ಜನತೆಗೆ ಶಾಕ್ ನೀಡಿ ಬಿಗ್ಗ್ ಬಾಸ್ ಜೊಡಿಯಾದ ಶಮಂತ್ ಹಾಗು ಧನುಶ್ರೀ!! ಏನು ನೋಡಿ

By Infoflick Correspondent

Updated:Friday, April 15, 2022, 20:26[IST]

ಜನತೆಗೆ ಶಾಕ್ ನೀಡಿ ಬಿಗ್ಗ್ ಬಾಸ್  ಜೊಡಿಯಾದ ಶಮಂತ್ ಹಾಗು ಧನುಶ್ರೀ!! ಏನು ನೋಡಿ

ಬಿಗ್ ಬಾಸ್ ಮನೆಯಲ್ಲಿ ಗೆಳೆತನ,‌ಸಂಬಂಧ, ಒಳ್ಳೆಯ ಬಾಂಧವ್ಯ ಆಗುತ್ತದೆ. ಉದಾಹರಣೆಗೆ ನಿವೇದಿತಾ-ಚಂದನ್, ಮಂಜು ಪಾವಗಡ-ದಿವ್ಯಾ, ಅರವಿಂದ-ದಿವ್ಯಾ,  ಹೀಗೆ ಹೆಸರುಗಳ ಪಟ್ಟಿ ಹೇಳಬಹುದು. ಹಾಗೆ ಈಗ ಬಿಗ್ ಬಾಸ್ 8 ರಸ್ಪರ್ಧಿ ಧನುಶ್ರೀ ಹಾಗೂ ಬಿಗ್ ಬಾಸ್ ಖ್ಯಾತಿಯ ಶಮಂತ ಇಬ್ಬರು ಸೇರಿ ಹೊಸ ಜೀವನ ಪ್ರಾರಂಭಿಸುತ್ತಿದ್ದಾರೆ. 

ಶಮಂತ್ ಮಾತ್ರ ಅದೃಷ್ಟಕ್ಕೆ ಮತ್ತೊಂದು ಹೆಸರೇ ಶಮಂತ್ ಎನ್ನಬಹುದು.ಮೊದಲ ಕೆಲ ವಾರಗಳಲ್ಲಿಯೇ ಮನೆಯಿಂದ ಹೊರ ಹೋಗಬೇಕಿದ್ದ ಶಮಂತ್ ಸಾಕಷ್ಟು ಅವಕಾಶಗಳನ್ನು ಪಡೆದು ಕೊನೆಯ ವಾರದವರೆಗೂ ಉಳಿದುಕೊಂಡರು. ಧನುಶ್ರೀ ನನ್ನ ಡೇಟ್ಸ್ ಬೇಕು ಎಂದರೆ ಮ್ಯಾನೇಜರ್ ಅನ್ನು ಕೇಳಿ ದು ಬಿಲ್ಡಪ್ ತೆಗೆದುಕೊಳ್ಳುತ್ತಿದ್ದ ಧನುಶ್ರೀ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದೂ ಉಂಟು.. ಸಾಕಷ್ಟು ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದೇನೆ ಎಂದಿದ್ದರು.. ಆದರೀಗ ಇದ್ದಕಿದ್ದ ಹಾಗೆ ಶಮಂತ್ ಜೊತೆ ಕಾಣಿಸಿಕೊಂಡಿದ್ದಾರೆ..  

ಬಿಗ್ ಬಾಸ್ ಗೆ ಆಗಮಿಸಿ ಮೊದಲ ವಾರವೇ ಎಲಿಮಿನೇಟ್ ಆಗಿ ಮನೆಗೆ ಹೋದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಹಾಡಿನ ಮೂಲಕ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಜನಮನ ಗೆದ್ದ ಶಮಂತ್, ಬಿಗ್ ಬಾಸ್ ನಂತರ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಳ್ಳದೆ ಈಗ ಇಬ್ಬರೂ ಜೊಡಿಯಾಗಿರುವುದು ವಿಶೇಷ. 

ಧನುಶ್ರೀ ಹಾಗೂ ಶಮಂತ್ ಇಬ್ಬರು ಒಟ್ಟಾಗಿ ಕಿರುತೆರೆ ಜರ್ನಿ ಆರಂಭಿಸಿದ್ದಾರೆ.ಇಬ್ಬರೂ ಸೇರಿ ಜೊಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಧನುಶ್ರೀ ಮತ್ತು ಶಮಂತ್ ಹೊಸ ಶೋನಲ್ಲಿ ಮತ್ತೆ ಒಂದಾಗಿ ನಟಿಸಲಿದ್ದಾರೆ. 

ಖಾಸಗಿ ವಾಹಿನಿಯಾದ ಸುವರ್ಣ ವಾಹಿನಿಯ ಗಾನ ಬಜಾನ ಶೋ ಇದೀಗ ಮತ್ತೆ ಆರಂಭವಾಗುತ್ತಿದೆ. ನಿರೂಪಕ ನಿರಂಜನ್ ಕಾರ್ಯಕ್ರಮ ನಡೆಸಿಕೊಟ್ಟರೇ, ಶಮಂತ್ ಹಾಗೂ ದನುಶ್ರೀ ಒಟ್ಟಾಗಿ ಈ ಶೋನಲ್ಲಿ ಕಾಣಿಸಲಿದ್ದಾರೆ. ಇವರಿಬ್ಬರ ಕಿರುತೆರೆಯ ಜರ್ನಿಯನ್ನು ಕಂಡು ಕೆಲವರು ಎಲ್ಲ ಬಿಟ್ಟು ರೀಲ್ಸ್ ಮಾಡುವ ಧನುಶ್ರೀ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ. ಮತ್ತೆ ಮತ್ತೆ ಕೆಲವರು ಇವರಿಬ್ಬರ ಈ ಜರ್ನಿಗೆ ಶುಭಕೋರಿ ಹಾರೈಸಿದ್ದಾರೆ.