡ್ ಅವರ ಸ್ಮರಣಾರ್ಥ  ಅನೇಕ ನಟ-ನಟಿಯರು ಈ ವರ್ಷ ತಮ್ಮ ಹುಟ್ಟುಹಬ್ಬ ಆಚರಿಕೊಂಡಿಲ್ಲ, ಈ ಸಾಲಿಗೆ ಇದೀಗ ಧನಂಜಯ್​ ಅವರು ಸೇರಿದ್ದಾರೆ. ಹಾಗಾಗಿ ತಮ್ಮ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.  

ನನ್ನ ಅಭಿಮಾನಿಗಳು, ಪ್ರೀತಿ ಪಾತ್ರರೆಲ್ಲರಿಗೂ ನಮಸ್ಕಾರ. ಬಹಳ ಖುಷಿಯಾಗುತ್ತದೆ. ನನ್ನ ಹುಟ್ಟುಹಬ್ಬ ಕೆಲ ದಿನಗಳು ಇರುವಾಗ್ಲೆ ಅಭಿಮಾನಿಗಳಿ ಸೆಲೆಬ್ರೆಷನ್ ಶುರು ಮಾಡುತ್ತೀರಾ. ಈಗಾಗಲೇ ಬೆಂಗಳೂರಿನಲ್ಲೂ ರಕ್ತದಾನ ಶಿಬಿರ, ನೇತ್ರದಾನ ನೋಂದಣಿ ಶಿಬಿರ ಎಲ್ಲಾ ನಡೆಸಿದ್ರೆ, ಬೆಳಗಾವಿ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ನಡೆಸಿದ್ದೀರಾ. ನನಗೂ ನಿಮ್ಮ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಲು ಆಸೆ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣ ಸೆಲೆಬ್ರೇಟ್ ಮಾಡಲು ಸಾಧ್ಯವಾಗಲಿಲ್ಲ.

ಈ ವರ್ಷ ಕೂಡ ಬರ್ತ್‌ಡೇ ಸೆಲೆಬ್ರೆಷನ್ ಮಾಡುವ ಪರಿಸ್ಥಿತಿಯಲ್ಲಿ ನಾನು ಕೂಡ ಇಲ್ಲ. ನಮ್ಮ ನಾಡು ಕೂಡ ಇಲ್ಲ. ಯಾಕೆಂದರೆ ಅಪ್ಪು ಅವರು ನಮ್ಮನ್ನು ಅಗಲಿ ಇನ್ನು ವರ್ಷ ಕೂಡ ಆಗಿಲ್ಲ. ಶಿವಣ್ಣ ಸೇರಿದಂತೆ ಯಾರು ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಕೊರೊನಾ ಕಾರಣಕ್ಕೆ 2 ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಹಾಗಾಗಿ ಈ ವರ್ಷ ಕೂಡ ಬರ್ತ್‌ಡೇ ಆಚರಣೆ ಇರಲ್ಲ. ಹೇಗೆ ಎರಡು ವರ್ಷ ಕ್ಷಮಿಸಿ ಪ್ರೀತಿಸಿದ್ರೋ ಹಂಗೆ ಈ ವರ್ಷ ಕೂಡ ಕ್ಷಮಿಸಿ. ಮುಂದಿನ ವರ್ಷ ಎಲ್ಲರೂ ಸೇರಿ ಬರ್ತ್‌ಡೇ ಆಚರಿಸೋಣ ಎಂದು ಧನಂಜಯ ಹೇಳಿದ್ದಾರೆ.

ಈ ವರ್ಷ ಬರ್ತ್‌ಡೇ ಆಚರಣೆ ಇರಲ್ಲ. ನಾನು ಸಹ ಬೆಂಗಳೂರಿನಲ್ಲಿ ಇರುವುದಿಲ್ಲ. ಮನೆ ಬಳಿ ಸಿಗುವುದಕ್ಕೂ ಆಗುವುದಿಲ್ಲ. ನಾನು ಆ ದಿನ ಸ್ನೇಹಿತರ ಜೊತೆ ಹೊರಗೆ ಹೋಗುತ್ತಿದ್ದೇನೆ. ಖಂಡಿತ ಹುಟ್ಟುಹಬ್ಬ ಮುಗಿದ ಮೇಲೆ ಯಾವುದಾದರೂ ಕಾರ್ಯಕ್ರಮದಲ್ಲಿ ಎಲ್ಲರೂ ಸಿಗೋಣ. ಥ್ಯಾಂಕ್ಯೂ ಎಂದು ಅಭಿಮಾನಿಗಳಿಗೆ ನಟ ಧನಂಜಯ್ ಹೇಳಿದ್ದಾರೆ. 

ಮುಂದಿನ ವರ್ಷ ಒಳ್ಳೆ ಕೆಲಸಗಳ ಮೂಲಕ ಹುಟ್ಟುಹಬ್ಬ ಆಚರಿಸೋಣ. ನಾನು ಕೂಡ ನಿಮ್ಮ ಜೊತೆ ನಿಮ್ಮ ಜೊತೆ ಸೇರಿಕೊಳ್ಳುತ್ತೇನೆ. ಹಾಗಾಗಿ ಈ ವರ್ಷ ಎಲ್ಲಿದ್ದಿರೋ ಅಲ್ಲಿಂದಲೇ ಶುಭಾಶಯ ಕೋರಿ. ನನ್ನ ಹುಟ್ಟುಹಬ್ಬಕ್ಕೆ ತರುತ್ತಿದ್ದ ಕೇಕ್, ಹಾರ, ಶಾಲೂ ಮತ್ತೊಂದು ಎಲ್ಲದಕ್ಕೂ ಖರ್ಚು ಮಾಡುತ್ತಿದ್ದ ದುಡ್ಡಲ್ಲಿ ಒಂದಿಷ್ಟು ಅವಶ್ಯಕ ಇರುವ ಜೀವಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ. ಅದರ ಮೂಲಕ ಹುಟ್ಟುಹಬ್ಬ ಆಚರಿಸೋಣ. ಅವರ ಪ್ರಾರ್ಥನೆಗಳು ನನ್ನನ್ನು ಕಾಯುತ್ತದೆ. ನಿಮ್ಮನ್ನು ಕಾಯುತ್ತದೆ. ಅಭಿಮಾನಿಗಳಿಗೆ ವೀಡಿಯೋ ಸಂದೇಶ್​ ಕಳುಹಿಸಿದ್ದಾರೆ.