ರಸ್ತೆಯಲ್ಲೇ ಅಂದು ಬಟ್ಟೆ ಬದಲಾಯಿಸುತ್ತಿದ್ದರಂತೆ ಡಾಲಿ..! ಕ್ಯಾರವಾನ್ ನಲ್ಲಿ ಧನಂಜಯ್ ನೆನಪು

By Infoflick Correspondent

Updated:Tuesday, September 13, 2022, 13:27[IST]

ರಸ್ತೆಯಲ್ಲೇ ಅಂದು ಬಟ್ಟೆ ಬದಲಾಯಿಸುತ್ತಿದ್ದರಂತೆ ಡಾಲಿ..! ಕ್ಯಾರವಾನ್ ನಲ್ಲಿ ಧನಂಜಯ್ ನೆನಪು

ಸಿನಿಮಾರಂಗದಲ್ಲಿ ಸ್ಟಾರ್ ನಟ ನಟಿಯರಿಗೆ ಇಂದಿನ ಕಾಲಕ್ಕೆ ನಾವು ನೋಡುವುದಾದರೆ ಅವರು ನಟನೆ ಮಾಡಲಿಕ್ಕೆ ಶೂಟಿಂಗ್ ಸೆಟ್ಟಿಗಾಗಿ ತೆರಳುತ್ತಿದ್ದಾರೆ ಎಂದರೆ ಅಲ್ಲಿ ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕೂಡ ಮಾಡಿಕೊಡಲಾಗುತ್ತದೆ. ಈ ಹಿಂದೆ ಸಿನಿಮಾಗಳ ಶೂಟಿಂಗ್ ಸೆಟ್ ನಲ್ಲಿ ಹಾಗಿರುತ್ತಿರ್ಲಿಲ್ಲ. ಹೆಚ್ಚು ಕಮ್ಮಿ ಯಾವ ವ್ಯವಸ್ಥೆ ಇರುತ್ತಿರಲಿಲ್ಲ. ಹೊಂದಾಣಿಕೆ ಮೇಲೆ ಆಗಿ ಹೋಗುತ್ತಿತ್ತು. ಆದ್ರೆ ಈಗ ಹಾಗಿಲ್ಲ. ಸಿನಿಮಾರಂಗ ಬೆಳೆದಿದೆ. ಹೌದು ಸಿನಿಮಾದ ಶೂಟಿಂಗ್ ಆರಂಭ ಆಗುವ ಮುನ್ನ ಅಥವಾ ಸಿನಿಮಾದ ಬಿಡುವಿನ ಸಮಯದಲ್ಲಿ ಬಹುತೇಕ ಸ್ಟಾರ್ ನಟರು ಕ್ಯಾರವಾನ್ ಗಳನ್ನು ಬಳಸುತ್ತಾರೆ. ಅಂದರೆ ಈ ಕ್ಯಾರವಾನ್ ಎಲ್ಲಾ ನಟರ ಬಳಿಯೂ ಇರುವುದಿಲ್ಲ. ಇದು ಪ್ರೋಡಕ್ಷನ್ ಅವರ ಕಡೆಯಿಂದಲೇ ಸಿನಿಮಾ ಶೂಟಿಂಗ್ ಇದ್ದಾಗ ಕ್ಯಾರವಾನ್ ಸ್ಟಾರ್ ನಟರಿಗಾಗಿ ತರಿಸುತ್ತಾರೆ.

ಹೌದು, ಕನ್ನಡ ಸಿನಿರಂಗದಲ್ಲಿ ನಟ ದರ್ಶನ್, ಸುದೀಪ್, ಹಾಗೆ ಶಿವಣ್ಣ ಮತ್ತು ಬಹುತೇಕ ಅಷ್ಟ ನಟರು ಎಲ್ಲರೂ ಕೂಡ ಶೂಟಿಂಗ್ ಇದ್ದಾಗ ಕ್ಯಾರವಾನ್ ಅನ್ನ ಬಳಸುತ್ತಾರೆ. ಅಂದರೆ ಕ್ಯಾರವಾನ್ ಒಳಗೆನೇ ಒಂದಕ್ಕೆ ಹೋಗುವುದಕ್ಕೆ, ಅಥವಾ ಬಾತ್ ರೂಮ್ ಸೌಲಭ್ಯ ಸಹ ಇರುತ್ತದೆ. ಅಲ್ಲಿಯೇ ಡ್ರೆಸ್ ಹಾಕಿಕೊಳ್ಳುವುದಕ್ಕೆ, ಮೇಕಪ್ ಮಾಡಿಕೊಳ್ಳುವುದಕ್ಕೆ ಕುಳಿತು ವಿಶ್ರಾಂತಿ ಪಡೆಯುವುದಕ್ಕೆ, ಸಮಯ ಇದ್ದಲ್ಲಿ ಇನ್ನು ಹೆಚ್ಚು ವಿಶ್ರಾಂತಿ ಪಡೆಯಲಿಕ್ಕೆ ಈ ಕ್ಯಾರವನ್ ಉಪಯೋಗ ಆಗುತ್ತದೆ ಎನ್ನಬಹುದು..ಹೌದು ನಟ ದರ್ಶನ್ ಆಗಲಿ ಅಥವಾ ಶಿವಣ್ಣ ಅವರದ್ದಾಗಲಿ ಯಾವುದೇ ಸ್ಟಾರ್ ನಟರ ಬಳಿ ಸ್ವಂತದ್ದು ಎಂಬುದು ಕ್ಯಾರವಾನ್ ಇಲ್ಲ. ಬದಲಿಗೆ ಅದು  ಅವಶ್ಯಕತೆ ಮಾತ್ರ ಸಿನೆಮಾ ಶೂಟಿಂಗ್ ಇದ್ದಾಗ ಪ್ರೊಡಕ್ಷನ್ ನವರೇ ಅಲ್ಲಿಗೆ ಕ್ಯಾರವಾನ್ ತರಿಸುತ್ತಾರೆ ಎಂದು ಇದರ ಬಗ್ಗೆ ಮಾತನಾಡಿದ ಡಾಲಿ ಆರಂಭದಲ್ಲಿ ನಾನು ರಸ್ತೆಗಳಲ್ಲಿಯೇ ಡ್ರೆಸ್ ಬದಲಿಸಿಕೊಂಡು ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತಿದ್ದೆ.    

ಇದೀಗ ಹಂತ ಹಂತವಾಗಿ ಸ್ವಲ್ಪ ಬದಲಾಗಿದೆ. ಇನ್ನೂ ಕೂಡ ಸಾಧನೆ ಮಾಡುವುದು ತುಂಬಾ ಇದೆ. ಇನ್ನೂ ಬೆಳೆಯಬೇಕು. ಆಗ ನನ್ನ ಶೂಟಿಂಗ್ ವೇಳೆ ಕೆಲವರು ಹೇಳುತ್ತಿದ್ದರು. ನೀನು ಕ್ಯಾರವಾನ್ ಕೇಳಬೇಕು ಎಂದು, ನಾನು ಅವರಿಗೆ ಆಗ ಹೇಳುತ್ತಿದ್ದೆ ನಾವೇ ಕೇಳಿ ಪಡೆಯಬಾರದು ನಾವು ಮಾಡುವ ಕೆಲಸದಿಂದ ಅದೇ ನಮ್ಮನ್ನು ಹುಡುಕಿಕೊಂಡು ಬರಬೇಕು ಎಂದು ಹೇಳುತ್ತಿದ್ದೆ. ಅದರಂತೆ ಈಗ ಯಾವುದೇ ಸಿನಿಮಾ ಶೂಟಿಂಗ್ ಇದ್ದರೂ ಕ್ಯಾರವನ್ನು ಬಳಸುತ್ತೇನೆ.. ಹಾಗೆ ಇನ್ನು ಎತ್ತರಕ್ಕೆ ಬೆಳೆಯಬೇಕು ನನ್ನ ಬಳಿ ಯಾವುದೇ ಕ್ಯಾರವಾನ್ ಇಲ್ಲ. ಒಂದು ಕಾರು ಇದೆ ಅಷ್ಟೇ ಎಂದು ತುಂಬಾ ಮುಕ್ತವಾಗಿ ಮಾತನಾಡಿದ್ದಾರೆ ಡಾಲಿ. ಇಲ್ಲಿದೆ ನೋಡಿ ಧನಂಜಯ್ ಅವರು ಮಾತನಾಡಿದ ವಿಡಿಯೋ. ಹಾಗೆ ಈ ಕ್ಯಾರವಾನ್ ನ ಒಳಾಂಗಣ ದೃಶ್ಯ ಹೇಗಿದೆ ಎಂದು ವಿಡಿಯೋ ನೋಡಿದ ಬಳಿಕ ಕಮೆಂಟ್ ಮಾಡಿ, ಧನ್ಯವಾದಗಳು...